ನಮಸ್ತೆ ಪ್ರಿಯ ಓದುಗರೇ, ಒಂದುವೇಳೆ ನೀವು ನಿಮಗೆ ನಿಮ್ಮ ಮನೆಯವರ ಒಳ್ಳೆಯದನ್ನು ಬಯಸುತ್ತಿದ್ದರೆ ನಿಮ್ಮ ಮನೆಯ ತುಳಸಿ ಕುಂಡದ ಬಳಿ ಅಥವಾ ಗಿಡದ ಜೊತೆ ನಾವು ಹೇಳುವ ಈ ಐದು ವಸ್ತುಗಳನ್ನು ಇಡಬೇಡಿ. ಒಂದುವೇಳೆ ಇಟ್ಟರೆ ನಿಮ್ಮ ಜೀವನದಲ್ಲಿ ತುಂಬಾ ಕೆಟ್ಟ ಪರಿಣಾಮ ಗಳನ್ನು ಎದುರಿಸಬೇಕಾಗುತ್ತದೆ. ಒಂದುವೇಳೆ ಅಪ್ಪಿ ತಪ್ಪಿಯೂ ಈ ಕೆಲಸ ಮಾಡಿದ್ರೆ ತಾಯಿ ತುಳಸಿ ಮಾತೆ ನಿಮ್ಮನ್ನು ಎಂದಿಗೂ ಕ್ಷಮಿಸೋದಿಲ್ಲ. ಸ್ನೇಹಿತರೆ, ಸನಾತನ ಪರಂಪರೆಗಳ ಪ್ರಕಾರ ತಾಯಿ ತುಳಸಿ ಮಾತೆಯನ್ನು ಎಲ್ಲಾ ಮನೆಯಲ್ಲಿ ಪೂಜಿಸಲಾಗುತ್ತದೆ. ಭಗವಂತನಾದ ಶ್ರೀ ಕೃಷ್ಣನಿಗೆ ತುಳಸಿ ಇಲ್ಲದೇ ಭೋಜನವನ್ನು ಅರ್ಪಿಸುವು ದಿಲ್ಲ. ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ತುಂಬಾ ಪವಿತ್ರ ಹಾಗೂ ತಾಯಿಯ ಸ್ವರೂಪ ಎಂದು ತಿಳಿಯಲಾಗಿದೆ. ತುಳಸಿ ಮಾತೆ ಎಲ್ಲರಿಗೂ ಪ್ರಿಯ ಆಗಿದ್ದಾರೆ, ಇವರು ತಮ್ಮನ್ನು ಭಕ್ತಿಯಿಂದ ಬೇಡಿ ಬಂದ ಭಕ್ತರಿಗೆ ಎಂದೂ ನಿರಾಸೆ ಉಂಟು ಮಾಡುವುದಿಲ್ಲ. ಯಾವ ಮನೆಯಲ್ಲಿ ತುಳಸಿ ಗಿಡವನ್ನು ಪೂಜಿಸುತ್ತಾರೆ, ಅಲ್ಲಿ ಸಾಕ್ಷಾತ್ ತುಳಸಿ ಮಾತೆ ಜೀವಿಸುತ್ತಾ ಇರುತ್ತಾರೆ. ಇನ್ನೂ ಆಯುರ್ವೇದದ ಪ್ರಕಾರ ಹೇಳಬೇಕಾದರೆ ತುಳಸಿ ಗಿಡ ತುಂಬಾ ಔಷಧೀಯ ಗುಣಗಳನ್ನು ಹೊಂದಿದ ಸಸ್ಯ ಆಗಿದೆ. ಮತ್ತು ಇದಕ್ಕೆ ಸಂಜೀವಿನಿ ದರ್ಜೆಯನ್ನು ಸಹ ನೀಡಲಾಗಿದೆ. ನಮ್ಮ ಶಾಸ್ತ್ರಗಳಲ್ಲಿ ತುಳಸಿ ಗಿಡ ತಾಯಿ ಪಾರ್ವತಿ ಸ್ವರೂಪ ಇದ್ದಂತೆ.

