ಆರೋಗ್ಯವನ್ನು ವೃದ್ಧಿಸುವಲ್ಲಿ ಅನೇಕ ಗಿಡಮೂಲಿಕೆಗಳು ನಮ್ಮ ಅರಿವಿಗೆ ಬಾರದೆ ಉಳಿದುಕೊಂಡು ಬಿಡುತ್ತವೆ. ಪ್ರತಿದಿನ ಕಣ್ಣೆದುರು ಕಂಡರೂ ಅದರ ಔಷಧೀಯ ಗುಣ ಮಾತ್ರ ನಮಗೆ ಗೊತ್ತಿರುವುದಿಲ್ಲ. ಅಂತಹ ಒಂದು ಗಿಡ ಚಕ್ರ ಮೂನಿ ಗಿಡ. ಇದನ್ನು ಸ್ಥಳೀಯವಾಗಿ ಅಥವಾ ಗ್ರಾಂಥಿಕವಾಗಿ ಬಿಪಿ ಸೋಂಪು ಅಂತಾನೂ ಕರೆಯುತ್ತಾರೆ ಇದರ ಮೂಲ ಮಲೇಶಿಯಾ ಆದರೂ ಕರ್ನಾಟಕ ಕೇರಳ ತಮಿಳುನಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಹಳ್ಳಿಗಳಲ್ಲಿ ಇಂದಿಗೂ ತೋಟದ ಬೇಲಿ, ಬದುಗಳಲ್ಲಿ ಈ ಗಿಡ ಕಾಣಸಿಗುತ್ತವೆ.ಕೆಲವು ಪ್ರಾಂತ್ಯದ ರೈತರು ಇದನ್ನು ವಾಣಿಜ್ಯ ಬೆಳೆಯಾಗಿಯೂ ಬೆಳೆಯುತ್ತಾರೆ. ಈ ಚಕ್ರ ಮುನಿಯಾ ಗಿಡದ ಎಲೆಗಳಲ್ಲಿ ಯಥೇಚ್ಛವಾದ ಪ್ರೋಟೀನ್ ವಿಟಮಿನ್ ಗಳು ಮತ್ತು ಜೀವಸತ್ವಗಳು ಇವೆ. ಹೇರಳವಾದ ಪೋಷಕಾಂಶಗಳನ್ನು ಹೊಂದಿರುವ ಇದನ್ನು ಮಲ್ಟಿ ವಿಟಮಿನ್ ಪ್ಲಾಂಟ್ ಎಂದಲೂ ಕರೆಯುತ್ತಾರೆ. ಚಕ್ರಮುನಿ ಸೊಪ್ಪಿನಲ್ಲಿ ವಿಟಮಿನ್-ಎಬಿಸಿ ಮತ್ತು ಕೆ ವಿಫಲವಾಗಿದ್ದು ದೇಹಗಳೆಲ್ಲಾ ಜೀವಕೋಶದ ಅಭಿವೃದ್ಧಿಗೆ ಸ್ನಾಯುಗಳ ರಚನೆ ಮತ್ತು

ಬೆಳವಣಿಗೆಗೆ ಹಾಗೂ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮವಾದ ಮೂಲಿಕೆಯಾಗಿದೆ. ಹಾಗಾದರೆ ಬನ್ನಿ ಇದರ ಆರೋಗ್ಯದ ಗುಣಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಚಕ್ರಮುನಿ ಸೊಪ್ಪಿನ ಸೇವನೆಯಿಂದ ದೇಹದಲ್ಲಿ ರಕ್ತದ ಉತ್ಪತ್ತಿಯಾಗುತ್ತದೆ. ಹೀಗಾಗಿ ರಕ್ತದ ಕೊರತೆ ಇದ್ದವರಿಗೆ ಇದು ಉತ್ತಮ ಮೂಲಿಕೆಯಾಗಿದೆ ಮಹಿಳೆಯರಿಗೆ ಇದು ಹೆಚ್ಚು ಉಪಯುಕ್ತ. ಏಕೆಂದರೆ ಮುಟ್ಟಿನ ದಿನಗಳಲ್ಲಿ ಅಧಿಕ ರಕ್ತಸ್ರಾವವಾದರೆ ಈ ಸೊಪ್ಪಿನ ಸೇವನೆಯಿಂದ ಸರಿದೂಗಿಸಿ ಕೊಳ್ಳಬಹುದು.

ಈಸೊಪ್ಪನ್ನು ಚಟ್ನಿ ಪಲ್ಯವನ್ನು ಮಾಡುವ ಮೂಲಕ ಬಳಸಬಹುದಾಗಿದೆ. ರಕ್ತವನ್ನು ಶುದ್ಧೀಕರಿಸಲು ಕೂಡ ಇದು ಉಪಯುಕ್ತವಾಗಿದೆ ಇನ್ನು ಚಕ್ರಮುನಿ ಸೊಪ್ಪಿನ ಬಳಕೆಯಿಂದ ಮೂತ್ರಪಿಂಡಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು. ಈ ಸೊಪ್ಪಿನಲ್ಲಿರುವ ಜೀವಸತ್ವಗಳು ಮೂತ್ರಪಿಂಡದ ಸಮಸ್ಯೆಗಳನ್ನು ಪರಿಹರಿಸಲು ಸಹಾಯಕವಾಗಿವೆ. ಹಾಗೆ ಇದರ ಮುಖ್ಯ ಉಪಯೋಗ ಹೇಳಬೇಕೆಂದರೆ ನಮ್ಮ ಕಣ್ಣಿನ ನರಗಳನ್ನು ಆರೋಗ್ಯಗೊಳಿಸಿ ದೃಷ್ಟಿಯನ್ನು ಹೆಚ್ಚಿಸುತ್ತದೆ ಹಾಗೆ ನಮ್ಮ ದೇಹದಲ್ಲಿ ಹಾಗೂ ಬಾಯಲ್ಲಿ ಯಾವುದೇ ಹುಣ್ಣುಗಳು ಬೆಳೆಯುವುದಂತೆ ನೋಡಿಕೊಳ್ಳುತ್ತದೆ.

ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕರಿಸುತ್ತದೆ.ಮೂತ್ರಪಿಂಡಗಳು ಸರಿಯಾಗಿ ಕೆಲಸ ನಿರ್ವಹಿಸಲು ಹಾಗೂ ಹಲ್ಲು,ವಸಡುಗಳ ರಕ್ಷಣೆಯಲ್ಲಿ ಸಹಕಾರಿಯಾಗಿದೆ. ಇದನ್ನು ನಾವು ಚಟ್ನಿಯನ್ನಾಗಿ ಮಾಡಿ ಯಾವುದರ ಜೊತೆಗೆ ತಿನ್ನಬಹುದು. ಹಾಗೆ ಇದರ ಪಲ್ಯವನ್ನು ಮಾಡಿ ನಾವು ಸ್ವೀಕರಿಸಬಹುದು. ಹತ್ತಾರು ಉಪಯೋಗಗಳ ಹೊಂದಿರುವ ಈ ಬಳ್ಳಿಯನ್ನು ನಾವು ಹಿತ್ತಲಲ್ಲಿ ಕೂಡ ಹಚ್ಚಿ ಬೆಳೆಸಬಹುದು.

Leave a Reply

Your email address will not be published. Required fields are marked *