ಸೋರೆಕಾಯಿಯನ್ನು ನಾವು ಬೇರೆ ಬೇರೆ ರೀತಿಯಲ್ಲಿ ಅಡುಗೆಯಲ್ಲಿ ಎಲ್ಲ ಯೂಸ್ ಮಾಡುತ್ತೇವೆ ಅಲ್ವಾ. ತುಂಬಾ ಜನಕ್ಕೆ ಇಷ್ಟ ಆಗುತ್ತೆ. ಇದರಲ್ಲಿ ನೀರಿನ ಪ್ರಮಾಣ ತುಂಬಾ ಅಧಿಕವಾಗಿರುವುದರಿಂದ ಈ ಬೇಸಿಗೆಯಲ್ಲಿ ಅಂತ ಹೇಳಿ ಮಾಡಿಸಿದ ತರಕಾರಿ ಅಂತ ಹೇಳಬಹುದು ನಾವು. ಸೋರೆಕಾಯಿ ತಿನ್ನುವುದರಿಂದ ಬರೀ ಬೇಸಿಗೆಯಲ್ಲಿ ಅಷ್ಟೇ ಅಂತ ಅಲ್ಲ ನಮಗೆ ಬೇರೆ-ಬೇರೆ ರೀತಿ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಇದು ಹೆಲ್ಪ್ ಆಗುತ್ತೆ.

ಇವತ್ತಿನ ಮಾಹಿತಿಯಲ್ಲಿ ಸೋರೆಕಾಯಿ ನ ತಿನ್ನುವುದರಿಂದ ನಮಗೆ ಯಾವ ಯಾವ ರೀತಿಯಲ್ಲಿ ಇದು ಹೆಲ್ಪ್ ಆಗುತ್ತೆ ಅನ್ನುವುದನ್ನು ಹೇಳುತ್ತಾ ಇದ್ದೀನಿ. ಸೋರೆಕಾಯಿ ನಾವು ತಿನ್ನುವುದರಿಂದ ಯಾರಿಗೆ ತುಂಬಾ ಮಾನಸಿಕ ಒತ್ತಡ ಎಲ್ಲ ಇರುತ್ತೆ ತುಂಬಾ ಸ್ಟ್ರೆಸ್ ಇಂದ ಬಳಲುತ್ತಿರುತ್ತಾರೆ. ಅಂತಹವರಿಗೆ ಮಾನಸಿಕ ಒತ್ತಡದಿಂದ ಹೊರಗೆ ಬರುವುದಕ್ಕೆ ತುಂಬಾನೇ ಹೆಲ್ಪ್ ಮಾಡುತ್ತೆ.

ನಾವು ಅಡುಗೆಯಲ್ಲಿ ಬಳಸಬಹುದು. ಜ್ಯೂಸ್ ತರ ಮಾಡಬಹುದು. ಬೇರೆ ಬೇರೆ ರೀತಿಯ ರೆಸಿಪಿಗಳನ್ನು ಕೂಡ ಮಾಡಿಕೊಳ್ಳಬಹುದು. ಇನ್ನು ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದು. ಇದರಲ್ಲಿ ನೀರಿನ ಪ್ರಮಾಣ ಜಾಸ್ತಿ ಇರುತ್ತಲ್ಲ. ಇದರಿಂದಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ. ಕೊಲೆಸ್ಟ್ರಾಲ್ ಪರಿಣಾಮ ಕಡಿಮೆಯಾಗಿದ್ದುದರಿಂದ ನಮ್ಮ ಹೃದಯಕ್ಕೆ ತುಂಬಾನೆ ಒಳ್ಳೆಯದು ಇದು.

ಇನ್ನೊಂದು ವೇಟ್ ಲಾಸ್ ಮಾಡಿಕೊಳ್ಳುವವರಿಗೆ ಇದು ಬೆಸ್ಟ್ ತರಕಾರಿ ಅಂತಾನೆ ಹೇಳಬಹುದು. ಇದರಲ್ಲಿ ಅಯಾನ್ ಕಂಟೆಂಟ್ ತುಂಬಾ ಜಾಸ್ತಿ ಇರುತ್ತೆ ಹಾಗೆ ಬೇರೆ-ಬೇರೆ ರೀತಿಯ ವಿಟಮಿನ್ಸ್ ಗಳು ಎಲ್ಲಾ ಕೂಡ ಸಿಗುವುದರಿಂದ ವೇಟ್ ಲಾಸ್ ಮಾಡಿಕೊಳ್ಳುವವರಿಗೆ ತುಂಬಾನೇ ಹೆಲ್ಪ್ ಆಗುತ್ತೆ. ಇನ್ನೊಂದು ನಿದ್ದೆಯ ಸಮಸ್ಯೆ ಇರುವವರಿಗೆ ಕೂಡ ಇದೊಂದು ಬೆಸ್ಟ್ ತರಕಾರಿ ಅಂತನೇ ಹೇಳಬಹುದು. ನಾವು ಜ್ಯೂಸ ರೂಪದಲ್ಲಿ ಆದರೂ ಕುಡಿಯಬಹುದು.

ಅಥವಾ ಅಡುಗೆಯಲ್ಲಿ ಆದರೂ ಬಳಸಬಹುದು. ನಾರ್ಮಲ್ ಆಗಿ ತುಂಬಾ ಜನಕ್ಕೆ ನಿದ್ದೆ ಸಮಸ್ಯೆಯಲ್ಲ ಇರುತ್ತೆ. ಸ್ಟ್ರೆಸ್ ಏನಾದರೂ ಮಾನಸಿಕ ಒತ್ತಡ ಎಲ್ಲ ಇದ್ದಾಗ ಅದನ್ನೆಲ್ಲ ಇದು ದೂರ ಮಾಡುವುದರಿಂದ ನಿದ್ದೆ ಕೂಡ ಆರಾಮಾಗಿ ಆಗುತ್ತೆ. ಚೆನ್ನಾಗಿ ನಿದ್ದೆ ಬರುವುದಕ್ಕೆ ಕೂಡ ಇದು ಹೆಲ್ಪ್ ಆಗುತ್ತೆ.

‌ಸೋರೆಕಾಯಿ ರಸವನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಗೂ ಉತ್ತಮ ಪರಿಹಾರವಾಗಬಲ್ಲದು.ಸೋರೆಕಾಯಿಯಲ್ಲಿ ನೀರಿನಾಂಶ ಸಮೃದ್ಧವಾಗಿದೆ, ಇದು ದೇಹದಲ್ಲಿ ನೀರಿನ ಕೊರತೆಯನ್ನು ಸರಿದೂಗಿಸುತ್ತದೆ. ಇದರಲ್ಲಿ ಫೈಬರ್ ಕೂಡ ಇದೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

Leave a Reply

Your email address will not be published. Required fields are marked *