ನಮಸ್ತೆ ಪ್ರಿಯ ಓದುಗರೇ, ಸೋಲು ಗೆಲುವು ಅನ್ನುವುದು ಒಂದು ಮುಖದ ಎರಡು ನಾಣ್ಯಗಳು ಇದ್ದ ಹಾಗೆ. ಸೋತ ವ್ಯಕ್ತಿ ಇಂದಲ್ಲ ನಾಳೆಗೆ ಯಶಸ್ಸು ಕಾಣೆ ಕಾಣುತ್ತಾನೆ. ಆದರೆ ಕೆಲವರು ಒಂದೆರಡು ಬಾರಿ ಸೋತರೆ ತನ್ನ ಗುರಿಯತ್ತ ಸಾಗುವುದನ್ನು ನಿಲ್ಲಿಸಿ ಬಿಡುತ್ತಾರೆ. ಆದರೆ ಈ ವ್ಯಕ್ತಿ ಒಂದಲ್ಲ ಎರಡಲ್ಲ ಸುಮಾರು 1009 ಪ್ರಯತ್ನ ಮಾಡಿ ಸೋಲನ್ನು ಉಂಡು ಉಂಡು ಕೊನೆಗೆ ಗೆಲುವನ್ನ ಗೆದ್ದ ವ್ಯಕ್ತಿ ಹಾಗೆಯೇ ತನ್ನ 65 ನೇ ವಯಸ್ಸಿನಲ್ಲಿ ಯಶಸ್ಸು ಗೆದ್ದ ವ್ಯಕ್ತಿ ಯಾರು ಗೊತ್ತೇ? ಅವರೇ ಹರ್ಲ್ಯಾಂಡ್ ಡೇವಿಡ್ ಸ್ಯಾಂಡರ್ಸ್.

ಇವರು ಕೆಎಫ್ಸಿ ಅಂದರೆ ಕೆಂಟುಕಿ ಫ್ರೈಡ್ ಚಿಕನ್ ಕಂಪನಿಯ ದೊಡ್ಡ ಮಾಲೀಕ. ಈ ವ್ಯಕ್ತಿಯ ಜನನ ಸೆಪ್ಟೆಂಬರ್ 9,1890 ಅಮೆರಿಕಾದ ಹೆನ್ರಿ ವಿಲಿಯಂ ಎಂಬ ನಗರದಲ್ಲಿ ತುಂಬಾನೇ ಬಡ ಕುಟುಂಬದಲ್ಲಿ ಜನಿಸಿರುತ್ತಾರೆ. ಇವರು ಮೂರು ಜನ ಸಹೋದರ ಮತ್ತು ಸಹೋದರಿಯನ್ನು ಹೊಂದಿದ್ದು ಅವರಲ್ಲಿ ಇವರೇ ದೊಡ್ಡವರಾಗಿರುತ್ತಾರೆ. ಐದು ವರ್ಷದಲ್ಲಿ ತಂದೆಯನ್ನು ಕಳೆದುಕೊಂಡ ಇವರು ಮತ್ತು ಸಹೋದರರು ಹಾಗೆಯೇ ತಾಯಿಗೆ ಜೀವನ ನಡೆಸಲು ತುಂಬಾನೇ ಕಷ್ಟದಾಯಕ ಆಗುತ್ತದೆ ಆದ ಕಾರಣ ಇವರು ಒಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ನಿರ್ಧಾರ ಮಾಡಿ ಅಲ್ಲಿಗೆ ಸೇರಿಕೊಳ್ಳುತ್ತಾರೆ.

ಮನೆಯಲ್ಲಿ ಸಹೋದರ ಮತ್ತು ಸಹೋದರಿಯನ್ನು ಇವರೇ ನೋಡಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಇವರ ತಾಯಿ 1902 ರಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಇಷ್ಟ ಪಟ್ಟು ಮದುವೆ ಆಗುತ್ತಾರೆ. ಆದರೆ ಇವರ ತಾಯಿ ಇವರು ಚಿಕ್ಕವನಿಂದಾಗಲೇ ಚಿಕನ್ ಮಾಡುವುದು ಹೇಗೆ ಅಂತ ಕಲಿಸಿ ಕೂಡ ಕೊಟ್ಟಿರುತ್ತಾರೆ. ಆದರೆ ಇವರ ತಾಯಿಯ ಎರಡನೆಯ ಮದುವೆ ಇವರಿಗೆ ಅಸಮಾಧಾನದಾಯಕ ಆಗಿರುತ್ತದೆ. ಹೊಸ ತಂದೆಯ ಜೊತೆಗೆ ಡೇವಿಡ್ ಸ್ಯಾಂಡರ್ಸ್ ಅವರ ವ್ಯವಹಾರ ಅವರ ಒಡನಾಟ ಸ್ವಲ್ಪವೂ ಚೆನ್ನಾಗಿ ಇರುವುದಿಲ್ಲ. ಆದ ಕಾರಣ ಈ ವ್ಯಕ್ತಿ 1903 ತಮ್ಮ ತಾಯಿ ಮತ್ತು ಹೊಸ ತಂದೆಯನ್ನು ತೊರೆದು ಮನೆ ಬಿಟ್ಟು ಹೋಗುತ್ತಾರೆ.

ತುಂಬಾನೇ ಚಿಕ್ಕ ವಯಸ್ಸಿನಲ್ಲಿ ಮನೆ ಬಿಟ್ಟು ಬಂದ ಇವರು ಹೊಟ್ಟೆ ಪಾಡಿಗೆ ಹಲವಾರು ಸ್ಥಳಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಆದರೆ ಯಾವುದೇ ರೀತಿಯಲ್ಲಿ ದೃಢವಾದ ಕೆಲಸವನ್ನು ಮಾಡುವುದಿಲ್ಲ. ತದ ನಂತರ ಇವರು ರೈಲ್ವೆ ಇಲಾಖೆಯಲ್ಲಿ ಫೈಯರ್ ಮ್ಯಾನ್ ಆಗಿ 1909 ರಲ್ಲೀ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಅಂತಹ ಸಮಯದಲ್ಲಿ ಒಂದು ಹುಡುಗಿಯ ಪರಿಚಯ ಆಗಿ ಇಬ್ಬರು ಪ್ರೀತಿ ಮಾಡಿ ಮದುವೆ ಆಗುತ್ತಾರೆ ಸುಂದರವಾದ ವೈವಾಹಿಕ ಜೀವನದಲ್ಲಿ ಇವರಿಗೆ ಒಂದು ಗಂಡು ಮಗು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಪಡೆಯುತ್ತಾರೆ.

ಹೀಗೆ ಉತ್ತಮವಾದ ಹಾದಿಯಲ್ಲಿ ಸಂಸಾರ ನಡೆಯುವಾಗ ಇವರು ಕೆಲಸ ಮಾಡುವ ರೇಲ್ವೆ ಇಲಾಖೆಯಲ್ಲಿ ಒಬ್ಬ ವ್ಯಕ್ತಿಯ ಜೊತೆಗೆ ಜಗಳವಾದ ಕಾರಣ ಇವರನ್ನು ಕೆಲಸದಿಂದ ಹೊರಗೆ ಹಾಕುತ್ತಾರೆ. ಈ ಕಾರಣದಿಂದ ಜೊತೆಗೆ ಕುಟುಂಬದಲ್ಲಿ ಕೆಲವು ಭಿನ್ನಾಭಿಪ್ರಾಯದಿಂದ ಇವರ ಹೆಂಡತಿ ಮಕ್ಕಳು ಇವರು ತೊರೆಯುತ್ತಾರೆ. ಇದೇ ಕಾರಣಕ್ಕೆ ಇವರು ತುಂಬಾನೇ ಖಿನ್ನತೆಗೆ ಒಳಗಾಗುತ್ತಾರೆ ಜೊತೆಗೆ ತುಂಬಾ ದಿನಗಳವರೆಗೆ ನಿರುದ್ಯೋಗಿ ಆಗಿ ಉಳಿದು ಬಿಡುತ್ತಾರೆ. ಹೀಗೆ ಜೀವನ ಸಾಗದು ಅಂತ ಕೆಲವು ಬ್ಯುಸಿನೆಸ್ ಗೆ ಕೈ ಹಾಕುತ್ತಾರೆ ಆದರೆ ಯಾವುದೆ ಪ್ರಯೋಜನ ಆಗುವುದಿಲ್ಲ. 1930 ರಲ್ಲಿ ಕೆಂಟುಕಿ ಕಾರ್ಬಿನ್ ಎಂಬ ಗ್ಯಾಸ್ ಸ್ಟ್ರೇಷನ್ ಪಕ್ಕ ಶುರು ಮಾಡುತ್ತಾರೆ ಅಲ್ಲಿ ಯಾವುದೇ ರೀತಿಯ ರೆಸ್ಟೋರೆಂಟ್ ಇರುವುದಿಲ್ಲ.

ಅದಕ್ಕಾಗಿ ಇವರೇ ಸ್ವಂತ ರೆಸ್ಟೋರೆಂಟ್ ಉದ್ಘಾಟನೆ ಮಾಡಿ ಅಲ್ಲಿ ಇವರು ಚಿಕನ್ ಅನ್ನು ತಯಾರಿಸಿ ಸರ್ವ್ ಮಾಡುವ ಬಿಸಿನೆಸ್ ಅನ್ನು ಶುರು ಮಾಡುತ್ತಾರೆ. ಹಾಗೆಯೇ ವಿವಿಧೆಡೆಗೆ ಇವರ ಬ್ರಾಂಚ್ ಗಳನ್ನು ಕೂಡ ಶುರು ಮಾಡುತ್ತಾರೆ ಆದರೆ ಯಾವ ಬಿಸಿನೆಸ್ ಕೂಡ ಅಷ್ಟೊಂದು ಚೆನ್ನಾಗಿ ಓಡುವುದಿಲ್ಲ ಹಾಗೆಯೇ ಗ್ಯಾಸ್ ಸ್ಟ್ರೇಶನ್ ಪಕ್ಕ ಇರುವ ರೆಸ್ಟೋರೆಂಟ್ ಅನ್ನು ಕೂಡ ಹೈ ವೇ ಅಗಲುದ್ದವನ್ನು ಮಾಡಲು ಇದನ್ನು ಒಡೆದು ಹಾಕುತ್ತಾರೆ. ಆಗ ಇವರು ಮತ್ತೆ ಸೋಲನ್ನು ಉಣ್ಣುತ್ತಾರೆ. ನಿರುದ್ಯೋಗಿ, ಖಿನ್ನತೆ ಅನ್ನುವುದು ಬೆನ್ನಬಿಡದ ಹಾಗೆ ಕಾಡುತ್ತಲೇ ಇರುತ್ತದೆ ಇದರಿಂದ ಇವರು ಮತ್ತಷ್ಟು ಕುಸಿಯುತ್ತಾರೆ.

ಆಗ ಇವರಿಗೆ ಅರವತ್ತು ವಯಸ್ಸು. ಕೊನೆಯದಾಗಿ ಇವರು ಕೆಂಟುಕಿ ಮಸಾಲಾ ಚಿಕನ್ ಫಾರ್ಮುಲಾ ಇಟ್ಟುಕೊಂಡು ಅನೇಕ ಹೋಟೆಲ್ ಗಳಿಗೆ ಹೋಗಿ ಕೆಲಸವನ್ನು ಕೇಳುತ್ತಾರೆ. ಆದರೆ ಅವರಿಗೆ ಯಾರೂ ಕೆಲಸವನ್ನು ಕೊಡುವುದಿಲ್ಲ. ನಂತರ ಪೇಟೆ ಹಾರ್ಮೋನ್ ಎಂಬ ವ್ಯಕ್ತಿ ಅನೇಕ ಹೋಟೆಲ್ ಗಳ ಮಾಲೀಕರು ಆಗಿರುತ್ತಾರೆ ಆಗ ಈ ವ್ಯಕ್ತಿಗೆ ಇವರ ಪರಿಚಯ ಆಗುತ್ತದೆ. ಆಗ ಈ ವ್ಯಕ್ತಿಗೆ ಮಸಾಲ ಚಿಕನ್ ಫಾರ್ಮುಲಾ ಇಷ್ಟವಾಗುತ್ತದೆ ಅದನ್ನು ಶುರು ಮಾಡುತ್ತಾರೆ ಆಗ ಇವರ ಬಿಜಿನೆಸ್ ಆದಾಯ ಎರಡು ಪಟ್ಟು ಹೆಚ್ಚಾಗುತ್ತದೆ. ಹೀಗೆ 1952 ಕೆಂಟುಕಿ ಫ್ರೈಡ್ ಚಿಕನ್ ಅನ್ನು ಓಪನ್ ಮಾಡುತ್ತಾರೆ ಅಂದರೆ ಕೆ, ಎಫ್,ಸಿ ಅನ್ನು.

ನಂತರ ಈ ಡೇವಿಡ್ ಸ್ಯಾಂಡರ್ಸ್ ಅನ್ನುವವರು ಎಂದಿಗೂ ಹಿಂತಿರುಗಿ ನೋಡಲಿಲ್ಲ. ಒಬ್ಬ ಶ್ರೀಮಂತ ದೊಡ್ಡ ಬಿಜಿನೆಸ್ ಮ್ಯಾನ್ ಆಗಿ ಇವರು ದೇಶಕ್ಕೆ ಜಗತ್ತಿಗೆ ಚಿರಪರಿಚಿತರು ಆಗುತ್ತಾರೆ. 125 ದೇಶದಲ್ಲಿ, ಹಾಗೆಯೇ 1000 ಕ್ಕೂ ಹೆಚ್ಚು ಕೆ, ಎಫ್ ಸಿ ರೆಸ್ಟೋರೆಂಟ್ ಗಳು ಇವೆ. ಹಾಗೆಯೇ ಈ ವ್ಯಕ್ತಿ 90 ವಯಸ್ಸಿನಲ್ಲಿ ನಿಧನರಾಗುತ್ತಾರೆ ಆದರೆ ಸಾಧನೆ ಅನ್ನುವುದು ಇನ್ನೂ ಅಮರವಾಗಿ ಉಳಿದಿದೆ. ಈ ಲೇಖನದ ಉದ್ದೇಶ ಯಾವತ್ತಿಗೂ ಜೀವನದಲ್ಲಿ ನಂಬಿಕೆಯನ್ನು ಕಳೆದುಕೊಳ್ಳಬಾರದು. ಸತತವಾದ ಪ್ರಯತ್ನಕ್ಕೆ ಖಂಡಿತವಾಗಿ ಯಶಸ್ಸು ಅನ್ನುವುದು ಸಿಕ್ಕೆ ಸಿಗುತ್ತದೆ. ಶುಭದಿನ.

Leave a Reply

Your email address will not be published. Required fields are marked *