ಕೆಲವೊಬ್ಬರು ಹುಟ್ಟಿರುವುದೇ ಜನಸೇವೆಗೆ ಎಂದು ಅನಿಸುತ್ತದೆ. ಹೌದು ಜಿಲ್ಲಾಧಿಕಾರಿಯಾಗಬೇಕು ಎಂದರೆ ಎಷ್ಟು ವರ್ಷಗಳ ಕನಸುಗಳನ್ನು ಕಟ್ಟಿಕೊಂಡು ಹಗಲು ರಾತ್ರಿ ಅಲ್ಲದೆ ಕಷ್ಟಪಟ್ಟು ಓದುತ್ತಾರೆ ನಂತರ ಓದಿ ಬಂದು ಜಿಲ್ಲಾಧಿಕಾರಿ ಆದಾಗ ಮೇಲಿರುವ ಶಾಸಕರ ಒತ್ತಾಯದಿಂದ ತಮ್ಮ ಕೆಲಸದಲ್ಲಿ ಲೋಪಗಳು ಕಂಡು ಬರುತ್ತವೆ ಆದರೆ ಕೆಲವೊಂದು ಅಧಿಕಾರಿಗಳು ಶಾಸಕರನ್ನು ಧಿಕ್ಕರಿಸಿ ಕೂಡ ತಮ್ಮ ಕೆಲಸದ ಮೇಲೆ ಹೆಚ್ಚು ಜಾಗೃತಿ ವಹಿಸುತ್ತಾರೆ ಅಂತಹ ಅಧಿಕಾರಗಳಲ್ಲಿ ಇವತ್ತಿನ ಹೇಳುವಂತಹ ಅಧಿಕಾರಿಯೊಬ್ಬರೂ ಕೂಡ.

ಜಿಲ್ಲಾಧಿಕಾರಿ ಕೂಡ ಜನರು ಸ್ವಚ್ಛವಾದ ನೀರು ಕುಡಿಯಬೇಕು ಎಂದು ಎಂತಹ ಸಾಹಸಕ್ಕೂ ಹಿಂಜರಿಯಲಿಲ್ಲ ಗೊತ್ತಾ ಹಾಗಾದರೆ ಈಕೆ ಮಾಡಿದ್ದಾದರೂ ಏನು ಎಂದು ನೋಡೋಣ ಬನ್ನಿ ಕರ್ನಾಟಕದವರಾದ ಶಿಲ್ಪಾ ಪ್ರಭಾಕರ್ ಅವರು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿದ್ದ ಕಾರಣ ಜಿಲ್ಲೆ ದಿನ ಸ್ವಚ್ಛವಾದ ನೀರು ಕುಡಿಯುತ್ತಿದ್ದಾರಾ ಎಂದು ವಾಟರ್ ಟ್ಯಾಂಕ್ ಗಳನ್ನು ಪರಿಶೀಲನೆ ಮಾಡಲು ಹೊರಟರು.

ಶಿಲ್ಪ ಅವರು ವಾಟರ್ ಟ್ಯಾಂಕ್‌ಗಳ ಬಳಿ ಹೋದಾಗ ಅಲ್ಲಿನ ಸಿಬ್ಬಂದಿ ಎಲ್ಲ ಸ್ವಚ್ಛವಾಗಿದೆ ಎಂದು ಹೇಳಿದರು ಅವರು ನಂಬಿಸಿ, ಅವರನ್ನು ಮನೆಗೆ ಕಳಿಸುವ ವಿಚಾರ ಅಲ್ಲಿರುವ ಸಿಬ್ಬಂದಿಗಳಿಗೆ ಇತ್ತು, ಆದರೆ ಶಿಲ್ಪಾ ಅವರ ಮನಸ್ಸು ಒಪ್ಪಲಿಲ್ಲ ಹಾಗಾಗಿ ಶಿಲ್ಪ ಅವರು ಟ್ಯಾಂಕ್‌ಗಳು ಸ್ವಚ್ಛವಾಗಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಏಕಾಏಕಿ 140 ಅಡಿ ಟ್ಯಾಂಕ್ ಹತ್ತಿಬಿಟ್ಟರು. ಶಿಲ್ಪ ಪ್ರಭಾಕರ್ ಅವರ ಸಾಹಸವನ್ನು ನೋಡಿ ಅವರ ಜೊತೆ ಬಂದಿದ್ದ ಸಿಬ್ಬಂದಿ ಒಂದು ಕ್ಷಣ ಶಾಕ್ ಆದರು ಅಷ್ಟು ಎತ್ತರದ ಟ್ಯಾಂಕ್ ಹತ್ತಲು ಗಂಡಸು ಸಹ ಭಯ ಪಡುತ್ತಾರೆ.

ಆದರೆ ಹಿಂದೆ ಮುಂದೆ ನೋಡದೆ ವಾಟರ್ ಟ್ಯಾಂಕ್ ತುತ್ತ ತುದಿಗೆ ಹತ್ತಿದರು. ಜಿಲ್ಲಾಧಿಕಾರಿ ಶಿಲ್ಪಾ ಅವರು ಟ್ಯಾಂಕ್ ಒಳಗೆ ಪರಿಶೀಲಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಇನ್ನಷ್ಟು ಕ್ಲೀನಾಗಿ ಇರುವಂತೆ ಎಚ್ಚರಿಕೆ ಕೊಟ್ಟರು. ಮತ್ತೆ ಇನ್ನೊಂದು ಸ್ಥಳಕ್ಕೆ ಹೋಗಿ ಅಲ್ಲಿಯೂ ಟ್ಯಾಂಕ್ ಹತ್ತಿ ಪರಿಶೀಲಿಸಿದರು ಈ ಜಿಲ್ಲಾಧಿಕಾರಿ. ಇದನ್ನು ಕಂಡು ಬ್ಯಾಂಕ್ ಸಿಬ್ಬಂದಿ ಬೆಚ್ಚಿ ಬಿದ್ದರು. ನಾನು ಯಾವುದೇ ಕ್ಷಣ ಬಂದು ಚೆಕ್ ಮಾಡ್ತೀನಿ. ಕ್ಲೀನ್ ಆಗಿಲ್ಲ ಅಂದ್ರೆ ಸಸ್ಪೆಂಡ್ ಮಾಡ್ತೀನಿ ಎಂದು ಎಚ್ಚರಿಕೆ ರವಾನಿಸಿದ್ದಾರೆ. ಶಿಲ್ಪ ಪ್ರಭಾಕರ್ ಶುದ್ಧ ನೀರನ್ನು ಪೂರೈಸಿದರೆ ಅರ್ಧಕ್ಕಿಂತ ಹೆಚ್ಚು ರೋಗಗಳನ್ನು ನಿಯಂತ್ರಿಸಬಹುದು.

ಹಾಗೆ ಜನರಿಗೆ ಒಳ್ಳೆಯ ನೀರು ಪೂರೈಸುವುದು ನನ್ನ ಕರ್ತವ್ಯ ಎಂದು ಹೇಳಿದ ಶಿಲ್ಪ ಅವರು ನನಗೆ ವಾಟರ್‌ಟ್ಯಾಂಕ್ ಹತ್ತಿದ ಯಾವುದೇ ಅನುಭವ ಇರಲಿಲ್ಲ. ಇದೇ ಮೊದಲ ಬಾರಿಗೆ ಹತ್ತಿದ್ದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚೆಗೆ ತನ್ನ ಮಗಳನ್ನು ಯಾವುದು ಇಂಟರ್ ನ್ಯಾಷನಲ್ ಸ್ಕೂಲ್ ಗೆ ಕಳುಹಿಸಿದ ಶಿಲ್ಪಾ ಪ್ರಭಾಕರ್ ಮಗಳನ್ನು ಸ್ವತಹ ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿದ್ದಾರೆ ಎಂದು ಸುದ್ದಿ ಇದೆ.

Leave a Reply

Your email address will not be published. Required fields are marked *