ಕಳೆದವಾರ ನಾವೊಂದು ಸುದ್ದಿಯನ್ನು ಪ್ರಸಾರ ಮಾಡಿದ್ವಿ. ಈಗ ಸದ್ಯಕ್ಕೆ ತಿರುಪತಿಗೆ ಯಾರು ಹೋಗಬೇಡಿ ಅಂತ. ಅದಕ್ಕೆ ತುಂಬಾ ಜನ ಮಿಶ್ರಪ್ರತಿಕ್ರಿಯೆ ಯನ್ನು ವ್ಯಕ್ತಪಡಿಸಿದ್ದರು. ಆದರೆ ಅದು ನಮ್ಮ ಅಭಿಪ್ರಾಯವಲ್ಲ. ಅಲ್ಲಿನ ಭಕ್ತಾದಿಗಳ ಅಭಿಪ್ರಾಯ. ಅದು ಯಾಕಪ್ಪ ಅಂದರೆ ಅಲ್ಲಿ ಕೆಳಗಡೆ ತಿರುಪತಿಯಲ್ಲಿ ಊಟದ ವ್ಯವಸ್ಥೆ ಇರಲಿಲ್ಲ. ಭಕ್ತಾದಿಗಳು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಸರ್ವ ದರ್ಶನಕ್ಕೆ ಟಿಕೆಟ್ ಪಡೆಯುವಾಗ ಯಾರಿಗೂ ಕೂಡ ಊಟದ ವ್ಯವಸ್ಥೆ ಇರಲಿಲ್ಲ. ಹಾಗೂ ಬಿಸಿನಲ್ಲಿ ಕ್ಯೂನಲ್ಲಿ ನಡೆಸುತ್ತಿದ್ದರು. ಅದಕ್ಕೆ ತುಂಬಾ ಜನ ಎಲ್ಲ ತಲೆತಿರುಗಿ ಬಿದ್ದಿದ್ದಾರೆ.

 

 

ಅದರಲ್ಲೂ ಕೂಡ ಹೆಣ್ಣು ಮಕ್ಕಳು ಹಾಗೂ ವಯಸ್ಸಾದವರಂತೆ ತುಂಬಾ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನೀವು ಈ ಮಾಹಿತಿ ನೋಡುತ್ತಿರಬಹುದು. ಯಾವ ರೀತಿಯಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಅಂತ. ಇದಕ್ಕೆ ಅಲ್ಲಿನ ಲೋಕಲ್ ಪೊಲೀಸ್ ಅವರು ಯಾರು ಕೂಡ ಸಹಾಯ ಮಾಡುತ್ತಿರಲಿಲ್ಲ. ಅಷ್ಟೇ ಅಲ್ಲದೆ ಊಟ ಇಲ್ಲದೆ ಕಾಸಗಿ ಹೋಟೆಲ್ಗಳಲ್ಲಿ ಊಟಕ್ಕೆ ಪರದಾಡ ಬೇಕಿತ್ತಾ. ಅನಂತರ ವಸತಿಗಳನ್ನು ಖಾಸಗಿಯವರು ಒಂದು ಬಿಸಿನೆಸ್ ಮಾಡಿಕೊಂಡಿದ್ದರು. ಈ ರೀತಿಯಾಗಿ ಸುದ್ದಿಯನ್ನೆಲ್ಲ ನಾವು ಪ್ರಸಾರ ಮಾಡಿದ್ವಿ. ಹಾಗೂ ಅಲ್ಲಿನ ಭಕ್ತಾದಿಗಳು ಏನು ಹೇಳುತ್ತಿದ್ದಾರೆ ಅಂತ ಒಮ್ಮೆ ನೀವೇ ಕೇಳಿ. ಇವರು ತೆಲುಗು ದಲ್ಲಿ ಏನಪ್ಪ ಹೇಳಿದರು ಅಂದರೆ ಟಿಡಿವಿ ವ್ಯವಸ್ಥೆ ತುಂಬಾ ಅವ್ಯವಸ್ಥೆ ಆಗಿದೆ ಹಾಗೂ ಇಲ್ಲಿ ಊಟ ಸಿಗುತ್ತಿಲ್ಲ.

 

 

ಪೊಲೀಸರು ಬಂದು ಸುಮ್ಮನೆ ನೋಡಿಕೊಂಡು ಹೋಗುತ್ತಿದ್ದಾರೆ. ಯಾರು ಕೂಡ ಸಹಾಯ ಮಾಡುತ್ತಿಲ್ಲ ಅಂತ. ಮತ್ತೆ ಬಂದರೂ ಕೂಡ ಯಾರು ತಿರುಪತಿಗೆ ಬರಬೇಡಿ ಅಂತ ಹೇಳುತ್ತೇನೆ ಅಂತ ಅವರು ಹೇಳಿದ್ದಾರೆ. ಭಕ್ತಾದಿಗಳು ಹೇಳುವುದನ್ನು ನಾವು ಪ್ರಸಾರ ಮಾಡಿದ್ವಿ. ಈಗ ಆ ಸುದ್ದಿಯನ್ನು ನೋಡಿ ತಿರುಪತಿ ಅವರು ಟಿಟಿಡಿ ಅವರು ಹೆಚ್ಚಿದ್ದು ಕೊಂಡಿದ್ದಾರೆ ಅಂತ ಹೇಳಬಹುದು. ಈಗ ತುಂಬಾ ಸುಲಭ ಮಾರ್ಗಗಳನ್ನು ಸರ್ವ ದರ್ಶನಕ್ಕೆ ಮಾಡಿದ್ದಾರಂತೆ ಇಷ್ಟು ದಿನ ಸರ್ವ ದರ್ಶನ ಟಿಕೆಟ್ ಪಡೆಯುವಾಗ ಭಕ್ತಾದಿಗಳಿಗೆ ಯಾವುದೇ ರೀತಿಯ ಊಟಗಳು ಸರಿಯಾಗಿ ಸಿಗುತ್ತಿರಲಿಲ್ಲ. ಹಾಗೂ ವಸತಿ ಕೂಡ ಸಿಗುತ್ತಿರಲಿಲ್ಲ ಎಲ್ಲದಕ್ಕಿಂತ ಮುಖ್ಯವಾಗಿ ಅಲ್ಲಿ ಕ್ಯು ಸರಿಯಾಗಿ ಇರುತ್ತಿರಲಿಲ್ಲ. ಬಿಸಿನಲ್ಲಿ ಹೆಣ್ಣುಮಕ್ಕಳು ಹಾಗೂ ವೃದ್ಧರು ನಿಂತು ಕೊಳ್ಳಬೇಕಾಗಿತ್ತು.

Leave a Reply

Your email address will not be published. Required fields are marked *