ಶೂನಿಂದ ಕೆಟ್ಟ ವಾಸನೆ ಬೀರುತ್ತಿದ್ದರೆ ನಮ್ಮ ಸಮೀಪ ನಿಂತವರು ಮೂಗು ಮುಚ್ಚಿ, ನಮ್ಮತ್ತ ವಿಚಿತ್ರವಾದ ನೋಟ ಬೀರಿ ದೂರ ಸರಿಯುತ್ತಾರೆ. ಆದರೆ ಕಾಲು ದುರ್ವಾಸನೆ ಬೀರುವುದು ನಾವೇನು ಶುಚಿತ್ವದ ಕಡೆ ಗಮನ ಕೊಡದೆ ಅಲ್ಲ, ಕಾಲನ್ನು ಎಷ್ಟೇ ಉಜ್ಜಿ ತೊಳೆದರೂ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ.

ಕೆಲವರಿಗಂತೂ ಶೂ ಧರಿಸಿದರೆ ದುರ್ವಾಸನೆ ಬೀರುತ್ತದೆ ಎಂದು ಚಪ್ಪಲಿ ಧರಿಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿರುವುದಿಲ್ಲ. ಆದರೆ ಕೆಲವೊಂದು ಟ್ರಿಕ್ಸ್‌ ಪಾಲಿಸಿದರೆ ಈ ಸಮಸ್ಯೆಯಿಂದ ಪಾರಾಗಬಹುದು. ಅದು ಹೇಗೆ ಎಂದು ನೋಡೋಣ ಬನ್ನಿ.

ಟೀ ಬ್ಯಾಗ್‌ ಟ್ರಕ್ಸ್‌: ಸಂಜೆ ಮನೆಗೆ ಬಂದಾಗ ಒಂದು ಗ್ಲಾಸ್ ನೀರಿಗೆ ಎರಡು ಟೀ ಬ್ಯಾಗ್‌ ಹಾಕಿ ಚೆನ್ನಾಗಿ ಕುದಿಸಿ, ನಂತರ ಆ ನೀರನ್ನು ಬಕೆಟ್‌ಗೆ ಸುರಿದು, ಅದಕ್ಕೆ ಎರಡು ಮಗ್‌ ತಣ್ಣೀರು ಸೇರಿಸಿ, ನಂತರ ಕಾಲುಗಳನ್ನು ಅದರಲ್ಲಿ ನೆನೆಸಿ ಇಪ್ಪತ್ತು ನಿಮಿಷ ಇಡಿ. ಈ ರೀತಿ ಒಂದು ವಾರದವರೆಗೆ ಮಾಡುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ವಿನಿಗರ್‌: ಸ್ನಾನ ಮಾಡುವಾಗ ಕೊನೆಯ ಮಗ್‌ ನೀರು ಮೈಮೇಲೆ ಸುರಿಯುವಾಗ ಅದಕ್ಕೆ ಸ್ವಲ್ಪ ವಿನಿಗರ್‌ ಸೇರಿಸಿ ಮೈಗೆ ನೀರು ಹಾಕಿ, ನಂತರ ಮೈ ಒರೆಸಿ, ಈ ರೀತಿ ವಾರದವರೆಗೆ ಮಾಡಿದರೆ ಬೆವರಿನ ದುರ್ವಾಸನೆ ಸಮಸ್ಯೆ ಕಾಡುವುದಿಲ್ಲ.

ದುರ್ವಾಸನೆ ತಡೆಯುವ ಮದ್ಯ: ಹೌದು ಕಾಲುಗಳನ್ನು ಚೆನ್ನಾಗಿ ತೊಳೆದ ಬಳಿಕ ಕಾಲನ್ನು ಒರೆಸಿ, ನಂತರ ಸ್ವಲ್ಪ ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅದಕ್ಕೆ ಮದ್ಯ ಹಾಕಿ ಪಾದಕ್ಕೆ ಉಜ್ಜುವುದರಿಂದ ದುರ್ವಾಸನೆ ತಡೆಯಬಹುದು.

ಮೌತ್‌ ವಾಶ್‌: ಟೀ ಬ್ಯಾಗ್‌ ಟ್ರೀಟ್‌ಮೆಂಟ್‌ ರೀತಿಯಲ್ಲೇ ಸ್ವಲ್ಪ ಮೌತ್‌ ವಾಶ್‌ ತೆಗೆದು ಅದನ್ನು ಹದ ಬಿಸಿ ನೀರಿಗೆ ಹಾಕಿ, ಅದರಲ್ಲಿ ಕಾಲನ್ನು 20 ನಿಮಿಷ ನೆನಸಿ ಇಡುವುದರಿಂದಲೂ ಕಾಲು ಬೆವರಿನ ದುರ್ವಾಸನೆ ಬೀರುವುದನ್ನು ತಡೆಯಬಹುದು.

Leave a Reply

Your email address will not be published. Required fields are marked *