ಮೂವತ್ತು ದಾಟಿದ ನಂತರ ನನಗೆ ದೇಹ ಅನಿರೀಕ್ಷಿತ ಉಡುಗೊರೆಗಳನ್ನು ನೀಡಿತು. ಅವು ಬೇರೇನು ಅಲ್ಲ, ಕೆಲವು ಆರೋಗ್ಯ ಸಮಸ್ಯೆಗಳು. ಆದರೆ ಆ ಪೈಕಿ ಅತ್ಯಂತ ಕೆಟ್ಟದ್ದು ಎಂದರೆ ಆ್ಯಸಿಡಿಟಿ ಎನ್ನುತ್ತಾರೆ ಚಾಂದಿನಿ ಸೆಹಗಲ್. ಅವರಂತೆ ಹಲವಾರು ಮಂದಿ ನಿತ್ಯವೂ ಆ್ಯಸಿಡಿಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವವರು ನಮ್ಮ ನಡುವೆ ಇದ್ದಾರೆ. ಚಾಂದಿನಿ ಅವರ ಪ್ರಕಾರ, ಎದೆನೋವು , ತಲೆನೋವು ಮತ್ತು ವಸಡು ಜುಮ್ಮೆನಿಸುವುದು ಮುಂತಾದ ತೊಂದರೆಗಳು ಆರಂಭವಾದಾಗ ನನಗೆ ಹೃದಯಾಘಾತ ಆಗಬಹುದು. ಅಥವಾ ಪಾರ್ಶ್ವವಾಯು ಉಂಟಾಗಬಹುದು ಎಂದು ಭಯಭೀತಳಾಗಿದ್ದೆ. ಪರೀಕ್ಷಿಸಿಕೊಳ್ಳಲು ಹೋದಾಗ ವೈದ್ಯರು ಇದಕ್ಕೆಲ್ಲಾ ಕೊಟ್ಟ ಒಂದೇ ಕಾರಣ ಆ್ಯಸಿಡಿಟಿ. ಬಹುಪಾಲು ಜನರಿಗೆ ಆ್ಯಸಿಡಿಟಿಯ ಕುರಿತು ಕಾಡುವ ಪ್ರಶ್ನೆಗಳಿಗೆ ತಜ್ಞರು ಇಲ್ಲಿ ಉತ್ತರ ನೀಡಿದ್ದಾರೆ. ಬೈಲೆ ಮತ್ತು ಹೊಟ್ಟೆಯ ಆ್ಯಸಿಡ್ಗಳು ಗುರುತ್ವಾಕರ್ಷಣೆಯ ವಿರುದ್ಧ ಹೋದಾಗ- ಅವು ಫುಡ್ಪೈಪ್ನ ಮೇಲ್ಭಾಗಕ್ಕೆ ಬಂದು ಕಿರಿಕಿರಿ ಉಂಟು ಮಾಡುವುದೇ ಆ್ಯಸಿಡಿಟಿ. ಎದೆಯುರಿ ಆ್ಯಸಿಡಿಟಿಯ ಒಂದು ಲಕ್ಷಣ ಎಂದು ವಿವರಿಸುತ್ತಾರೆ ಶಿವದಾಸನಿ.
ವಾಸ್ತವದಲ್ಲಿ, ಆ್ಯಸಿಡ್ಗಳಿಗೆ ಬೇರೆಲ್ಲೂ ಹೋಗಲು ಜಾಗ ಸಿಗದೆ, ಅನ್ನನಾಳಕ್ಕೆ ಮರಳಿ ಹರಿದಾಗ, ಎದೆ ಉರಿ ಅಥವಾ ಆ್ಯಸಿಡಿಟಿ ಉಂಟಾಗುತ್ತದೆ. ಕೆಳ ಅನ್ನನಾಳ ಸ್ಪಿಂಕ್ಟರ್ (ಎಲ್ಇಎಸ್), ಅನ್ನನಾಳದ ಕೆಳಕೊನೆಯಲ್ಲಿರುವ ಅಂದರೆ ಹೊಟ್ಟೆಯನ್ನು ಸಂಧಿಸುವ ಭಾಗದಲ್ಲಿರುವ ಒಂದು ಮಾಂಸಖಂಡಗಳ ಗಂಟು. ಎಲ್ಇಎಸ್ ಬ್ಲಾಕ್ ಆದಾಗ, ಅದು ಜೀರ್ಣಾಕಾರಕ ಆ್ಯಸಿಡ್ಗಳು ಮತ್ತು ಹಿಂದಿನ ರಾತ್ರಿ ತಿಂದ ಆಹಾರ ತಪ್ಪು ಮಾರ್ಗದಲ್ಲಿ ಹೋಗುವಂತೆ ಮಾಡುತ್ತದೆ. ಅಪೂರ್ಣವಾಗಿ ಮುಚ್ಚಲ್ಪಟ್ಟ ಎಲ್ಇಎಸ್, ಆ್ಯಸಿಡಿಟಿಗೆ ಕಾರಣವಾಗುತ್ತದೆ. ಆ್ಯಸಿಡಿಟಿಗೆ ಸಂಬಂಧಿಸಿದ ವಿಷಯದಲ್ಲಿ ಕರುಳಿನ ಪಾತ್ರ ಅತ್ಯಂತ ಮಹತ್ವದ್ದು. ಜೀರ್ಣಕ್ರಿಯೆಯನ್ನು ನಿಯಂತ್ರಿಸುವುದು, ನುಂಗುವುದರಿಂದ ಹಿಡಿದು ಆಹಾರಗಳನ್ನು ಒಡೆಯುವ ಕಿಣ್ವಗಳ ಬಿಡುಗಡೆಯ ವರೆಗೆ, ರಕ್ತದ ಹರಿವಿನ ನಿಯಂತ್ರಣ, ಪೋಷಕಾಂಶಗಳನ್ನು ಹೀರಿಕೊಳ್ಳುವ ಮತ್ತು ವಿಸರ್ಜನೆಯ ಪ್ರಕ್ರಿಯೆ ಮುಂತಾದ ಕಾರ್ಯಗಳಲ್ಲಿ ಕರುಳು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ ಜಾನ್ಸ್ ಹಾಪ್ಕಿನ್ಸ್ ಸೆಂಟರ್ ಫಾರ್ ನ್ಯೂರೋಗ್ಯಾಸ್ಟ್ರೋಎಂಟರಾಲಜಿಯ ನಿರ್ದೇಶಕ ಡಾ.ಜಯ್ ಪಸ್ರಿಚಾ.
