ನಮ್ಮ ಹಿಂದೂ ಧರ್ಮದಲ್ಲಿ ಅತಿ ಶ್ರೇಷ್ಠವಾದಂತ ಹಬ್ಬ ಯಾವುದು ಎಂದು ನಾವು ನೋಡಿದರೆ ಮೊದಲಿಗೆ ತಲೆಗೆ ಬರುವುದು ಗೌರಿ ಗಣೇಶ ಹಬ್ಬವನ್ನು ನಾವು ಬಹಳ ವಿಜೃಂಭಣೆಯಿಂದ ಇಡಿ ಭಾರತಾದ್ಯಂತ ಆಚರಣೆ ಮಾಡುತ್ತೇವೆ. ಈ ಒಂದು ಶುಭ ಕಾರ್ಯದಲ್ಲಿ ನಮ್ಮ ಮನೆಯಲ್ಲಿ ಒಳ್ಳೆಯ ರೀತಿಯಿಂದ ಪೂಜೆ ಮಾಡಿದರೆ ನಮ್ಮ ಸಕಲ ಪಾಪಗಳೆಲ್ಲವೂ ಕಳೆದು ಒಳ್ಳೆಯ ದಾರಿಗೆ ನಾವು ನಡೆಯುತ್ತಾ ಹೋಗುತ್ತೇವೆ ಇವತ್ತಿನ ಮಾಹಿತಿಯಲ್ಲಿ ನೀವು ಕರೆಸುವಂತಹ ಮುತ್ತೈದರಿಗೆ ಯಾವ ರೀತಿ ವಸ್ತುಗಳನ್ನು ನೀಡಬೇಕು ಎಂಬುದನ್ನು ನಾವು ನೋಡುತ್ತೇವೆ. ಗೌರಿ ಹಬ್ಬದ ದಿನ ಕೆಲವು ವಸ್ತುಗಳನ್ನ ಮುತ್ತೈದೆಯರಿಗೆ ದಾನ ಮಾಡಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ದೇವಿಯ ಆಶೀರ್ವಾದದ ಜೊತೆಗೆ ನಿಮ್ಮ ಕಷ್ಟಗಳು ಸಹ ಕರಗುತ್ತವೆ. ಹಾಗಾದರೆ ಮುತ್ತೈದೆಯರಿಗೆ ಯಾವ ವಸ್ತುಗಳನ್ನು ದಾನ ಮಾಡಬೇಕು ಎಂಬ ಮಾಹಿತಿಯನ್ನು ತಿಳಿಯೋಣ.

2023 ರಲ್ಲಿ ಗೌರಿ ಹಬ್ಬವು ಸೆಪ್ಟೆಂಬರ್ ಹದಿನೆಂಟನೇ ತಾರೀಖು ಸೋಮವಾರದಂದು ಬಂದಿದೆ. ಈ ಸ್ವರ್ಣಗೌರಿ ವ್ರತವನ್ನು ಮಾಡುವವರು ಉಪವಾಸದಿಂದ ಗೌರಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಬೇಕು. ಈ ವ್ರತವನ್ನು ಹೆಣ್ಣುಮಕ್ಕಳು, ಸಂಪತ್ತು ಮತ್ತು ಗಂಡನ ಆಯಸ್ಸು, ಆರೋಗ್ಯಕ್ಕಾಗಿ ಆಚರಿಸುತ್ತಾರೆ. ಯಾವುದೇ ಹಬ್ಬವಾಗಿರಲಿ ಆ ಹಬ್ಬದ ದಿನ ದಾನ ಮಾಡುವುದಕ್ಕೆ ವಿಶೇಷವಾದ ಮಹತ್ವವಿದೆ. ಈ ಗೌರಿ ಹಬ್ಬದ ದಿನವೂ ಕೂಡ ದಾನ ಮಾಡುವುದಕ್ಕೆ ವಿಶೇಷವಾದ ಮಹತ್ವವಿದೆ. ಈ ದಿನ ಮುತ್ತೈದೆಯರಿಗೆ ಈ ವಸ್ತುಗಳನ್ನು ದಾನ ಮಾಡಿದರೆ ಸಾಕು ನಿಮ್ಮ ಕಷ್ಟಗಳು ಮತ್ತು ದೋಷಗಳು ನಿವಾರಣೆಯಾಗುತ್ತವೆ.ಅವು ಯಾವ ವಸ್ತುಗಳು ಎಂದರೆ ಉಪವಾಸವನ್ನು ಆಚರಿಸಿ ಗೌರಿ ಪೂಜೆಯನ್ನು ಮಾಡುವವರು ಮುತ್ತೈದೆಯರಿಗೆ ಗೋಧಿಯನ್ನು ದಾನ ಮಾಡಬೇಕು. ಈ ವ್ರತವನ್ನು ಮಾಡುವವರು ಗೋಧಿಯನ್ನು ದಾನ ಮಾಡಿದರೆ ಮಾತ್ರ ಅವರ ವೃತ ಪೂರ್ಣಗೊಳ್ಳುವುದು.

