ರಘು ಲಾರೆನ್ಸ್ ಒಬ್ಬ ನಟ ಹಾಗೂ ಕೊರಿಯಾಗ್ರಫರ್ ತೆಲಗು ತಮಿಳ್ ಮುಂತಾದ ಚಿತ್ರಗಳಲ್ಲಿ ತಮ್ಮ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಈ ನಟನ ಸಾಮಾಜಿಕ ಕಾರ್ಯಕ್ಕೆ ನಮ್ಮ ಕಡೆಯಿಂದ ಒಂದು ಬಿಗ್ ಸಲ್ಯೂಟ್ ತಿಳಿಸಲು ಬಯಸುತ್ತೇವೆ. ಇವರು ಚಿತ್ರರಂಗದಲ್ಲಿ ಅಷ್ಟೇ ಅಲ್ಲ ಸಾಮಾಜಿಕ ಕಾರ್ಯಗಳಿಂದ ಇಂದು ಜನರ ಮನೆ ಮಾತಾಗಿದ್ದಾರೆ.

150 ಕ್ಕೂ ಹೆಚ್ಚು ಹೃದಯ ಸಂಬಂದಿ ಕಾಯಿಲೆಗಳಿಂದ ಬಳಲುತ್ತಿದ್ದ ಬಡ ರೋಗಿಗಗ ಪಾಲಿಗೆ ಇವರು ಆದುನಿಕ ದೇವರಾಗಿದ್ದರೆ ಅಂದ್ರೆ ತಪ್ಪಾಗಲಾರದು, 150 ಕ್ಕೂ ಹೆಚ್ಚು ಜನರಿಗೆ ಹಾರ್ಟ್ ಸರ್ಜರಿ ಮಾಡಿಸಿದ್ದಾರೆ. ಅಷ್ಟೇ ಅಲ್ದೆ ಇವರ ಹಲವು ಸಾಮಾಜಿಕ ಕಾರ್ಯಗಳಿಗೆ ಇವರ ಟ್ರಸ್ಟ್ ಉತ್ತಮ ರೀತಿಯಲ್ಲಿ ಸಹಕರಿಸುತ್ತದೆ. ಇವರ ಈ ಸಾಮಾಜಿಕ ಕಾರ್ಯಕ್ಕೆ ನಟ ಚಿರಂಜೀವಿ ಕೂಡ ಹತ್ತು ಲಕ್ಷ ರು ಗಳನ್ನು ಕೊಟ್ಟಿದ್ದಾರೆ.

ರಾಘವ ಲಾರೆನ್ಸ್ ಇವರ ಹೆಸರಿನಲ್ಲಿ ಒಂದು ಸಾಮಾಜಿಕ ಟ್ರಸ್ಟ್ ಇದ್ದು ಇದರ ಅಡಿಯಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಹಾಯ ಮಾಡಲಾಗುತ್ತಿದೆ, ಅಷ್ಟೇ ಅಲ್ದೆ ಇತ್ತೀಚಿಗೆ 60 ಕ್ಕೂ ಹೆಚ್ಚು ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣಕ್ಕೆ ಮುಂದಾಗಿದ್ದಾರೆ. ಸಿನಿಮಾ ನಟರು ಬರಿ ಬಣ್ಣದ ಮಾತುಗಳನ್ನು ಹಾಡಿ ಜನರಿಗೆ ಮರಳು ಮಾಡುತ್ತಾರೆ ಅನ್ನೋರಿಗೆ ಇಂಥ ವ್ಯಕ್ತಿಗಳು ಒಂದು ಮಾದರಿ ಅನ್ನಬಹುದು. ಸಮಾಜ ನಮಗೆ ಏನು ಮಾಡಿದೆ ಅನ್ನೋದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಅನ್ನೋದನ್ನ ಮನವರಿಕೆ ಮಾಡಿಕೊಳ್ಳುವಂತೆ ಮಾಡುವ ಸ್ಫೂರ್ತಿ ಇವರಿಂದ ಬಂದೆ ಬರುತ್ತದೆ.

Leave a Reply

Your email address will not be published. Required fields are marked *