ನಮಸ್ತೆ ಪ್ರಿಯ ಓದುಗರೇ, ತರಕಾರಿ ಮತ್ತು ಹಣ್ಣುಗಳು ನಮ್ಮ ದೇಹಕ್ಕೆ ಎಷ್ಟು ಪ್ರಾಮುಖ್ಯತೆಯನ್ನು ವಹಿಸುತ್ತದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಬೀಜಗಳು ಕೂಡ ಹೊಂದಿರುತ್ತವೆ. ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಅಗಸೆ ಬೀಜದ ಆರೋಗ್ಯಕರ ಲಾಭಗಳು ಮತ್ತು ಅದರಿಂದಾಗುವ ಹಲವಾರು ಪ್ರಯೋಜನಗಳನ್ನು ನೀವು ಈಗಾಗಲೇ ತಿಳಿದು ಕೊಂಡಿದ್ದೀರಿ ಗೆಳೆಯರೇ. ಆದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಅಗಸೆ ಬೀಜವನ್ನು ಯಾರು ತಿನ್ನಬೇಕು? ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಅಂತ ವಿವರವಾಗಿ ತಿಳಿಸಿಕೊಡುತ್ತೇವೆ ಬನ್ನಿ. ನಮ್ಮ ಈ ಆರೋಗ್ಯಕರ ಲೇಖನವನ್ನು ಪೂರ್ತಿಯಾಗಿ ಓದಿ.

ನಾವು ಸೇವಿಸುವ ಆಹಾರವು ಕೇವಲ ಲಾಭದಾಯಕವನ್ನೇ ಒಳಗೊಂಡಿರುತ್ತದೆ ಅಂತ ಭಾವಿಸುವುದು ತಪ್ಪಾಗುತ್ತದೆ ಗೆಳೆಯರೇ. ಪ್ರತಿಯೊಂದು ತರಕಾರಿ ಹಣ್ಣುಗಳು ಬೀಜಗಳು ನೂರೆಂಟು ಆರೋಗ್ಯಕರ ಗುಣಗಳನ್ನು ಹೊಂದಿದ್ದರು ಕೂಡ ಒಂದಲ್ಲ ಒಂದು ಅಡ್ಡ ಪರಿಣಾಮವನ್ನು ಬೀರುವ ಗುಣಗಳನ್ನು ಹೊಂದಿರುತ್ತದೆ. ಆದ್ದರಿಂದ ನಮ್ಮ ಹಿರಿಯರು ಹೇಳುತ್ತಾರೆ ಅತಿಯಾದರೆ ಅಮೃತವೂ ವಿಷ ಅಂತ. ಹೌದು ಇದು ನೂರಕ್ಕೆ ನೂರು ಸತ್ಯ ಗೆಳೆಯರೇ. ಆರೋಗ್ಯಕ್ಕೆ ಲಾಭವನ್ನು ಕೊಡುತ್ತದೆ ಅಂತ ಮಿತಿ ಮೀರಿ ತಿನ್ನುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಅಂತ ಖಚಿತ ಸ್ನೇಹಿತರೇ.

ಅಗಸೆ ಬೀಜವನ್ನು ಯಾರು ಸೇವನೆ ಮಾಡಬಾರದು ಅಂತ ಹೇಳುವುದಾದರೆ, ಗರ್ಭವತಿಯರು ಈ ಬೀಜವನ್ನು ಸೇವನೆ ಮಾಡಬಾರದು. ಒಂದು ವೇಳೆ ಸೇವನೆ ಮಾಡುವುದರಿಂದ ಗರ್ಭದಲ್ಲಿ ರಕ್ತದೊತ್ತಡ ಅಧಿಕವಾಗುತ್ತದೆ. ಮತ್ತು ಅಧಿಕ ಪ್ರಮಾಣದಲ್ಲಿ ಅಗಸೆ ಬೀಜವನ್ನು ತಿನ್ನುವುದರಿಂದ ವಾಕರಿಕೆ ಮತ್ತು ಅತಿಸಾರ ಉಂಟಾಗುತ್ತದೆ. ಇನ್ನೂ ಮಧುಮೇಹಿಗಳು ಯಾವುದೇ ಕಾರಣಕ್ಕೂ ವೈದ್ಯರ ಸಲಹೆಯನ್ನು ಪಡೆಯದೆ ಅಗಸೆ ಬೀಜವನ್ನು ಮುಟ್ಟಲು ಕೂಡ ಹೋಗಬಾರದು.

ಅವರ ಸಲಹೆಯನ್ನು ಪಡೆದುಕೊಂಡು ಸೇವನೆ ಮಾಡಬೇಕು. ಏಕೆಂದರೆ, ಮಧುಮೇಹಿಗಳು ವೈದ್ಯರ ಸಲಹೆ ತೆಗೆದುಕೊಂಡು ಶುಗರ್ ಲೆವೆಲ್ ಅನ್ನು ಕಡಿಮೆ ಮಾಡಿಕೊಳ್ಳಲು ಮಾತ್ರೆಗಳನ್ನು ಸೇವನೆ ಮಾಡುತ್ತಾ ಇರುತ್ತಾರೆ. ಇದರಿಂದ ಅವರ ಶುಗರ್ ಲೆವೆಲ್ ಅಥವಾ ದೇಹದಲ್ಲಿ ಸಕ್ಕರೆ ಮಟ್ಟವು ಕಡಿಮೆ ಆಗುತ್ತಿರುತ್ತದೆ. ಆದರೆ ಇದರ ಜೊತೆಗೆ ನೀವು ಅಗಸೆ ಬೀಜವನ್ನು ಸೇವಿಸಿದರೆ ನಿಮ್ಮ ರಕ್ತದಲ್ಲಿರುವ ಸಕ್ಕರೆಯ ಮಟ್ಟವು ಕಡಿಮೆ ಆಗುವುದರ ಜೊತೆಗೆ ರಕ್ತವು ತೆಳು ಆಗುತ್ತದೆ. ಇದರಿಂದ ದೇಹದ ಮೇಲೆ ಸಾಕಷ್ಟು ಅಡ್ಡ ಪರಿಣಾಮಗಳೂ ಬೀರಬಹುದು.

ಆದ್ದರಿಂದ ವೈದ್ಯರ ಸಲಹೆಯನ್ನು ಪಡೆಯದೆ ಯಾವುದೇ ರೀತಿಯ ಬೀಜಗಳನ್ನು ಸೇವಿಸಬೇಡಿ. ಇನ್ನೂ ಅಗಸೆ ಬೀಜವನ್ನು ಅಧಿಕ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಚರ್ಮದ ತುರಿಕೆ ಅಲರ್ಜಿ ಉಂಟಾಗುತ್ತದೆ. ಇನ್ನೂ ಹೆಚ್ಚು ಹೆಚ್ಚು ಅಗಸೆ ಬೀಜವನ್ನು ತಿನ್ನುವುದರಿಂದ ಸಣ್ಣ ಕರುಳನ್ನು ಬ್ಲೋಕೆಜ್ ಮಾಡುವ ಸಾಧ್ಯತೆ ಇರುತ್ತದೆ. ಜೊತೆಗೆ ಇದು ಸ್ತನ ಕ್ಯಾನ್ಸರ್ ರೋಗವನ್ನು ಉಂಟು ಮಾಡಲು ಕೂಡ ಕಾರಣವಾಗುತ್ತದೆ.

ಇನ್ನೂ ನಿತ್ಯವೂ ಅಗಸೆ ಬೀಜವನ್ನು ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಕೂಡ ತಂದೊಡ್ಡುತ್ತದೆ. ಆದ್ದರಿಂದ ಅಗಸೆ ಬೀಜವನ್ನು ತಿಂದು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ. ಇದರಿಂದ ಅಗಸೆ ಬೀಜವು ಚೆನ್ನಾಗಿ ಜೀರ್ಣವಾಗಿ ವಿಸರ್ಜನೆ ಆಗುತ್ತದೆ ಇಲ್ಲವಾದರೆ ಮಲಬದ್ಧತೆ ಸಮಸ್ಯೆ ಕಾಡಲು ಶುರು ಆಗುತ್ತದೆ.

ಇನ್ನೂ ಅಗಸೆ ಬೀಜವನ್ನು ಹೆಚ್ಚಾಗಿ ಸೇವಿಸಿದರೆ ದೇಹದಲ್ಲಿರುವ ರಕ್ತವು ತೆಳುವಾಗುತ್ತದೆ. ಒಂದು ವೇಳೆ ನಿಮಗೆ ಗಾಯವಾಗಿ ರಕ್ತಸ್ರಾವ ಆಗುತ್ತಿದ್ದರೆ ರಕ್ತವು ಬೇಗನೆ ಹೆಪ್ಪುಗಟ್ಟುತ್ತದೆ. ರಕ್ತವು ಬೇಗನೆ ಹೆಪ್ಪುಗಟ್ಟಿದರೆ ರಕ್ತಸ್ರಾವ ನಿಲ್ಲುತ್ತದೆ. ಆದ್ದರಿಂದ ಅಗಸೆ ಬೀಜವನ್ನು ಅಧಿಕವಾಗಿ ತಿನ್ನುವುದರಿಂದ ಕಡ್ಡಾಯವಾಗಿ ನಿಲ್ಲಿಸಿ.

ಅಗಸೆ ಬೀಜವನ್ನು ನಿಯಮಿತವಾಗಿ ಕಡಿಮೆ ಪ್ರಮಾಣದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಬಳಕೆ ಮಾಡಿ. ಇಷ್ಟು ಅಗಸೆ ಬೀಜವನ್ನು ಅಧಿಕ ಪ್ರಮಾಣದಲ್ಲಿ ತಿನ್ನುವುದರಿಂದ ಆಗುವ ಅಡ್ಡ ಪರಿಣಾಮಗಳು, ಹಾಗಾದರೆ ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *