ಆ ದೇವರು ಪ್ರತಿಯೊಬ್ಬರಿಗೂ ಒಂದೊಂದು ಶಕ್ತಿಯನ್ನು ನೀಡಿರುತ್ತಾನೆ. ಆದರೆ ಕೆಲವರು ಅಂತಹ ಶಕ್ತಿಯನ್ನು ಬಳಸಿಕೊಂಡು ಎಷ್ಟೋ ಬಡ ಜನಗಳಿಗೆ ಸಹಾಯ ಮಾಡುತ್ತಾರೆ. ಅಂತವರ ಸಾಲಿನಲ್ಲಿ ಈ ಡಾಕ್ಟರ್ ಮನೋಜ್ ಕೂಡ ಒಬ್ಬರಾಗಿದ್ದಾರೆ.

ಡಾ.ಮನೋಜ್ ದುರೈರಾಜ್ ಅವರು ತನ್ನ ತಂದೆ ಸ್ಥಾಪಿಸಿದ ಫೌಂಡೇಶನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರ ತಂದೆ 22 ವರ್ಷಗಳ ಮುಂಚೆ ಮರಿಯನ್ ಕಾರ್ಡಿಯಾಕ್ ಸೆಂಟರ್ ಮತ್ತು ಸಂಶೋಧನಾ ಫೌಂಡೇಶನ್ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದರು. ಡಾ.ಮನೋಜ್ ಈ ಫೌಂಡೇಶನ್ ಗೆ 2005 ರಲ್ಲಿ ಬಂದು ಸೇರಿಕೊಂಡಿದ್ದರು.

ಹೃದಯ ವೈಶ್ಯಾಲ್ಯ ಇರುವ ಡಾ.ಮನೋಜ್ ದುರೈ ರಾಜ್ ಅವರು ಹೃದಯ ಶಸ್ತ್ರಚಿಕಿತ್ಸೆ ಮಾಡಿ ಕಾಯಿಲೆ ಗುಣ ಪಡಿಸುವುದಲ್ಲದೆ, ರೋಗಿಗಳಿಗೆ ಹೊಸ ಜೀವನವನ್ನೇ ನೀಡುತ್ತಿದ್ದಾರೆ. ಹಣ ಇಲ್ಲದ ಬಡವರು ಚಿಕಿತ್ಸೆಗಾಗಿ ಬಂದರೆ ಮನೋಜ್ ಅವರು ಎಂದೂ ರೋಗಿಗಳ ಬಳಿ ಹಣದ ಇಲ್ಲದ ಕಾರಣದಿಂದ ಚಿಕಿತ್ಸೆ ನೀಡದೆ ವಾಪಾಸ್ ಕಳುಹಿಸಿರುವ ಸಂದರ್ಭಗಳೇ ಇಲ್ಲ.

ಅಷ್ಟೇ ಅಲ್ಲದೆ ದಾನಿಗಳ ಸಹಾಯದಿಂದ ಡಾ.ಮನೋಜ್ 350ಕ್ಕಿಂತಲೂ ಹೆಚ್ಚು ರೋಗಿಗಳ ಶಸ್ತ್ರ ಚಿಕಿತ್ಸೆ ಉಚಿತವಾಗಿ ಮಾಡಿದ್ದಾರೆ. ಬಹಳಷ್ಟು ಬಡ ರೋಗಿಗಳಿಗೆ ಸರಕಾರದ ಹಲವಾರು ಯೋಜನೆಯ ಮುಖಾಂತರ ಶಸ್ತ್ರ ಚಿಕಿತ್ಸೆಗೆ ವೆಚ್ಚ ಭರಿಸುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ.

ಹೀಗೆ ಇಂತಹ ಕಾರ್ಯ ಮಾಡುವ ವ್ಯಕ್ತಿಗಳು ಹೀಗಿನ ಸ್ವಾರ್ಥ ಪ್ರಪಂಚದಲ್ಲಿ ಸಿಗುವುದೇ ತುಂಬಾ ವಿರಳ. ಆದ್ದರಿಂದ ಎಷ್ಟೋ ಆ ಬಡ ರೋಗಿಗಳ ಪಾಲಿಗೆ ಆಧುನಿಕ ದೇವರಾಗಿದ್ದರೆ.

Leave a Reply

Your email address will not be published. Required fields are marked *