ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಆಂಜನೇಯ ಹುಟ್ಟಿದ ಸ್ಥಳ ಅಂಜನಾದ್ರಿ. ಈ ಅಂಜನಾದ್ರಿ ಇರುವುದು ಕೊಪ್ಪಳ ಜಿಲ್ಲೆಯಲ್ಲಿ ಇದು ಒಂದು ಗುಡ್ಡದ ಮೇಲಿರುವ ಪ್ರದೇಶ ಸರಿಸುಮಾರು 550ಕ್ಕಿಂತ ಹೆಚ್ಚು ಮೆಟ್ಟಿಲುಗಳು ಇವೆ. ಆದರೆ ಕೆಲವೊಂದು ಮಾಹಿತಿ ನಿಮಗೆ ಗೊತ್ತಿರುವುದಿಲ್ಲ ಹಾಗೆ ಇರುವಂತಹ ಒಂದೆರಡು ಆಶ್ಚರ್ಯ ಮಾಹಿತಿಗಳನ್ನು ಇಲ್ಲವೇ ನೋಡಿ. ಈ ದೇವಸ್ಥಾನಕ್ಕೆ ಭೇಟಿ ನೀಡಲು ಉತ್ತಮ ಸಮಯ.

ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಆಗಿದೆ ರಾಮಾಯಣದಲ್ಲಿ ರಾಮ ಸೀತೆ ಮತ್ತು ಲಕ್ಷ್ಮಣ ನನ್ನು ಹೊರತು ಪಡಿಸಿದರೆ ಎಲ್ಲರನ್ನು ಸೆಳೆದಿದ್ದು ಈ ಹನುಮಂತ ಪುರಾಣಗಳ ಪ್ರಕಾರ ಹಂಡೆಬಳಿ ತುಂಗಭದ್ರ ನದಿಯ ತಪ್ಪಲಿನಲ್ಲಿ ವಾಸವಾಗಿದ್ದ ಅಂಜನದೇವಿ ಮತ್ತು ವಾನರ ನಾಯಕ ಕೇಸರಿ ಅವರ ಮಗನೇ ಈ ಹನುಮಂತ ಇವರನ್ನು ಸೂರ್ಯಪುತ್ರ ವಾಯುಪುತ್ರ ಎಂದು ಕೂಡ ಕರೆಯುತ್ತಾರೆ ಇವರು ವಾಸವಾಗಿದ್ದ ಈ ಬೆಟ್ಟವನ್ನು ಅಂಜನಾದ್ರಿ ಬೆಟ್ಟ ಎಂದು ಕರೆಯುತ್ತಾರೆ ಈ ಬೆಟ್ಟದ ತಪ್ಪಲಿನಲ್ಲಿ ಹಲವರು ಸಾಧುಗಳ ನೆಲೆಸಿದ್ದಾರೆ.

ಈ ದೇವಾಲಯದಲ್ಲಿ ಕೇವಲ ಹನುಮಂತ ಮಾತ್ರವಲ್ಲದೇ ರಾಮ ಸೀತೆ ಲಕ್ಷ್ಮಣರ ವಿಗ್ರಹವಿದ್ದು ಅವುಗಳಿಗೆ ಪೂಜೆ ಸಲ್ಲಿಸುತ್ತಾರೆ ಜೊತೆಗೆ ಹನುಮ ಜಯಂತಿಯಂದು ವಿಜೃಂಭಣೆಯಿಂದ ಹಲವಾರು ಕಾರ್ಯಕ್ರಮಗಳನ್ನು ಆಚರಿಸುತ್ತಾರೆ.ನಾವು ದೂರದಿಂದ ಬೆಟ್ಟವನ್ನು ನೋಡಿದಾಗ ಬೆಟ್ಟದ ಒಂದು ಕಡೆ ಶ್ರೀ ಆಂಜನೇಯನ ಮುಖವನ್ನು ಹೋಲುತ್ತದೆ. ಈ ಬೆಟ್ಟದ ಮೇಲೆ ಅಂಜನಿಪುತ್ರ ಆಂಜನೇಯನ ಜನ್ಮ ಆಗಿದೆ ಹಾಗಾಗಿ ಈ ಬೆಟ್ಟಕ್ಕೆ ಅಂಜನಾದ್ರಿ ಎಂಬ ಹೆಸರು ಬಂದಿದೆ.ಈ ಬೆಟ್ಟವನ್ನು ನೋಡಲು ಬೇರೆ ದೇಶದಿಂದ ಕೂಡ ಜನರು ಆಗಮಿಸುತ್ತಾರೆ ಅಷ್ಟು ಹೆಸರುವಾಸಿಯಾಗಿದೆ ಈ ಪವಿತ್ರ ಸ್ಥಳ.

ಮಾಹಿತಿ ಪ್ರಕಾರ ಹಂಪಿಯಲ್ಲಿ ಹರಿಬರುವಂತಹ ತುಂಗೆಯ ನದಿಯ ತಟದಲ್ಲಿ ವಾಸವಾಗಿರುವಂತಹ ಅಂಜನಾದೇವಿ ಹಾಗೂ ವಾನರ ನಾಯಕ ಕೇಸರಿಯವರ ಮಗನೇ ಈ ಹನುಮಂತ. ನಮ್ಮ ಹಿಂದೂಗಳ ಪ್ರಕಾರ ಈ ಆಂಜನೇಯನ ಹೆತ್ತ ಅಂಜನಾದೇವಿ ಸ್ಥಾನಕ್ಕೂ ಕೂಡ ನೀರಿಲ್ಲ ವಾಗಿರುವಂತಹ ಪರಿಸ್ಥಿತಿ ಕೂಡ ಎದುರಾಗುತ್ತದೆ. ತನ್ನ ತಾಯಿಯ ಚಿಂತಾ ಜನಕ ಪರಿಸ್ಥಿತಿಯನ್ನು ಕಂಡ ಆಂಜನೇಯ ಹಂಪಿಯಲ್ಲಿ ಹೋಗುತ್ತಿರುವಂತಹ ತುಂಗಭದ್ರ ನೀರನ್ನು ತನ್ನತಾಯಿಗೆ ನೆರವಾಗುವಂತೆ ನೀರನ್ನು ಹರಿಸುತ್ತಾನೆ ಈ ಹರಿದಿರುವ ನದಿಗೆ ಅಲ್ಲೇ ಆ ಬೆಟ್ಟದ ಕೆಳಗೆ ಇರುವಂತಹ ಹನುಮನಳ್ಳಿ ಎಂಬ ಗ್ರಾಮದಲ್ಲಿಸಿಗುತ್ತದೆ.

ಅಂದಿನಿಂದಲೂ ತುಂಗಭದ್ರೆ ಎರಡು ಕಾವಲಾಗಿ ಹರಿಯುತ್ತದೆ ಇದಕ್ಕೆ ಹನುಮಾನ ಸೆಳೆವು ಎಂದು ಕರೆಯಲಾಗುತ್ತದೆ. ಈ ಬೆಟನ್ನು ಏರುವಾಗ ನಿಮಗೆ ಸುಸ್ತಾಗುವುದು ಮಾಮೂಲಿ ಆದರೆ ಜೈ ಶ್ರೀ ರಾಮ್ ಜೈ ಹನುಮಾನ್ ಎಂದು ಘೋಷಣೆ ಕೂಗಿಕೊಂಡುಏರಿದರೆನಮಗೆ ಇದು ಯಾವುದೇ ತರಹದ ಸುಸ್ತು ಆಯಾಸ ಬರುವುದಿಲ್ಲ.

Leave a Reply

Your email address will not be published. Required fields are marked *