ಎಂಟರಿಂದ 10 ಬೆಳ್ಳುಳ್ಳಿ ಎಸಳನ್ನು ರಾತ್ರಿ ಪೂರ ನೀರಿನಲ್ಲಿ ನೆನೆಸಿ ಬೆಳಗ್ಗೆ ಆ ನೀರನ್ನು ಸೇವಿಸಿದರೆ ಹೊಟ್ಟೆಹುಳು ಕಡಿಮೆಯಾಗುತ್ತದೆ.ಸಿಹಿ ಕುಂಬಳಕಾಯಿ ಬೀಜದ ಪುಡಿಯನ್ನು ನೀರಲ್ಲಿ ಕುದಿಸಿ ತಣ್ಣಗಾದ ನಂತರ ಆ ನೀರನ್ನು ಸೇವಿಸಿದರೆ ಹೊಟ್ಟೆಹುಳು ಬೀಳುತ್ತದೆ.

ಮೂರು ಚಮಚ ಬಿಲ್ವ ಪತ್ರೆ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಮೂರು ವಾರ ಸೇವಿಸಿದರೆ ಹುಳಗಳು ನಿವಾರಣೆಯಾಗುತ್ತದೆ.ಅರ್ಧ ಚಮಚ ಓಂ ಕಾಳನ್ನು 4 ಚಮಚ ಗೋಮೂತ್ರಕ್ಕೆ ಸೇರಿಸಿ ಕುಡಿದರೆ ಹೊಟ್ಟೆಹುಳು ಕಡಿಮೆಯಾಗುತ್ತದೆ.

ಆಡುಸೋಗೆಯ ತೊಗಟೆ ಮತ್ತು ಬೇರಿನ ಕಷಾಯವನ್ನು 3 ದಿನ ರಾತ್ರಿ ಕುಡಿದರೆ ಜಂತು ಹುಳು ಬೀಳುತ್ತದೆ.ಒಂದರಿಂದ ಎರಡು ಚಿಟಿಕೆ ಬಜೆ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿದರೂ ಲಾಭದಾಯಕ.ವಾಯುವಿಗಂಡದ ಪುಡಿಗೆ ಕೊನ್ನಾರೆ ಬೇರಿನ ಪುಡಿ ಮತ್ತು ಸಕ್ಕರೆ ಸೇರಿಸಿ ಸೇವಿಸಿದರೆ ಜಂತುಹುಳು ಬೀಳುತ್ತದೆ.

ಕಾಯಿ ಹಾಲಿನ ಜತೆ ಬೂದುಗುಂಬಳಕಾಯಿ ಬೀಜದ ಪುಡಿ ಸೇರಿಸಿ ಸೇವಿಸಿದರೆ ಹುಳು ನಿವಾರಣೆಯಾಗುತ್ತದೆ.ತುಂಬೆಹೂವು ಮತ್ತು ಅದರ ಎಲೆಗಳ ರಸವನ್ನು ನಿಯಮಿತವಾಗಿ ಸೇವಿಸಿದರೆ ಜಂತುಹುಳು ಕಡಿಮೆಯಾಗುತ್ತದೆ.ಬಾಳೆದಿಂಡಿನ ಪಲ್ಯ, ಕೋಸಂಬರಿಯನ್ನು ನಿಯಮಿತವಾಗಿ ಸೇವಿಸಿದರೆ ಹೊಟ್ಟೆಹುಳು ನಿವಾರಣೆಯಾಗುತ್ತದೆ.

Leave a Reply

Your email address will not be published. Required fields are marked *