ಹೆಚ್ಚು ಉಪ್ಪಿನಕಾಯಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಕೆಲವರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಶೋಧನೆ ಒಂದು ನಡೆದಿದ್ದು, ಪುರುಷರು ಅತಿಯಾಗಿ ಉಪ್ಪಿನಕಾಯಿ ಸೇವಿಸುವುದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲು ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಹೆಚ್ಚು ಉಪ್ಪಿನ ಅಂಶ ಸೇವಿಸುವುದರಿಂದ ಶರೀರದಲ್ಲಿ ಸೋಡಿಯಂನ ಅಂಶ ಹೆಚ್ಚಾಗುವುದು. ಇದು ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವುದು. ಇದರಿಂದ ಗಂಭೀರ ಖಾಯಿಲೆಗಳು ಬರುವ ಅಪಾಯ ಹೆಚ್ಚು. ಎಂದು ವ್ಯೆದ್ಯರು ತಿಳಿಸಿದ್ದಾರೆ.

ಪುರುಷರ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ: ಉಪ್ಪಿನಕಾಯಿ ಪುರುಷರ ಲೈಂ-ಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಅದರಂತೆ ಉಪ್ಪಿನ ಕಾಯಿಯಲ್ಲಿ ಎಣ್ಣೆಯ ಅಂಶ ಹೆಚ್ಚಿರುವುದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಲು ಕಾರಣವಾಗುತ್ತದೆ. ಇದು ರಕ್ತದೊತ್ತಡ, ಹೃದಯ ಖಾಯಿಲೆಗಳಿಗೆ ಕಾರಣವಾಗುತ್ತದೆ. ಹಾಗಾದ್ರೆ ಉಪ್ಪಿನಕಾಯಿ ಸೇವನೆಯು ಯಾವೆಲ್ಲಾ ರೀತಿಯ ಕೆಟ್ಟ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಲೈಂ-ಗಿಕ ದುರ್ಬಲತೆ: ಮುಖ್ಯವಾಗಿ ಪುರುಷರು ಸಿಟ್ರಸ್ ಅಂಶವನ್ನು ಅತಿಯಾಗಿ ಸೇವಿಸಿದರೆ ಲೈಂ-ಗಿಕ ದುರ್ಬಲತೆಯ ಲಕ್ಷಣಗಳು ಅವರಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲಿ ಉಪ್ಪಿನಕಾಯಿ ಇಲ್ಲದೆ ಊಟವಿಲ್ಲ ಎನ್ನುವವರಲ್ಲಿ ಈ ಸಮಸ್ಯೆ ಬರುವುದರಲ್ಲಿ ಅನುಮಾನವಿಲ್ಲ ಎಂದು ಸಂಶೋಧನೆ ಹೇಳುತ್ತೆ.

ಅಸಟಾಮಿಪ್ರಿಡ್ ಅಪಾಯಕಾರಿ: ಪ್ರತಿಯೊಂದು ಮಾವಿನ ಕಾಯಿಗಳಿಗೂ ರೋಗಗಳು ಬರುವುದು ಸಾಮಾನ್ಯವಾಗಿದ್ದು, ಅದನ್ನು ತಡೆಗಟ್ಟಲು ಅಸಟಾಮಿಪ್ರಿಡ್(Acetamiprid) ಒಂದು ಸಾವಯವ ಸಂಯುಕ್ತವಾಗಿದೆ. ಮಾವಿನಹಣ್ಣನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸುವ ಸಲುವಾಗಿ ಇದನ್ನು ಔಷಧಿಯಂತೆ ಬಳಕೆ ಮಾಡಲಾಗುತ್ತದೆ. ನಿತ್ಯ ಇದನ್ನು ಬಳಕೆ ಮಾಡುವ ಪರಿಣಾಮದಿಂದಾಗಿ ಪುರುಷರ ಲೈಂಗಿಕ ಆಸಕ್ತಿ ಕುಂಠಿತವಾಗುತ್ತದೆ. ಅದರಿಂದ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಾ ಸಾಗುತ್ತದೆ. ಎಂದು ವ್ಯೆದ್ಯರು ಹೇಳುತ್ತಾರೆ.

ಸಿಟ್ರಸ್ ಅಂಶ ಅಪಾಯಕಾರಿ: ಸಿಟ್ರಸ್ ಅಂಶ ಅಪಾಯಕಾರಿ ಎಂದು ಹೇಳಿದರೆ ಯಾರು ಒಪ್ಪುವುದಿಲ್ಲ, ಪುರುಷರು ಮಾವಿನಕಾಯಿ ಉಪ್ಪಿನಕಾಯಿ ಸೇವಿಸುವುದನ್ನು ಬಿಡುವುದು ಒಳ್ಳೆಯದು. ಏಕೆಂದರೆ ಕೆಲವರು ಎಷ್ಟೇ ಹೇಳಿದರೂ ಇದೆಲ್ಲಾ ಸುಳ್ಳೆಂದು ಭಾವಿಸಬಹುದು. ಆದರೆ ಒಂದು ಅಧ್ಯಯನವು ಹೇಳುವ ಪ್ರಕಾರ ನಿರಂತರವಾಗಿ ಪುರುಷರು ಸಿಟ್ರಸ್ ಅಂಶದ ಸೇವನೆಯನ್ನು ಮಾಡುತ್ತಿದ್ದಲ್ಲಿ ಅದನ್ನು ಇಂದೇ ನಿಲ್ಲಿಸುವುದು ಒಳ್ಳೆಯದು.

ಕೆಮಿಕಲ್ ಮಿಶ್ರಿತ ಉಪ್ಪಿನಕಾಯಿ: ಮಾವಿನ ಉಪ್ಪಿನಕಾಯಿಯಲ್ಲಿ ಕೆಮಿಕಲ್ ಹೆಚ್ಚಾಗಿರುತ್ತೆ ಏಕೆಂದರೆ ಇತ್ತೀಚಿನ ದಿನಗಳಲ್ಲಿ ಹಣ್ಣು-ತರಕಾರಿಗಳು ಕೆಮಿಕಲ್ ಇಲ್ಲದೆ ಬೆಳೆಯುತ್ತಿಲ್ಲ. ಇನ್ನು ಉಪ್ಪಿನಕಾಯಿ ಹೆಚ್ಚು ಕಾಲ ಬಾಳಿಕೆ ಬರುವ ಸಲುವಾಗಿಯೂ ಕೂಡ ರಾಸಾಯನಿಕ ಬಳಸಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಆದಷ್ಟು ಉಪ್ಪಿನಕಾಯಿ ಬಳಕೆ ಮಾಡುವುದನ್ನು ತಪ್ಪಿಸಿ. ಹೆಚ್ಚು ತಿಂದರೆ ಶರೀರದಲ್ಲಿ ಸೋಡಿಯಂನ ಅಂಶ ಹೆಚ್ಚಾಗುವುದು. ಇದು ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *