ನಮಸ್ಕಾರ ಸ್ನೇಹಿತರೆ ಸ್ವಾಗತ ನಮ್ಮ ಸಂಪ್ರದಾಯದಲ್ಲಿ ಪ್ರತಿ ಮನೆಗಳಲ್ಲೂ ಕೂಡ ಕಳಶವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಕೆಲವರು ಲಕ್ಷ್ಮಿ ಕಳಸವನ್ನು ಇಡುತ್ತಾರೆ. ಕೆಲವರು ತಮ್ಮ ಮನೆಗಳಲ್ಲಿ ಮನೆ ದೇವರ ಹೆಸರನ್ನು ಹೇಳಿ ಕಳಸವನ್ನು ಇಡುತ್ತಾರೆ. ಸರಿಯಾದ ವಿಧಾನದಲ್ಲಿ ಕಲಶದ ಪೂಜೆಯನ್ನು ಮಾಡುವುದರಿಂದ ನಿಮ್ಮ ಮನೆಯ ಏಳಿಗೆ ಆಗುವಂತೆ ಮಾಡಬಹುದು. ಲಕ್ಷ್ಮಿ ಸ್ವರೂಪ ವಾದ ಕಳಶವನ್ನು ಪೂಜೆ ಮಾಡಿ ಮನೆಗೆ ಸಿದ್ಧಿಸುವಂತೆ ಮಾಡಿಕೊಳ್ಳಬಹುದು. ದೇವರ ಮನೆಯಲ್ಲಿ ಇಡುವಂತಹ ಕಳಶವನ್ನು ದೇವರ ಕೋಣೆಗೆ ತಂದು ಇಟ್ಟರೆ ಅದನ್ನು ನೋಡಿದರೆ ಸಾಕ್ಷಾತ್ ಮಹಾಲಕ್ಷ್ಮಿ ಬಂದು ಕೂತಿದ್ದಾಳೆ ಎಂದು ಭಾಸವಾಗಬೇಕು. ಹಾಗಾದರೆ ಆ ಕ್ರಮಗಳು ಯಾವವು ಎನ್ನುವುದನ್ನು ತಿಳಿಯೋಣ. ನೀವು ಶುಕ್ರವಾರ ಅಮವಾಸ್ಯೆ ಹುಣ್ಣಿಮೆಯ ದಿನದಂದು ಕಳಶವನ್ನು ಪ್ರತಿಷ್ಠಾಪನೆಯನ್ನು ಮಾಡಬೇಕು. ಇದು ಒಳ್ಳೆಯ ದಿನವೆಂದು ಹೇಳಲಾಗುತ್ತೆ.

ಜೊತೆಗೆ ನಿಮ್ಮ ಮನೆಯಲ್ಲಿ ಹಿರಿಯರು ಯಾವ ರೀತಿ ಕಳಶವನ್ನು ಇಟ್ಟುಕೊಂಡು ಬಂದಿದ್ದರು. ಅದೇ ರೀತಿಯಾಗಿ ಇಟ್ಟು ಕಳಶವನ್ನು ಪೂಜೆಯನ್ನು ಮಾಡಬೇಕು. ಅವರು ಕಳಸ ಇದುದಂತ ಚಂಬಿನಲ್ಲಿ ನೀವು ಕಲಶವನ್ನು ಇಟ್ಟು ಪೂಜೆಯನ್ನು ಮಾಡಿದರೆ ಇನ್ನೂ ಒಳ್ಳೆಯದು. ಕಳಶವನ್ನ ಯಾವುದೇ ಕಾರಣಕ್ಕೂ ಸ್ಟೀಲ್ ಮಾಡಿರುವಂತಹ ಅಥವಾ ಸ್ಟೀಲ್ ಚಂಬಿನಲ್ಲಿ ನಲ್ಲಿ ಇಡಬಾರದು ಇಟ್ಟರೆ ತಾಮ್ರ ಅಥವಾ ಬೆಳ್ಳಿ ಹೀಗೆ ನಿಮ್ಮ ಶಕ್ತಿಗೆ ಅನುಸಾರವಾದ ಲೋಹದ ಕಳಸದಲ್ಲಿ ಕಳಶವನ್ನು ಪ್ರತಿಷ್ಠಾಪನೆಯನ್ನು ಮಾಡಬೇಕು ಕಳಶವನ್ನು ಪ್ರತಿಷ್ಠಾಪನೆ ಮಾಡುವ ಮೊದಲು ದೇವರ ಕೋಣೆಯನ್ನ ಶುದ್ಧವನ್ನು ಮಾಡಬೇಕು. ಕಳಶವನ್ನು ಪಾತ್ರಗಳನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳಬೇಕು. ಕಲಶವನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು.ತಟ್ಟೆಗೆ ಮೂರು ಅಡಿ ಅಥವಾ ಐದು ಅಡಿ ಅಕ್ಕಿಯನ್ನು ಹಾಕಿ ಉಂಗುರದ ಬೆರಳಿನಿಂದ ಅದರೊಳಗೆಷ್ಟು ದಳದ ಕಮಲವನ್ನು ಬರೆದು ಅದರ ಮೇಲೆ ಕಳಶವನ್ನು ಪ್ರತಿಷ್ಠಾಪನೆಯನ್ನು ಮಾಡಬೇಕು.

ಕಳಶಕ್ಕೆ ಭಸ್ಮ ಗಂಧ, ಅರಿಶಿನ ಕುಂಕುಮವನ್ನು ಹಚ್ಚಿ ಕಲಶದ ತಂಬಿಗೆ ನೀರನ್ನು ತುಂಬಿಸಬೇಕು. ಅದರಲ್ಲಿ ಒಂದು ನಾಣ್ಯ ಹಾಗು ಅರಿಶಿನ ಕುಂಕುಮದ ಅಕ್ಷತೆಯನ್ನು ಹಾಕಿ ಮಾವಿನ ಎಲೆಯನ್ನ ಇಟ್ಟು ಅದರ ಮೇಲೆ ತೆಂಗಿನಕಾಯಿ ಇಟ್ಟು ಪ್ರತಿಷ್ಠಾಪನೆ ಮಾಡಬೇಕು. ತೆಂಗಿನಕಾಯಿಲ್ಲಿ ಕಣ್ಣು ಕಾಣುವಂತೆ ಇರ ಬಾರದು ಮತ್ತು ಜುಟ್ಟು ನೀಟಾಗಿ ತೆಗೆದಿರಬೇಕು. ಈ ರೀತಿಯಾದಂತಹ ತೆಂಗಿನಕಾಯಿಯನ್ನು ತೆಗೆದುಕೊಂಡು ಪ್ರತಿಷ್ಠಾಪನೆಯನ್ನು ಮಾಡಬೇಕು. ಅರಿಶಿನದ ಕೊಂಬನ್ನ ಕಟ್ಟ ಬಹುದು ಹಾಗು ಕಳಶ ವನ್ನು ಪ್ರತಿಷ್ಠಾಪನೆಯನ್ನು ಮಾಡಿ ಅಕ್ಕ ಪಕ್ಕ ದೀಪವನ್ನು ಹಚ್ಚಿ ಕೈಮುಗಿದು ನಿಮ್ಮ ಮನಸ್ಸಿನಲ್ಲಿರುವಂತಹ ಬೇಡಿಕೆಗಳನ್ನ ಬೇಡಿಕೊಳ್ಳಿ. ನಿಮ್ಮಲ್ಲಿರುವಂತಹ ಎಲ್ಲ ಕಷ್ಟಗಳು ದೂರವಾಗಿ ನಿಮಗೆ ಸುಖ ಸಮೃದ್ಧಿ ಶಾಂತಿ ನೆಲೆಸುತ್ತದೆ. ನಿಮ್ಮ ಎಲ್ಲ ಕೋರಿಕೆಗಳು ಈಡೇರುತ್ತವೆ. ನಂತರ ಕೊನೆಯದಾಗಿ ಧೂಪ ದೀಪದಿಂದ ಆರತಿಯನ್ನು ಮಾಡಿ ನೈವೇದ್ಯವನ್ನು ಅರ್ಪಿಸಿ ನಿಮಗೆ ಒಳ್ಳೆಯದಾಗುತ್ತೆ.

Leave a Reply

Your email address will not be published. Required fields are marked *