ಶಿವಪ್ರಿಯ ಪುಷ್ಪಾದಿಗಳು ಎಕ್ಕೆ, ಕರವೀರ, ಬಿಲ್ವಾ, ಬಕ, ಈ ನಾಲ್ಕು ಪುಷ್ಪಗಳ ಪರಿಮಳವನ್ನು ಶಿವನು ಮುಸುತ್ತಿರುವನು. ಬಿಳೆ ಎಕ್ಕೆಯ ಪುಷ್ಪದಿಂದ ಪೂಜಿಸಿದರೆ 10 ಸುವರ್ಣದಾನ ಮಾಡಿದ ಫಲವು ಸಿಗುವುದು. ಬಕ ಪುಷ್ಪವು ಇದರ ಸಹಸ್ರಪಟ್ಟು ಹೆಚ್ಚಿನ ಫಲಪ್ರದವು.ಇದರಂತೆ ಧತ್ತೂರ, ಶಮಿ ಪುಷ್ಪ, ದ್ರೋಣ ಪುಷ್ಪ, (ತುಂಬೆ ಹೂವು) ನೀಲ ನೈದಿಲೆ ಇವು ಒಂದಕ್ಕಿಂತ ಒಂದು ಸಹಸ್ರ ಗುಣ, ಪುಣ್ಯ ಪ್ರದಗಳು. ಮಣಿ, ಮುತ್ತು, ಹವಳ, ರತ್ನ ಇತ್ಯಾದಿಗಳಿಂದ ಅರ್ಚಿಸಿದರೂ ಬಿಲ್ವ ಪತ್ರೆ ಇಲ್ಲದಿದ್ದರೆ ಅವುಗಳನ್ನು ತಾನು ಸ್ವೀಕರಿಸುವುದಿಲ್ಲವೆಂದು ಶಿವನು ಪಾರ್ವತಿಗೆ ಹೇಳಿರುವನು. ಬಿಲ್ವವು ಸರ್ವ ಕಾಮ ಪ್ರದವು. ಮತ್ತು ದಾರಿದ್ರ್ಯ ನಿವಾರಕವಾದದ್ದು.

ಕನ್ನೈ ದಿಲೆಗಳ ಒಂದು ಸಾವಿರದಿಂದ ಮಾಲೆ ಮಾಡಿ, ಹಾಕಿದರೆ ಕಲ್ಪ ಕೋಟಿ ಸಹಸ್ರ ವರ್ಷ ಪರ್ಯಂತ ಶಿವ ಸಾನಿಧ್ಯದಲ್ಲಿ ವಾಸ ವುಂಟಾಗುವುದೆಂದು ಫಲಶ್ರುತಿಯಿದೆ ಉನ್ಮತ್ತ, ಕರವೀರಗಳಿಂದ ಅರ್ಚಿಸಿದರೆ ಲಕ್ಷ ಗೋದಾನ ಪಲವು. ಸುರಹೊನ್ನೆ, ಮಂದಾರ ಉತ್ತರಾಣಿ, ಜಾಜಿ, ಸಂಪಿಗೆ, ವಾ, ತಗರ, ನಾಗಸಂಪಿಗೆ, ಪುನ್ನಾಗ, ದಾಸವಾಳ, ಮಲ್ಲಿಗೆ, ಮಾವು, ಕುಸುಂಭ ಪುಷ್ಪಗಳು ಶಿವನಿಗೆ ಪ್ರಿಯಗಳು. ಉನ್ಮತ್ತ, ಕದಂಬ, (ಈಚಲು ) ಶಿವನಿಗೆ ರಾತ್ರಿಯೆಲ್ಲಾರ್ಪಿಸಬೇಕು.” ಮದನ ರತ್ನ” ದಲ್ಲಿ (ಕೇತಕಾನಿ ಕಾದಂಬಾನಿ ಎಂದು ಪಾಠ ಭೇದವಿದೆ). ಪುಷ್ಪ, ಪತ್ರಗಳ ಅಭಾವಅನ್ನಾದಿಗಳಿಂದ ಪೂಜಿಸುವುದು. ಸಣ್ಣ ಅಕ್ಕಿ ಗೋಧಿ ಜವೆ ಇವುಗಳಿಂದಾದರೂ ಅರ್ಚಿಸಬಹುದು.

