ಹೌದು ಮಿಲನ ಕ್ರಿಯೆ ಅನ್ನೋದು ಮನುಷ್ಯನ ಜೀವನದ ಒಂದು ಭಾಗ. ಆದರೆ ಸೆಕ್ಸ್ ಬಗ್ಗೆ ಮಾತನಾಡಲು ಇಂದಿಗೂ ಎಲ್ಲರಿಗೂ ಮುಜುಗರ. ಇದರ ಬಗ್ಗೆ ತಿಳಿದುಕೊಳ್ಳಲು ಹಿರಿಯರ ಬಳಿಯಂತೂ ಮಾತನಾಡಲು ಸಾಧ್ಯವೇ ಇಲ್ಲ. ಅದಕ್ಕಾಗಿ ಪುಸ್ತಕ, ಇಂಟೆರ್‌ನೆಟ್ ಮೊರೆ ಹೋಗುವವರೇ ಜಾಸ್ತಿ.ಆದ್ರೂ ಕೆಲವರಿಗೆ ಮಿಲನ ಕ್ರಿಯೆಗೂ ಮುನ್ನ ತುಂಬಾ ಗೊಂದಲ ಮತ್ತು ಮುಜುಗರ ಆದ್ದರಿಂದ ಗಲಿಬಿಲಿಯಾಗುತ್ತಾರೆ.ಆದ್ದರಿಂದ ಈ ವಿಷಗಳು ನಿಮಗೆ ತಿಳಿದಿದ್ದರೆ ಒಳ್ಳೆಯದು.

ಸೆಕ್ಸ್ ಎಂದರೆ ಕೇವಲ ಸುಖ ಪಡೆಯುವುದು ಮಾತ್ರವಲ್ಲ, ಅದಕ್ಕೂ ಮೊದಲು ರೋಮ್ಯಾಂಟಿಕ್ ಆಗಿರುವುದು ಸಹ ಸೆಕ್ಸ್ ನ ಒಂದು ಭಾಗ. ಆದ್ದರಿಂದ ನೀವು ಮೊದಲು ನಿಮ್ಮ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಮೂಡ್ ಗೆ ಹೋಗುವುದು ಒಳಿತು.

ಮಹಿಳೆಯರಿಗೆ ಕೇವಲ ಲೈಂಗಿಕ ಕ್ರಿಯೆಯಿಂದ ಮಾತ್ರ ತೃಪ್ತಿ ಸಿಗೋದಿಲ್ಲ. ಅವರಿಗೆ ಫೋರ್‌ ಪ್ಲೇ ಮುಖ್ಯ. ಅದು ಅವರನ್ನು ಸೆಕ್ಸ್‌ಗೂ ಮುನ್ನ ಸಂಪೂರ್ಣವಾಗಿ ಪರವಶಗಳಿಸುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತದೆ.

ನಿಮಗೆ ಸೈಜ್‌ ಬಗ್ಗೆ ಟೆನ್ಶನ್ ಇದ್ರೆ ಅದ್ರಿಂದ ಮೂಡ್ ಕೆಡುತ್ತದೆ. ಆದುದರಿಂದ ನಿಮ್ಮಾಕೆಯನ್ನು ಹೇಗೆ ಖುಷಿ ಪಡಿಸೋದು ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಬೇರೆಲ್ಲಾ ಯೋಚನೆ ಮಾಡಬಾರದು ಮತ್ತು ಮೊದಲ ಬಾರಿಗೆ ಸೆಕ್ಸ್ ಮಾಡುವಾಗ ತುಂಬಾ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಅದು ನಿರೀಕ್ಷಿತ ಸುಖ ನೀಡದಿದ್ದರೆ ಬೇಸರವಾಗುತ್ತದೆ.

ಅಸುರಕ್ಷಿತ ಲೈಂಗಿಕ ಕ್ರಿಯೆ ಮಾಡಲೇ ಬಾರದು, ಇದರಿಂದ ಮುಂದೆ ಸಮಸ್ಯೆ ಉಂಟಾಗೋದು ಖಂಡಿತಾ. ಆದ್ದರಿಂದ ಕಾಂಡೋಮ್ ಬಳಸಬೇಕು ಹಾಗೂ ಪಿರಿಯಡ್ಸ್‌ ಸಮಯದಲ್ಲಿ ಸೆಕ್ಸ್‌ ಮಾಡುವುದು ಸ್ವಚ್ಛತಾ ದೃಷ್ಟಿಯಿಂದ ಒಳ್ಳೆಯದಲ್ಲ. ನಿಮ್ಮ ಸಂಗಾತಿಗೆ ಕಿರಿ ಕಿರಿ ಎನಿಸಬಹುದು.

Leave a Reply

Your email address will not be published. Required fields are marked *