ಹಾಗೆ ಅಕ್ಕಿಯನ್ನು ದಾನವನ್ನು ಮಾಡಬೇಕು. ಅನ್ನದಾನ ಶ್ರೇಷ್ಠ ವಾದ ದಾನ ನೀವು ಅಕ್ಕಿ ಯನ್ನು ದಾನ ಮಾಡಿದರೆ ನಿಮ್ಮ ಮನೆಯು ಅಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ. ಹಾಗೆ ಅಣು ಗಳನ್ನು ಕೂಡ ನೀವು ದಾನ ಮಾಡಬಹುದು. ಗೌರಿ ಪೂಜೆ ಮುಗಿದ ನಂತರ ನಿಮ್ಮ ಮನೆಯ ಹತ್ತಿರವಿರುವ ದೇವಸ್ಥಾನ ಕ್ಕೆ ಹೋಗಿ ದೇವಸ್ಥಾನಕ್ಕೆ ಬರುವ ಮುತ್ತೈದೆಯರಿಗೆ ಹಣ್ಣುಗಳನ್ನು ದಾನ ಮಾಡಿ ಹಾಗೆ ನಿಮಗೆ ಶಕ್ತಿ ಇದ್ದರೆ ಮುತ್ತೈದೆಯರಿಗೆ ವಸ್ತ್ರ ವನ್ನು ಕೂಡದಾನ ಮಾಡಬಹುದು. ಸೀರೆಯ ಆಗಿರಬಹುದು, ಆಗಿರಬಹುದು. ಹೀಗೆ ವಸ್ತ್ರ ವನ್ನು ದಾನ ಮಾಡಿದರೆ ಗೌರಿ ಹಬ್ಬದ ದಿನ ಮುತ್ತೈದೆಯರಿಗೆ ಅಕ್ಕಿ ವಸ್ತ್ರ, ಹಣ್ಣು, ಗೋಧಿ ಹೀಗೆ ಇತರೆ ಧಾನ್ಯಗಳನ್ನು ದಾನ ಮಾಡಬಹುದು. ಇಷ್ಟು ವಸ್ತುಗಳಲ್ಲಿ ನಿಮ್ಮ ಶಕ್ತಿ ಗೆ ಅನುಗುಣವಾಗಿ ನಿಮಗೆ ಎಷ್ಟು ಸಾಧ್ಯ ವೋ ಅಷ್ಟು ದಾನ ಮಾಡಿ ನಿಮ್ಮ ಕಷ್ಟಗಳು ಕಳೆಯುವುದರ ಜೊತೆಗೆ ನಿಮ್ಮ ಎಲ್ಲಾ ಇಷ್ಟಾರ್ಥಗಳು ಕೂಡ ಅತಿ ಶೀಘ್ರ ದಲ್ಲಿ ಇಡೆರುತ್ತವೆ.

Leave a Reply

Your email address will not be published. Required fields are marked *