ವೈಜ್ಞಾನಿಕ ದೃಷ್ಟಿಯಿಂದಲೂ ಕೂಡ ತುಳಸಿ ಎಳೆಯ ಸೇವನೆ ಅನೇಕ ರೋಗಗಳ ಉಪಚರಿಸಲು ಬರುತ್ತದೆ. ಅನೇಕ ಗ್ರಂಥಗಳಲ್ಲಿ ತುಳಸಿಯ ಮಹಿಮೆಯನ್ನು ತಿಳಿಸಿದ್ದಾರೆ. ಆದ್ರೆ ನಿಮಗೆ ಗೊತ್ತಿರದ ಸಂಗತಿ ಏನು ಅಂದ್ರೆ, ಒಂದುವೇಳೆ ತುಳಸಿ ಮಾತೆ ಸಿಟ್ಟಾದರೆ, ಆಗ ಮುಂದೆ ಇರುವಂತವರು ನಾಶ ಆಗಿ ಬಿಡುತ್ತಾರೆ. ಈ ಕಾರಣದಿಂದ ನಿಮ್ಮ ಮನೆಯ ತುಳಸಿ ಗಿಡದ ಜೊತೆಗೆ ಈ ಐದು ವಸ್ತುಗಳನ್ನು ಇಡಲೇಬೇಡಿ. ಇದರಿಂದ ನಿಮ್ಮ ವಿನಾಶ ಪ್ರಾರಂಭ ಆಗುತ್ತೆ. ಹಾಗಾದ್ರೆ ಬನ್ನಿ ಆ ಐದು ವಸ್ತುಗಳೂ ಯಾವವು ಎಂದು ತಿಳಿಯೋಣ. ಮೊದಲನೆಯದಾಗಿ ತುಳಸಿ ಗಿಡದ ಹತ್ತಿರ ಯಾರು ಬಟ್ಟೆ ಒಗೆದು ಒಣಗಿ ಹಾಕ್ತಾರೋ ಅಲ್ಲಿ ಸಕಾರಾತ್ಮಕ ಶಕ್ತಿ ನಾಶ ಆಗುತ್ತದೆ. ಇಂಥ ಸಂದರ್ಭದಲ್ಲಿ ತಾಯಿ ತುಳಸಿ ಮಾತೆಗೆ ನಿಮ್ಮ ಮೇಲೆ ಸಿಟ್ಟು ಬರಬಹುದು. ಮತ್ತು ನಿಮ್ಮ ಮನೆಯನ್ನು ಬಿಟ್ಟು ಹೋಗಬಹುದು. ಈ ರೀತಿ ಆದ್ರೆ ನಿಮ್ಮ ಮನೆಗೆ ಬಡತನ ಬಂದು ಬಿಡಬಹುದು. ಈ ಕಾರಣಕ್ಕಾಗಿ ನೀವು ತುಳಸಿ ಗಿಡದ ಬಳಿ ಬಟ್ಟೆಗಳನ್ನು ಒಗೆದು ಒಣಗಿ ಹಾಕಬೇಡಿ. ಎರಡನೆಯದು ಸ್ವಚ್ಛತೆ ಕಾಪಾಡಿಕೊಳ್ಳುವುದು.

ಒಂದುವೇಳೆ ನೀವು ತುಳಸಿ ಗಿಡದ ಸುತ್ತ ಮುತ್ತ ಸ್ವಾಚ್ಚತೆ ಕಾಪಾಡಿಕೊಳ್ಳ ದಿದ್ದರೆ ತಾಯಿ ತುಳಸಿ ಮಾತೆ ನಿಮ್ಮ ಮನೆಯನ್ನು ಶಾಶ್ವತವಾಗಿ ಬಿಟ್ಟು ಹೋಗಬಹುದು. ಮೂರನೆಯದು ಗಣಪತಿ ವಿಗ್ರಹ. ಅಂದರೆ ನಿಮ್ಮ ಮನೆಯ ತುಳಸಿ ಗಿಡದ ಜೊತೆಗೆ ಗಣಪತಿ ವಿಗ್ರಹವನ್ನಾ ಇಡಬೇಡಿ, ಹೀಗೆ ಇಟ್ಟರೆ ನಿಮ್ಮ ಮನೆಯಲ್ಲಿ ತಾಂಡವ ಶುರು ಆಗುತ್ತದೆ, ಜಗಳಗಳು ಆಗಬಹುದು, ದುರ್ಘನೆಯು ಸಂಭವಿಸಬಹುದು. ನಾಲ್ಕನೆಯದು ಶೂ ಚಪ್ಪಲಿಗಳು. ಒಂದುವೇಳೆ ನಿಮ್ಮ ಮನೆಯ ತುಳಸಿ ಕುಂಡದ ಪಕ್ಕ ಅಥವ ಸುತ್ತ ಮುತ್ತ ಅಪ್ಪಿ ತಪ್ಪಿಯೂ ಶೂ ಚಪ್ಪಲಿಗಳನ್ನು ಇಡಬೇಡಿರಿ. ಒಂದುವೇಳೆ ಇಷ್ಟೊತ್ತಿಗೆ ನೀವು ಆ ತಪ್ಪನ್ನು ಮಾಡಿದ್ದರೆ, ಅದನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿಬಿಡಿ. ಇಲ್ಲ ಎಂದರೆ ದನ ಸಂಪತ್ತಿನ ತಾಯಿ ಆದ ತುಳಸಿ ಮಾತೆ ನಿಮ್ಮ ಮನೆ ಬಿಟ್ಟು ಹೋಗಬಹುದು. ಐದನೆಯದು ಶಿವಲಿಂಗ. ಅಕಸ್ಮಾತ್ ನೀವು ನಿಮ್ಮ ಮನೆಯ ತುಳಸಿ ಗಿಡದ ಕೆಳಗೆ ಶಿವ ಲಿಂಗ ಇಟ್ಟಿದ್ದೇ ಆದರೆ ಅದು ವಿನಾಶಕ್ಕೆ ಕಾರಣ ಆಗಬಹುದು. ನೀವು ಕೋರ್ಟ್ ಕಚೇರಿ ಅಂತ ಓಡಾಡುವ ಸನ್ನಿವೇಶ ನಿರ್ಮಾಣವಾಗುತ್ತದೆ. ಇನ್ನೊಂದು ಮುಖ್ಯವಾದ ಅಂಶವೆಂದರೆ ತುಳಸಿ ಗಿಡವನ್ನು ಕಟ್ ಮಾಡಲು ಕತ್ರಿಯನ್ನು ಬಳಸಬೇಡಿ, ಅದರ ಬದಲು ನಿಮ್ಮ ಕೈಗಳಿಂದಲೇ ಮುರಿಯಲು ಕಟ್ ಮಾಡಲು ಪ್ರಯತ್ನಿಸಿ. ಶುಭದಿನ.

Leave a Reply

Your email address will not be published. Required fields are marked *