ಇತ್ತೀಚಿಗೆ ಬಿಡುಗಡೆಯಾದಂತ ಅಂಗನವಾಡಿ ಹುದ್ದೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ ಹತ್ತನೇ ತರಗತಿ ಹಾಗೂ ಪಿಯುಸಿ ಪಾಸಾಗಿರುವ ಅಭ್ಯರ್ಥಿಗಳಿಂದ ಅಂಗನವಾಡಿ, ಟೀಚರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ವಯೋಮಿತಿ ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ಗರಿಷ್ಠ ಮೂವತೈದು ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಿಕಲ ಚೇತನರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ವಿಧಾನ, ಅಭ್ಯರ್ಥಿಗಳು ವಿದ್ಯಾರ್ಹತೆಯಲ್ಲಿ ಪಡೆದ ಅಂಕ ಮತ್ತು ಬೋನಸ್ ಅಂಕಗಳನ್ನು ಒಳಗೊಂಡಂತೆ ಪಡೆದ ಒಟ್ಟು ಅಂಕಗಳಿಗೆ ಅನುಸಾರವಾಗಿ ಕ್ರೋಡೀಕೃತ ಪಟ್ಟಿಯನ್ನು ಸಿದ್ಧಪಡಿಸಿ ಅರ್ಹತೆ ಮತ್ತು ಮೆರಿಟ್ ಗೆ ಅನುಸಾರವಾಗಿ ಪರಿಶೀಲಿಸಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ಲಿಂಕ್ https://karnatakajobinfo.com/wcd-tumkur-anganwadi-recruitment-2024-apply-online-for-384-anganwadi-workers-and-anganwadi-helpers-posts/ಹುದ್ದೆಯ ಹೆಸರು ಅಂಗನವಾಡಿಯ ಕಾರ್ಯಕರ್ತೆಯರು ಹಾಗೂ ಅಂಗನವಾಡಿಯ ಸಹಾಯಕಿಯರು. ಹುದ್ದೆಗಳ ಸಂಖ್ಯೆ ಒಟ್ಟು 480 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಅದರಲ್ಲಿ ಅಂಗನವಾಡಿಯ ಕಾರ್ಯಕರ್ತೆಯರು 137 ಹುದ್ದೆ, ಅಂಗನವಾಡಿಯ ಸಹಾಯಕಿಯರು 343 ಹುದ್ದೆ ಖಾಲಿ ಇದೆ.ಉದ್ಯೋಗ ಸ್ಥಳ, ತುಮಕೂರು ಹಾಗೂ ಬೀದರ್ ಜಿಲ್ಲೆ ತುಮಕೂರಿನಲ್ಲಿ ಚಿಕ್ಕ ನಾಯಕನಹಳ್ಳಿ ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ, ಗುಬ್ಬಿ, ತಿಪಟೂರು, ತುರುವೇಕೆರೆ, ಕುಣಿಗಲ್, ತುಮಕೂರು, ತುಮಕೂರು, ಅರ್ಬನ್ ಹಾಗೂ ಬೀದರ್ ಜಿಲ್ಲೆ.

ವಿದ್ಯಾರ್ಹತೆ, ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಕನಿಷ್ಠ ಪಿಯುಸಿ ತೇರ್ಗಡೆ ಹೊಂದಿರಬೇಕು. ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು. ಅಂಗನವಾಡಿ ಸಹಾಯಕಿಯರ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಒಂದು ವೇಳೆ ನೀವು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ನೋವು ಮೇಲ್ಗಡೆ ಕೊಟ್ಟಿರುವಂತಹ ಲಿಂಕನ್ನು ಓಪನ್ ಮಾಡಿಕೊಂಡು ಅಲ್ಲಿ ಕಾಣುವಂತಹ ಅರ್ಜಿ ಸಲ್ಲಿಕೆಯ ಬಟನನ್ನು ಒತ್ತಿ ನೀವು ಹಾಕಬಹುದು.

ಅರ್ಜಿ ಸಲ್ಲಿಸುವ ದಿನಾಂಕ ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ 10 ಜನವರಿ 2024 ಅರ್ಜಿ.ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ ಐದನೇ ತಾರೀಕು ನಿಮಗೆ ಮುಖ್ಯವಾಗಿ ಬೇಕಾಗಿರುವಂತಹ ದಾಖಲಾತಿಗಳು ಯಾವ್ಯಾವು ಎಂದರೆ ನಿಮ್ಮ ಜನನ ಪ್ರಮಾಣ ಪತ್ರ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್. ಒಂದು ವೇಳೆ ನೀವು ಅಂಗವಿಕಲರಾಗಿದ್ದರೆ ಅಂಗವಿಕಲತೆ ಸರ್ಕಾರದಿಂದ ಮಾನ್ಯತೆ ಪಡೆದಿರುವಂತಹ ದಾಖಲಾತಿ ನೀವು ನೀಡಬೇಕಾಗುತ್ತದೆ.ಹಾಗೆ ನಿಮ್ಮ ತಶೀಲ್ದಾರ ಆಫೀಸರಿಂದ ಮಾನ್ಯತೆ ಪಡೆದಿರುವಂತಹ ಮೂರು ವರ್ಷದ ಸದ್ಯದ ವಾಸ ಸ್ಥಳದ ಪ್ರಮಾಣ ಪತ್ರ

Leave a Reply

Your email address will not be published. Required fields are marked *