ಇತ್ತೀಚೆಗೆ ಯಾವುದಾರೂ ಔಷಧಿಯನ್ನು ಹೆಚ್ಚಿಸಿದ್ದೀರಾ. ಮುಖ್ಯವಾಗಿ ವಯಸ್ಸಾದವರಲ್ಲಿ ಆ್ಯಸಿಡಿಟಿ ಔಷಧಗಳ ಅಡ್ಡಪರಿಣಾಮದಿಂದ ಉಂಟಾಗಿರಬಹುದು. ತೀವ್ರ ರಕ್ತದೊತ್ತಡ, ಆತಂಕ ಮತ್ತು ಖಿನ್ನತೆಗೆ ನೀಡುವ ಮಾತ್ರೆಗಳು ಆ್ಯಸಿಡಿಟಿಗೆ ಕಾರಣವಾಗಬಹುದು. ನಾರಿನಂಶದ ಪದಾರ್ಥಗಳನ್ನು ಕಡಿಮೆ ತಿನ್ನುವುದು, ಸಂಸ್ಕರಿಸಿದ ಆಹಾರ ಮತ್ತು ಮದ್ಯದ ಅಧಿಕ ಸೇವನೆ, ದೇಹದ ಆ್ಯಸಿಡ್ಗಳ ಸಮರ್ಪಕ ನಿರ್ವಹಣೆಗೆ ಮುಖ್ಯ ಕಾರಣವಾಗುವ ಝಿಂಕ್ ಮತ್ತು ಮೆಗ್ನೀಶಿಯಂನ ಕೊರತೆಗೆ ಕಾರಣವಾಗಬಹುದು. ಸಂಸ್ಕರಿಸಿದ ಸಕ್ಕರೆ, ಹಾಲಿನ ಉತ್ಪನ್ನಗಳು, ಮಾಂಸ ಮತ್ತು ಮೊಟ್ಟೆಯನ್ನು ಅತಿಯಾಗಿ ಸೇವಿಸುವುದು. ಸಮೋಸದಂತೆಯೇ ಸಕ್ಕರೆಯು ಕೂಡ ಆ್ಯಸಿಡಿಟಿಗೆ ಕಾರಣವಾಗುತ್ತದೆ ಎಂಬುದು ನಿಮಗೆ ಗೊತ್ತೆ. ಭಾರತೀಯರು ರಾತ್ರಿ ತಡವಾಗಿ ತಿನ್ನುವುದು ಮತ್ತು ತಿಂದ ಕೂಡಲೇ ಮಲಗುವ ಅಭ್ಯಾಸ ಹೊಂದಿದ್ದಾರೆ. ಊಟ ಮತ್ತು ನಿದ್ರೆಯ ನಡುವೆ ಮೂರು ಗಂಟೆಯ ಅಂತರ ಇರಬೇಕು. ಅದಲ್ಲದೇ, ಹೆಚ್ಚು ಮಸಾಲೆಯುಕ್ತ ಊಟವನ್ನು ಭರ್ಜರಿಯಾಗಿ ತಿನ್ನುವ ನಮಗೆ ಅದನ್ನು ಕರಗಿಸಲು ಸಮಯ ಬೇಕಾಗುತ್ತದೆ. ವಯಸ್ಸಾದೆಂತಲ್ಲ, ಚಯಾಪಚಯ ಕ್ರಿಯೆ ಕಡಿಮೆಯಾಗುತ್ತಾ ಬರುತ್ತದೆ. ಕೆಲವರಿಗೆ ಜೀರ್ಣಕ್ರಿಯೆಯ ಸಮಸ್ಯೆಗಳಿರುವುದರಿಂದ ಹೊಟ್ಟೆಯಲ್ಲಿ ಹೊಟ್ಟೆಯ ಆ್ಯಸಿಡ್ಗಳು ಕಡಿಮೆ ಇರುತ್ತದೆ, ಕೆಲವರ ಹೊಟ್ಟಗೆ ಹೆಚ್ಚು ಪ್ರಮಾಣದ ಪ್ರೊಟೀನ್ಗಳನ್ನು ಕರಗಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಹಾಗಾಗಿ ಸಂಜೆ ಏಳು ಗಂಟೆಗೆ ಊಟ ಮಾಡುವವರನ್ನು ಗೇಲಿ ಮಾಡದಿರಿ, ಬದಲಿಗೆ ನೀವು ಅವರಂತೆಯೇ ಮಾಡಿ.