ಕನ್ನಡದ ಶ್ರೀಮಂತ ನಟಿಯರು ಯಾರು ಗೊತ್ತಾ? ಬನ್ನಿ ಸ್ನೇಹಿತರೆ ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ನಮ್ಮ ಕನ್ನಡ ನಟಿಯರು ಬರಿ ಕನ್ನಡದಲ್ಲಿ ಬೇರೆ ಭಾಷೆಯಲ್ಲೂ ಕೂಡ ನಟಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಂತಾನೆ ಹೇಳಬಹುದು. ಹತ್ತನೇ ಸ್ಥಾನದಲ್ಲಿ ಆಶಿಕಾ ರಂಗನಾಥ್ ಅವರು ಕಾಣಿಸಿಕೊಳ್ಳುತ್ತಾರೆ. ಯಾವುದೇ ಸಿನಿಮಾದಲ್ಲಿ ಹೀರೋನ ಜೊತೆ ನಟಸೇ ಇದ್ರು ಕೂಡ ಇವರು ಕನ್ನಡದಲ್ಲಿ ತುಂಬಾ ಬೇಡಿಕೆಯ ನಟಿಯಾಗಿದ್ದಾರೆ. 2016ರಲ್ಲಿ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದವರು ಇವರ ಮೊದಲ ಸಿನಿಮಾ ಕ್ರೇಜಿಬಾಯ್.

ಇವರು ರಾಂಬೊ 2 ಸಿನಿಮಾ ಮೂಲಕ ಸಕ್ಕತ್ ಫೇಮಸ್ ಆಗ್ತಾರೆ. ಲೀಡಿಂಗ್ ರೋಲ್ ವಿಭಾಗದಲ್ಲಿ ಸೈನ್ ಅವಾರ್ಡ್ ಕೂಡ ಪಡೆದುಕೊಳ್ಳುತ್ತಾರೆ. ಇವರು ಈಗ ಕನ್ನಡದಿಂದ ಅಷ್ಟೇ ಅಲ್ಲ ತೆಲುಗು ರಂಗಕ್ಕೂ ಕೂಡ ಹೋಗಿದ್ದಾರೆ ಅಲ್ಲಿ ಕೂಡ ಮುಂದೆ ಮಿಂಚುವ ಸಾಧ್ಯತೆ ಇದೆ. 2 ಆಸ್ತಿ ವಿಚಾರಕ್ಕೆ ಬರುವುದಾದರೆ 20 ಕೋಟಿ ರೂಪಾಯಿಯ ಆಸ್ತಿ ಇವರತ್ರ ಇದೆಯಂತೆ. ಇನ್ನು 9ನೇ ಸ್ಥಾನದಲ್ಲಿ ಇರುವವರು ಬಾಲ ನಟಿಯಾಗಿ ಹಾಗೂ ಚಿತ್ರ ನಟಿಯಾಗಿ ಸಿನಿಮಾ ರಂಗದಲ್ಲಿ ಎರಡು ಕಡೆ ಗೆಲುವು ಕಂಡಂತಹ ನಟಿ ಅಮೂಲ್ಯ ಅವರು.

ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ನಾಯಕ ನಟಿಯನ್ನು ಹೆಗ್ಗಳಿಕೆ ಕೂಡ ಅವರ ಪಾಲಿಗೆ ಇದೆ. ಸಿನಿಮಾರಂಗದಲ್ಲಿರುವ ಬಹುತೇಕ ಎಲ್ಲಾ ಸ್ಟಾರ್ಗಳ ಜೊತೆನೂ ಕೂಡ ಅಮೂಲ್ಯ ಅವರು ಆಕ್ಟ್ ಮಾಡಿದ್ದಾರೆ. ಇನ್ನು ಆಸ್ತಿ ವಿಚಾರಕ್ಕೆ ಹೊರಟ್ರೆ ಅಮೂಲ್ಯ ಅವರ ಹೆಸರಿನಲ್ಲಿ 25 ಕೋಟಿ ರೂಪಾಯಿಯ ಆಸ್ತಿ ಇದೆ ಅಂತ ಹೇಳಲಾಗುತ್ತಿದೆ. ಈ ಲಿಸ್ಟ್ ನ 8ನೇ ಸ್ಥಾನದಲ್ಲಿ ಇರುವ ನಟಿ ಎಂದರೆ ಒಂದು ಕಾಲದಲ್ಲಿ ಮಿಂಚಿದ ನಕ್ಷತ್ರ ಅಂತಾನೆ ಹೇಳಬಹುದು ಅವರೇ ಇವರು ರಕ್ಷಿತಾ ಪ್ರೇಮ್. ಅವರು ಈಗ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಬಂದಿದ್ದಾರೆ.

ಇನ್ನು ಇವರ ಆಸ್ತಿ ವಿಚಾರಕ್ಕೆ ಬಂದರೆ ಇವರು 30 ಕೋಟಿ ರೂಪಾಯಿಯ ಆಸ್ತಿಯನ್ನು ಹೊಂದಿದ್ದಾರೆ ಅಂತ ಹೇಳಲಾಗುತ್ತಿದೆ. ಇನ್ನು 7ನೇ ಸ್ಥಾನದಲ್ಲಿ ಇರುವ ಶ್ರೀಮಂತ ನಟಿ ಎಂದರೆ ಹರಿಪ್ರಿಯ ಅವರು. ಇವರು ಕನ್ನಡದಲ್ಲಿ ದೊಡ್ಡ ಸೌಂಡ್ ಮಾಡಿದ್ದು ಉಗ್ರಂ ಸಿನಿಮಾ ಮೂಲಕ. ಆಮೇಲೆ ಹಿಂತಿರುಗಿ ನೋಡಲೇ ಇಲ್ಲ ಈಗಲೂ ಕೂಡ ಟಾಪ್ ಆಗಿ ಇರುವಂತ ನಟಿ ಇವರು ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ ಇನ್ಸ್ಟಾಗ್ರಾಮ್ ಇದೆ. ಯೂಟ್ಯೂಬ್ ಚಾನೆಲ್ ಇದೆ. ಇನ್ನು ಇವರ ಆಸ್ತಿ ವಿಚಾರಕ್ಕೆ ಬಂದರೆ ಇವರು ಕೂಡ 30 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸ್ನೇಹಿತರೆ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *