ಹಸಿ ಈರುಳ್ಳಿಯನ್ನು ಹಸುವಿನ ತುಪ್ಪದಲ್ಲಿ ಹುರಿದು ಸೇವಿಸಿದರೆ ಕಫ ಹೆಚ್ಚಾಗಿ ಕೆಮ್ಮು ದಮ್ಮು ಇದ್ದರೆ ಕಡಿಮೆಯಾಗುತ್ತದೆ.

ಹಸಿ ಕೆಂಪು ಈರುಳ್ಳಿಯನ್ನು ಮುಟ್ಟು ಆಗುವ 1 ವಾರದ ಮುಂಚೆ ಸೇವಿಸಿದರೆ ಮುಟ್ಟು ಸರಿಯಾಗಿ ಆಗುತ್ತದೆ. ಮುಖದ ಮೇಲೆ ಕಪ್ಪು ಕಲೆಗಳು ಇದ್ದರೆ ಈರುಳ್ಳಿ ಪೇಸ್ಟನ್ನು ಹಚ್ಚಿದರೆ ಕಪ್ಪು ಕಲೆಗಳು ಕ್ರಮೇಣವಾಗಿ ಶಮನವಾಗುತ್ತದೆ.

ಒಂದು ಚಮಚ ಹಸಿ ಈರುಳ್ಳಿ ರಸಕ್ಕೆ ಅರ್ಧ ಚಮಚ ಸಕ್ಕರೆ ಸೇರಿಸಿ ಮಕ್ಕಳಿಗೆ ಪ್ರತಿದಿನ ಕೊಟ್ಟರೆ ಮಕ್ಕಳ ತೂಕ ಹೆಚ್ಚುತ್ತದೆ. ಸೊಂಟದಿಂದ ಕಾಲುಗಳವರೆಗೆ ನೋವು ಇದ್ದರೆ ಸೊಂಟಕ್ಕೆ ಈರುಳ್ಳಿ ಪೇಸ್ಟನ್ನು ಬಿಸಿ ಮಾಡಿ ಲೇಪಿಸಿದರೆ ನೋವು ಕಡಿಮೆಯಾಗುತ್ತದೆ. ನಿದ್ದೆ ಸರಿಯಾಗಿ ಬಾರದಿದ್ದರೆ ದಿನಕ್ಕೆ ಒಂದು ಹಸಿ ಈರುಳ್ಳಿಯನ್ನು ಸೇವಿಸಿದರೆ ನಿದ್ದೆ ಚೆನ್ನಾಗಿ ಬರುತ್ತದೆ.

ಒಂದು ಬಟ್ಟಲು ಹೆಚ್ಚಿದ ಈರುಳ್ಳಿಯನ್ನು 2 ಬಟ್ಟಲು ಹಸುವಿನ ಹಾಲಿ ನೊಂದಿಗೆ ಕುದಿಸಿ ಆ ಹಾಲನ್ನು ಕುಡಿದರೆ ದೇಹದಲ್ಲಿ ಎಲ್ಲಾದರೂ ರಕ್ತ ಸ್ರಾವ ಆಗುತ್ತಿದ್ದರೆ ನಿಲ್ಲುತ್ತದೆ.

ಮೂತ್ರ ಮಾರ್ಗದಲ್ಲಿ ಉರಿ ಮತ್ತು ಸೋಂಕು ಇದ್ದರೆ 2 ಲೋಟ ನೀರಿಗೆ ಒಂದು ಈರುಳ್ಳಿಯನ್ನು ಹಾಕಿ ಒಂದು ಲೋಟ ಆಗುವ ತನಕ ಚೆನ್ನಾಗಿ ಕುದಿಸಿ ಆ ನೀರನ್ನು ಸೇವಿಸಿದರೆ ಉರಿ ಮತ್ತು ಸೋಂಕು ನಿವಾರಣೆಯಾಗುತ್ತದೆ. ಮಕ್ಕಳಲ್ಲಿ ಹೊಟ್ಟೆ ಹುಳು ಇದ್ದರೆ 10 ದಿನ ಹಸಿ ಈರುಳ್ಳಿ ರಸವನ್ನು ಒಂದು ಚಮಚ ಕುಡಿಸಿದರೆ ಹೊಟ್ಟೆ ಹುಳು ನಾಶವಾಗುತ್ತದೆ.

Leave a Reply

Your email address will not be published. Required fields are marked *