ನಿಷಿದ್ಧ ಗಳು: ಬಂಧೂಕ, ಮುಗಿಮಲ್ಲಿಗೆ ,ಅತಿ ಮುಕ್ತ (ಮಲ್ಲಿಗೆಯ ಬೇದ) ಕೇದಿಗೆ, ಬೆಳವಲ, ರಂಜಲು, ಬಾಗೇಹೂವು, ಕಹಿಬೇವು, ಇವು ನಿಷಿದ್ಧಗಳು. ಪುಷ್ಪವನ್ನಾಗಲಿ, ಪತ್ರವನ್ನು ಆಗಲಿ, ತನಗೆ ಸಮ್ಮುಖವಾಗುವಂತೆ ಅಂಗಾತ ಮಾಡಿ ಅರ್ಪಿಸಬೇಕು. ಪತ್ರ, ಪುಷ್ಪ, ಫಲಗಳು ಹೇಗೆ ಉತ್ಪತ್ನವಾಗಿವೆಯೋ ಅ ರೀತಿಯಿಂದಲೇ ಅರ್ಪಿಸಬೇಕು. ಹೀಗೆ ವಚನವಿದೆ. ಬಿಲ್ವಪತ್ರೆಯನ್ನು ತನಗೆ ಸಂಮುಖವಾಗಿ ಮುದುಡಿದಂತೆ ಮಾಡಿ ಅರ್ಪಿಸುವುದು. ಮಾವಿನಹಣ್ಣನ್ನು ಶಿವನಿಗರ್ಪಿಸಿದರೆ, 10 ಸಾವಿರ ವರ್ಷ ಶಿವ ಸನ್ನಿಧಿಯಲ್ಲಿ ವಾಸವು. ಇನ್ನು ಪ್ರದಕ್ಷಿಣ ಕ್ರಮ ಹೇಗೆಂದರೆ ಮೊದಲು ಎಡದಿಂದ ಬಲಕ್ಕೆ ಪ್ರದಕ್ಷಿಣೆ ಮಾಡಿ ಸೋಮ ಸೂತ್ರದವರೆಗೆ ಹೋಗಿ, ಪುನಃ ಅಪಸವ್ಯ ವಾಗಿ ಒಂದು ಸೋಮ ಸೂತ್ರದವರೆಗೆ ಪೂನಃ ಹೋಗುವದು. ಸೋಮ ಸೂತ್ರವನ್ನು ದಾಟಬಾರದು. ಇದು ಸ್ಥಿರಲಿಂಗ ಪ್ರದಕ್ಷಿಣೆಯ ರೀತಿಯು. ಚರಲಿಂಗದಲ್ಲಿ ಸರಿಯಾಗಿಯೇ ಪ್ರದಕ್ಷಿಣೆಯು. ದೇವಿ ಮೂರ್ತಿಗಾದರೂ ಬಕುಲ, ಕುಂದ, ಸಹಿತ ಗಳಾದ ಈ ಹೇಳಿದ ಪುಷ್ಪಗಳು ಪ್ರೀತಿಕರ ಗಳು.ಧಾನ್ಯಗಿಡಗಳ ಎಲ್ಲ ಪತ್ರ ಪುಷ್ಪಗಳಿಂದ ದೇವಿಯನ್ನರ್ಚಿಸಬಹುದು. ದೂರ್ವ ,ಕುಂದ ,ಸಿಂಧೂವಾರ .(ಕರೇನುಕ್ಕೆ )ಬಂಧೂಕ ,ಅಗಸ್ತಿ ಇವುಗಳ ಪತ್ರ ಪುಷ್ಪಗಳಿಂದ ಅರ್ಚಿಸುವುದು.

ಶರತ್ ಶಾಸ್ತ್ರಿ ಜ್ಯೋತಿಷಿ ಹಾಗೂ ಪುರೋಹಿತರು 9845371416 ನಮ್ಮಲ್ಲಿಯೇ ಜಾತಕ ತೆಗೆದುಕೊಂಡರೆ ಉಚಿತವಾಗಿ ಜಾತಕ ವಿಶ್ಲೇಷಣೆ ಮಾಡುತ್ತೇವೆ ಯಾವುದೇ ಪ್ರಶ್ನೆ ಮತ್ತು ಸಮಸ್ಸೆಗಳಿಗೆ ಕುಂಡಲಿ ನೋಡಿ ವಿವರಣೆ ನೀಡಿ ಸರಳ ಪರಿಹಾರಗಳು ನೀಡುತ್ತೇವೆ whatsapp ನಲ್ಲಿ ಹೆಸರು ಜನ್ಮ ದಿನಾಂಕ ಸಮಯ ಕಲುಯಿಸಿ 9845371416

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *