ಇವತ್ತಿನ ದಿನಗಳಲ್ಲಿ ಯಾರಿಗಾದರೂ ಹತ್ತು ರೂಪಾಯಿ ಕೊಡೋಕು ಹಿಂದೆ ಮುಂದೆ ನೋಡುವ ಅದೆಷ್ಟೋ ಜನ ಇದ್ದಾರೆ ಆದ್ರೆ ಈ ಯುವಕ ಪ್ರತಿದಿನ ಎರಡು ವರ್ಷಗಳಿಂದ ಶಾಲಾ ಮಕ್ಕಳ ಬಿಸಿ ಊಟಕ್ಕೆ ತರಕಾರಿಯನ್ನು ಉಚಿತವಾಗಿ ನೀಡುತ್ತಿದ್ದಾನೆ. ಈ ಯುವಕನ ಕೆಲಸಕ್ಕೆ ಎಲ್ಲರು ಪ್ರಶಂಶೆಯ ಸುರಿಮಳೆ ವ್ಯಕ್ತಪಡಿಸುತ್ತಿದ್ದಾರೆ, ಯಾರು ಈ ಯುವಕ ಯಾವ ಊರಿನ ಶಾಲೆಗೆ ಉಚಿತ ತರಕಾರಿ ನೀಡುತ್ತಾನೆ ಅನ್ನೋದು ಇಲ್ಲಿದೆ ನೋಡಿ.

ಬಂಟ್ವಾಳದ ಸರ್ಕಾರೀ ಶಾಲೆಯಲ್ಲಿ 130 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿದ್ದು ಇವರ ಬಿಸಿ ಊಟಕ್ಕೆ ಉಚಿತವಾಗಿ ತರಕಾರಿಗಳನ್ನು ನೀಡುತ್ತಿದ್ದಾರೆ. ಮೆಲ್ಕಾರ್‌ನ ಚಂದ್ರಿಕಾ ವೆಜಿಟೇಬಲ್ಸ್‌ನ ಮಾಲೀಕ ಮಹಮ್ಮದ್‌ ಶರೀಫ್‌. ಬಂಟ್ವಾಳ ತಾಲೂಕಿನ ಮಜಿ ವೀರಕಂಭದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಪ್ರಾಥಮಿಕದಿಂದ ಏಳನೇ ತರಗತಿಯವರೆಗೆ ಕಲಿಯುತ್ತಿರುವ ಒಟ್ಟು ೧೩೦ ಕ್ಕೂ ಹೆಚ್ಚು ಮಕ್ಕಳ ಬಿಸಿ ಊಟಕ್ಕೆ ಸೌತೆ ಕಾಯಿ, ಬಿಟ್ ರೊಟ್, ಆಲೂಗಡ್ಡೆ, ಬಾದ್ನೇಕಾಯಿ ಹೀಗೆ ಹಲವು ತರಕಾರಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.

ಇಂತಹ ಸಾಮಾಜಿಕ ಕಳಕಳಿ ಇಟ್ಟುಕೊಂಡು ಕೆಲಸ ಮಾಡವುವ ವ್ಯಕ್ತಿಗಳಿಗೆ ಪ್ರೋತ್ಸಹದ ಮಾತುಗಳೇ ಸಾಕು ಅವರು ಇನ್ನಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ, ಹೀಗೆ ನಿಮ್ಮ ಸುತ್ತಮುತ್ತ ಹಲವು ಸಾಮಾಜಿಕ ಕಾರ್ಯ ಕೆಲಸಗಳನ್ನು ಮಾಡುವ ವ್ಯಕ್ತಿಗಳಿದ್ದಾರೆ ಅವರನ್ನು ಪ್ರೋತ್ಸಾಹಿಸಿ ಬೆಳಸಿ.

Leave a Reply

Your email address will not be published. Required fields are marked *