ಲೈಂಗಿಕ ಸಮಸ್ಯೆ ಕೇವಲ ಹೆಣ್ಣನ್ನು ಮಾತ್ರ ಕಾಡುವುದಲ್ಲ. ಗಂಡಿಗೂ ಕಾಡುತ್ತೆ ಕೆಲ ಕಾಮನ್ ಪ್ರಾಬ್ಲಮ್ಸ್. ಕೆಲವರಿಗೆ ಅದೇ ಸ್ವಚ್ಛತಾ ಸಮಸ್ಯೆ ಹಾಗೂ ಇತರೆ ಕಾರಣಗಳಿದ್ದರೂ ಮತ್ತೆ ಕೆಲವರಿಗೆ ಬೇರೆಯದ್ದೇ ರೀತಿಯ ನೋವು ಕಾಡುತ್ತದೆ.

ಸಾಮಾನ್ಯವಾಗಿ ಮೊದಲ ಸಲ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವವರಲ್ಲಿ ಈ ಸಮಸ್ಯೆ ಕಾಡೋದು ಸಹಜ. ಅದರಲ್ಲಿಯೂ ಹದಿವಯಸ್ಸಿನಲ್ಲಿ ಇಂಥ ದುಸ್ಸಾಹಸಕ್ಕೆ ಕೈ ಹಾಕಿದರಂತೂ ಅಪಾಯ ಕಟ್ಟಿಟ್ಟ ಬುತ್ತಿ ಏನಿದು ಸಮಸ್ಯೆ ಅನ್ನೋದು ಇಲ್ಲಿದೆ ನೋಡಿ.

ಲೈಂಗಿಕ ಕ್ರಿಯೆ ನಡೆಸುವಾಗ ಶಿಶ್ನದಲ್ಲಿ ಬ್ಲೀಡ್ ಆಗುತ್ತದೆ. ಪುರುಷರ ಶಿಶ್ನ ಮುಂದೊಲಗಿನ ಚರ್ಮ ವೃಷಣ ಕೋಶದವರೆಗೂ ಹಬ್ಬಿರುತ್ತದೆ. ಯಾವಾಗ ಇದರ ಮೇಲೆ ಒತ್ತಡ ಹೆಚ್ಚಾಗುತ್ತದೋ, ಆಗ ಇದು ಹರಿಯುವ ಸಾಧ್ಯತೆ ಇರುತ್ತದೆ. ಇಲ್ಲವೇ ಮೂತ್ರ ಕೋಶ ಉರಿ ಅಥವಾ ಅಲರ್ಜಿಯಾದರೂ ಶಿಶ್ನದಲ್ಲಿ ರಕ್ತ ಒಸರುತ್ತದೆ. ಅತ್ಯಂತ ಸೂಕ್ಷ್ಮ ಚರ್ಮ ಹರಿದಾಗ ರಕ್ತ ಸ್ರಾವ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಪುರುಷರು ನೆನಪಿನಲ್ಲಿಟ್ಟುಕೊಳ್ಳಬೇಕು.

ಇದಕ್ಕೆ ತಜ್ಞರ ಸಲಹೆ ಪಡೆಯುವುದು ಸೂಕ್ತ. ಭಯ ಬೀಳುವಂಥ ಕಾರಣಗಳೇನೂ ಇರೋಲ್ಲ.

6 ವಾರಗಳ ಕಾಲ ಸೆಕ್ಸ್ ನಿಲ್ಲಿಸಬೇಕು. ಲೈಂಗಿಕ ಕ್ರಿಯೆ ವೇಳೆ ಅವಸರ ಒಳ್ಳೆಯದಲ್ಲ. ಸಾವಧಾನವಾಗಿ ಮುಂದುವರಿದರೂ ಇಬ್ಬರಿಗೂ ಒಳಿತು. ಶಿಶ್ನ ಅಥವಾ ಯೋನಿ ಒಣಗಿದ್ದರೆ ಲೂಬ್ರಿಕೆಂಟ್ ಬಳಸಬೇಕು.

ಕಾಂಡೋಮ್ ಬಳಸುವುದು ಸೂಕ್ತ. ಸ್ವಚ್ಛತೆ ಕಾಪಾಡಿಕೊಳ್ಳುವುದು ಮೊದಲ ಆದ್ಯತೆ ಆಗಬೇಕು. ಹೇಳಿಕೊಳ್ಳಲಾಗದಂಥ ಹಲವಾರು ಲೈಂಗಿಕ ಸಮಸ್ಯೆಗಳಿಂದ ಬಳಲುವ ಬದಲು ಸೂಕ್ತ ವೈದ್ಯರಿಂದ ಸಲಹೆ, ಚಿಕಿತ್ಸೆ ಪಡೆಯುವುದು ಒಳ್ಳೆಯದು.

Leave a Reply

Your email address will not be published. Required fields are marked *