ಬಾಡಿಗೆ ಮನೆಯಲ್ಲಿರುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ. ನಮ್ಮ ದೇಶದಲ್ಲಿ ಹೆಚ್ಚು ಜನ ಬಾಡಿಗೆ ಮನೆಯಲ್ಲೇ ವಾಸ ಮಾಡುತ್ತಾರೆ. ಸ್ವಂತ ಖರೀದಿ ಮಾಡಬೇಕೆಂಬ ಇಚ್ಛೆ ಎಲ್ಲರಿಗೂ ಇರುತ್ತದೆ ಆದರೆ ಕೆಲವರಿಗೆ ಸಾಧ್ಯವಾದ ಕಾರಣ ಬಾಡಿಗೆ ಮನೆಯಲ್ಲೇ ಇರುತ್ತಾರೆ. ಆದರೆ ಸರಕಾರಕ್ಕೆ ಎಲ್ಲರೂ ಸ್ವಂತ ಮನೆಯಲ್ಲಿ ಇರಲಿ ಎಂಬ ಆಸೆ ಇದೆ. ಅಷ್ಟೇ ಅಲ್ಲದೆ ಸರ್ಕಾರವು ಕೆಡವರ್ಗದ ಜನರಿಗೆ ಸ್ವಂತ ಮನೆಯ ಯೋಜನೆಯನ್ನು ಕೂಡ ನಿರ್ಮಿಸಿದೆ. ಕೆಳವರ್ಗದ ಜನರಿಗೆ ಸ್ವಂತ ಸೂರನ್ನ ನಿರ್ಮಿಸಿ ಕೊಟ್ಟಿದೆ.

ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಎಲ್ಲರಿಗೂ ಕೂಡ ಸ್ವಂತ ಮನೆ ಸಿಗಬೇಕು ಎನ್ನುವ ಆಸೆಯು ಸರ್ಕಾರಕ್ಕೆ ಆದರೆ ಎಲ್ಲ ನಾಗರಿಕರಿಗೂ ಮನೆಯನ್ನ ಒದಗಿಸಿಕೊಡಲಿಕ್ಕೆ ಸರ್ಕಾರಕ್ಕೆ ಸ್ವಲ್ಪ ಸಮಯ ಬೇಕು. ದೊಡ್ಡ ದೊಡ್ಡ ಶಹರಗಳಿಂದ ಹಿಡಿದು ಸಣ್ಣ ಸಣ್ಣ ಹಳ್ಳಿಯವರೆಗೂ ಬಹಳ ಜನರು ಬಾಡಿಗೆ ಮನೆಯಲ್ಲೇ ವಾಸ ಮಾಡುತ್ತಾರೆ. ನೀವು ಒಂದು ವೇಳೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರೆ ಮಾಲೀಕತ್ವದ ಕೆಲವು ನಿಯಮಗಳನ್ನ ನೀವು ತಿಳಿದುಕೊಳ್ಳಬೇಕಾಗುತ್ತದೆ.

ಯಾವುದೇ ಕಾರಣಕ್ಕೂ ನೀವು ಮಾಲೀಕರಿಂದ ಮೋಸ ಹೋಗಬಾರದು. ಆದ್ದರಿಂದ ಕೆಲವು ನಿಯಮಗಳನ್ನು ನೀವು ತಿಳಿದುಕೊಳ್ಳಲೇಬೇಕು. ನಾವು ಬಾಡಿಗೆ ಮನೆಗೆ ಹೋಗುತ್ತೇವೆ ಮಾಲೀಕರು ಮತ್ತು ನಮ್ಮ ನಡುವೆ ಒಂದು ಅಗ್ರಿಮೆಂಟ್ ಕ್ರಿಯೇಟ್ ಆಗುತ್ತದೆ. ನಾವು ಅಗ್ರಿಮೆಂಟಿಗೆ ಸೈನ್ ಹಾಕುತ್ತೇವೆ. ಹಾಗಾದ್ರೆ ಆ ಅಗ್ರಿಮೆಂಟ್ ಅಲ್ಲಿ ಏನಿರುತ್ತದೆ? ಅಂದರೆ ಲೈಟ್ ಬಿಲ್ಲನ್ನ ನಾವೇ ಕಟ್ಟಬೇಕು ವಾಟರ್ ಬಿಲನ್ನು ಕೂಡ ನಾವೇ ಕಟ್ಟಬೇಕು ಮನೆಯ ಪೈಂಟ್ ಹೋದರೆ ನಾವೇ ಹಾಕಿಸಿಕೊಡಬೇಕು.

ಹಾಗೆಯ ಮನೆಯ ಯಾವುದೇ ವಸ್ತು ಡ್ಯಾಮೇಜ್ ಆದರೂ ಕೂಡ ಅದನ್ನು ನಾವು ರಿಪೇರಿ ಮಾಡಿಸಿ ಕೊಡಬೇಕು. ಈ ರೀತಿ ಹಲವಾರು ಶರತ್ತುಗಳು ಅಗ್ರಿಮೆಂಟ್ ನಲ್ಲಿ ಬರೆದಿರುತ್ತದೆ. ಈಗ 11 ತಿಂಗಳುಗಳ ಕಾಲ ಅಗ್ರಿಮೆಂಟ್ ಇರುತ್ತದೆ. ಅಗ್ರಿಮೆಂಟ್ ಮುಗಿದ ಮೇಲೆ ಬೇರೆ ಹೊಸದೊಂದು ಅಗ್ರಿಮೆಂಟನ್ನು ನಾವು ಪುನಃ ಮಾಡಿಕೊಳ್ಳಬೇಕು. ಒಂದು ವೇಳೆ ಅಗ್ರಿಮೆಂಟನ್ನು ಮಾಡದೆ ಹೋದಲ್ಲಿ ಆ ವ್ಯಕ್ತಿಯು 12 ವರ್ಷ ಆ ಮನೆಯಲ್ಲಿ ಉಳಿದ ಅಗ್ರಿಮೆಂಟ್ ಇಲ್ಲದೆ ಅಂತಾದರೆ ಎಲ್ಲ ರೀತಿಯಲ್ಲಿಯೂ ಕೋರ್ಟ್ ನಲ್ಲಿ ಆ ಮನೆಯ ತನ್ನದೇ ಸ್ವಂತ ಅಂತ ದಾವೆಯನ್ನು ಹಾಕಬಹುದು. ಆದ್ದರಿಂದ ಮಾಲೀಕರೇ ಸ್ವಲ್ಪ ಎಚ್ಚರದಿಂದಿರಿ. ಆದ್ದರಿಂದ ಮನೆಯನ್ನು ಬಾಡಿಗೆಗೆ ಕೊಡುವವರು ಯಾವುದೇ ಕಾರಣಕ್ಕೂ 12 ವರ್ಷದವರೆಗೆ ಬಾಡಿಗೆಗೆ ಕೊಡಬಾರದು. ಮಧ್ಯದಲ್ಲಿ ಬದಲಾವಣೆ ಮಾಡುತ್ತಿರಬೇಕು. ಈ ವಿಚಾರವಾಗಿ ಮನೆಯ ಓನರ್ಗಳು ತುಂಬಾ ಹುಷಾರಾಗಿ ಇರುವುದು ಒಳ್ಳೆಯದು. ಸ್ನೇಹಿತರೆ ಮುಂದಿನ ಮತ್ತೊಂದು ಹೊಸ ಮಾಹಿತಿಯೊಂದಿಗೆ ಭೇಟಿಯಾಗೋಣ. ನಮ್ಮ ಈ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *