ನಮಸ್ಕಾರ ಸ್ನೇಹಿತರೆ ವಿಡಿಯೋಗೆ ಸ್ವಾಗತ. ಈ ಜಗತ್ತಿನಲ್ಲಿ ಸಸ್ಯಗಳಿಗೆ ತನ್ನ ದೇ ಆದಂತಹ ವಿಶಿಷ್ಟವಾದ ಸ್ಥಾನವಿದೆ. ಕೆಲವೊಮ್ಮೆ ಸಸ್ಯಗಳು ಹಾಗೆ ನೋಡಿದರೆ ಆರೋಗ್ಯ ದೃಷ್ಟಿಯಿಂದಲೂ ಕೂಡ ಒಂದು ರೀತಿಯಲ್ಲಿ ಉಪಯೋಗವಾಗುತ್ತವೆ ಆದರೆ ಇವತ್ತಿನ ಮಾಹಿತಿ ಸ್ವಲ್ಪ ವಿಭಿನ್ನವಾಗಿದೆ.ಇಂತಹ ಸಸ್ಯಗಳನ್ನು ದೈವಕ್ಕೆ ಹೋಲಿಸಲಾಗುತ್ತೆ. ಇಂತಹ ದೈವತ್ವ ಹೊಂದಿದ ಸಸ್ಯ ಮನೆಯಲ್ಲಿ ಲಕ್ಷ್ಮಿ ದೇವಿಯನ್ನ ನೆಲಸಲು ನಮಗೆ ಸಹಾಯವನ್ನು ಮಾಡುತ್ತದೆ. ನಮ್ಮ ಮನೆಗೆ ಸುಖ, ಶಾಂತಿ, ನೆಮ್ಮದಿಯನ್ನು ನೀಡುವಂತಹ ಶಕ್ತಿಯನ್ನು ಹೊಂದಿದೆ. ತಸ್ಯ ಯಾವುದೆಂದರೆ ತಿಳಿಸುತ್ತೇನೆ. ಅದುವೆ ಲೋಳೆರಸ ಅಥವಾ ಅಲೋವೆರಾ ಈ ಗಿಡವು ಯಾರ ಮನೆಯಲ್ಲಿ ಇರುತ್ತದೆಯೋ ಅವರ ಮನೆಯಲ್ಲಿ ಅದೃಷ್ಟ ಲಕ್ಷ್ಮಿ ತಾಂಡವ ಇದೆ. ಹಾಗೂ ಆ ಮನೆಯಲ್ಲಿ ಆರೋಗ್ಯಕರವಾದ ವಾತಾವರಣ ಇರುತ್ತದೆ. ಈ ಲೋಳೆರಸದ ಮತ್ತೊಂದು ವಿಶೇಷತೆ ಎಂದರೆ ಒಂದು ದೇವತೆಗಳು ವಾಸವಿರುತ್ತಾರೆ ಎಂದು ಪಂಡಿತರು ಹೇಳುತ್ತಾರೆ.

ಇದು ಯಾರ ಮನೆಯ ಮುಂದೆ ಇರುತ್ತದೆ ಅವರ ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಪ್ರವೇಶವನ್ನು ಮಾಡುವುದಿಲ್ಲ. ಈ ಗಿಡದ ಬೇರಿನಲ್ಲಿ ಎಂತಹ ಶಕ್ತಿ ಇದೆ ಅಂದ್ರೆ ಆ ಮನೆಯಲ್ಲಿ ಜಗಳ ಮನಸ್ತಾಪ ಏನೇ ಇದ್ದರು. ಅದನ್ನ ಬಾರದ ಹಾಗೆ ನೋಡಿಕೊಳ್ಳುತ್ತದೆ. ಹೌದು. ಸ್ನೇಹಿತರೆ ಚೆನ್ನಾಗಿರುವಂತಹ ಒಂದು ಗಿಡವನ್ನು ತಂದು ಅದನ್ನು ಶುಭ್ರವಾಗಿ ತೊಳೆದು ಗಂಧ ಅರಿಶಿನ ಕುಂಕುಮದಿಂದ ಅದನ್ನ ಅಲಂಕಾರವನ್ನು ಮಾಡಿ ಪೂಜೆಯನ್ನು ಮಾಡಿ ನಂತರ ಒಂದು ದಾರದ ಸಹಾಯದಿಂದ ಮನೆಯ ದ್ವಾರದ ಮೇಲ್ಭಾಗದಲ್ಲಿ ಕಟ್ಟಿ. ಇದನ್ನು ಬುಡಮೇಲಾಗಿ ಕಟ್ಟ ಬೇಕು ಹಾಗು ಇದನ್ನು ಮನೆಯ ಒಳಗೆ ಕಟ್ಟ ಬೇಕು. ಇನ್ನು ಅಮವಾಸೆ ದಿನ ಕಟ್ಟುವುದರಿಂದ ನಿಮಗೆ ಹೆಚ್ಚಿನ ಬಲ ದೊರೆಯುತ್ತದೆ. ಆ ಮನೆಗೆ ಲಕ್ಷ್ಮಿ ದೇವಿ ಬಹಳ ಸಂತೋಷವಾಗಿ ಬರುತ್ತಾಳೆ ಎಂದು ಹೇಳಲಾಗಿದೆ.

ಈಶಾನ್ಯ ಮತ್ತು ವಾಯುವ್ಯ ದಿಕ್ಕಿನಲ್ಲಿ ಅಲೋವೆರವನ್ನು ಬೆಳೆಸಬೇಕು ಇದರಿಂದ ವಿಶೇಷವಾದ ಲಕ್ಷ್ಮಿ ಅನುಗ್ರಹ ನಿಮ್ಮ ಮೇಲೆ ಸಿಗಲಿದೆ. ಮನೆಯಲ್ಲಿರುವಂತಹ ನಕಾರಾತ್ಮಕ ಚಿಂತನೆಗಳನ್ನು ಹೋಗಲಾಡಿಸುತ್ತದೆ. ಅಲೋವೆರವನ್ನು ಆಗ್ನೇಯ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಬಳಸಬಾರದು. ಇದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ. ಇನ್ನು ನಿಮ್ಮ ಮನೆಯಲ್ಲಿ ಸಕಾರಾತ್ಮಕ ಚಿಂತನೆ ಹೆಚ್ಚಾಗಲು ಈ ಅಲೋವೆರವನ್ನು ಮನೆಯ ಬಾಗಿಲಿಗೆ ನೇತು ಹಾಕಬೇಕು. ಇನ್ನು ಮಂಗಳವಾರದಂದು ಬೆಳಗ್ಗೆ ಆರು ಗಂಟೆಯಿಂದ ಏಳು ಗಂಟೆಯೊಳಗೆ ಅಲೋವೆರವನ್ನು ಮನೆಯ ಬಾಗಿಲಿಗೆ ನೇತು ಹಾಕುವುದರಿಂದ ನಿಮಗೆ ಸಕಲ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಹಾಗು ಶನಿ ದೋಷ ನಿವಾರಣೆಯಾಗುತ್ತದೆ. ಹಣಕಾಸಿನ ಕಷ್ಟಗಳು ನಿವಾರಣೆಯಾಗುತ್ತವೆ. ಶುಕ್ರವಾರದಂದು ಪ್ರದೋಷ ಕಾಲದಲ್ಲಿ ಲಕ್ಷ್ಮೀ ದೇವಿಗೆ ಲೋಳೆರಸದ ನೈವೇದ್ಯವನ್ನು ಅರ್ಪಿಸುವುದರಿಂದ ಲಕ್ಷ್ಮಿ ಸಂತೃಪ್ತಳಾಗುತ್ತಾಳೆ ಎಂದು ಹೇಳಲಾಗಿದೆ. ಸ್ನೇಹಿತರೆ ಈ ಮಾಹಿತಿ ಇಷ್ಟವಾದ ಲ್ಲಿ ನಿಮ್ಮ ಸ್ನೇಹಿತರು ನಿಮ್ಮ ಆಪ್ತರಿಗೂ ಶೇರ್ ಮಾಡುವುದನ್ನು ಮರೆಯ ಬೇಡಿ.

Leave a Reply

Your email address will not be published. Required fields are marked *