ನಮಸ್ಕಾರ ಸ್ನೇಹಿತರೆ ರುದ್ರಾಕ್ಷಿಯನ್ನು ನಾವು ಸಾಮಾನ್ಯವಾಗಿ ಸ್ವಾಮೀಜಿಗಳ ಹತ್ತಿರ ಅಥವಾ ದೇವರ ಭಕ್ತರು ಅಥವಾ ಪೂಜೆ ಮಾಡುವಂಥ ಸಂದರ್ಭದಲ್ಲಿ ಗೊತ್ತಿದೆ ಈ ರುದ್ರಾಕ್ಷಿಯು ನಮ್ಮ ಹಿಂದೂ ಧರ್ಮದಲ್ಲಿ ಅತಿ ಮುಖ್ಯವಾದ ಅಂತಹ ಲಿಂಗವೆಂದು ಪರಿಗಣಿಸಲಾಗಿದೆ ಇದನ್ನು ಪೂಜೆ ಮಾಡುವುದರಿಂದ ಹಲವಾರು ರೀತಿಯಾದಂತಹ ಒಳ್ಳೆಯ ಸುದ್ದಿಗಳು ನಮಗೆ ಸಿಗುತ್ತವೆ. ಇವತ್ತಿನ ಮಾಹಿತಿಯಲ್ಲಿ ನಿಮಗೆ ಯಾವ ರಾಶಿಯವರು ಯಾವ ರೀತಿಯಾದಂತಹ ರುದ್ರಾಕ್ಷಿಯನ್ನು ಧರಿಸಿದರೆ ನಿಮಗೆ ಲಾಭವಾಗುತ್ತದೆ ಎಂದು ತಿಳಿಯೋಣ.

ರುದ್ರಾಕ್ಷಿಯನ್ನು ಧರಿಸುವುದರಿಂದ ಏನೆಲ್ಲಾ ಲಾಭವಿದೆ ಹಾಗೂ ಯಾವ ರಾಶಿಯವರು ಯಾವ ರುದ್ರಾಕ್ಷಿಯನ್ನು ಧರಿಸಿದರೆ ಒಳ್ಳೆಯದು ಎಂಬುದನ್ನು ಈಗ ತಿಳಿಯೋಣ. ಪುರಾತನ ಪ್ರಕಾರ ತ್ರಿಪುರಾಕ್ಷಣ ಸಂಹಾರ ನಂತರ ಪರಶಿವನ ಕಣ್ಣಿನಿಂದ ಬಂದ ಆನಂದದ ಅಷ್ಟು ಬಿಂದುಗಳು ರುದ್ರಾಕ್ಷಿಮಣಿಗಳು ಅದವು. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿಮಣಿಗಳು ಶಿವಭಕ್ತರ ಕೊರಳ ಮಣಿಮಾಲೆಯಾಗಿ ಉಪಯೋಗಿಸಲ್ಪಡುತ್ತದೆ.

ಇದನ್ನು ಜಪಮಾಲೆಯಾಗಿ ಉಪಯೋಗಿಸುತ್ತಾರೆ ಶಿವನು ದೀರ್ಘಕಾಲ ಧ್ಯಾನ ನಿರತನಾಗಿ ನಂತರ ಕಣ್ಣು ಬಿಟ್ಟಾಗ ಅವನ ಕಣ್ಣಿನಿಂದ ಬಿದ್ದ ಒಂದು ಆನಂದ ಭಾಷ್ಪ ರುದ್ರಾಕ್ಷಿಯಾಗಿ ಅದರಿಂದ ರುದ್ರಾಕ್ಷಿ ಮರ ಹುಟ್ಟಿದೆ ಎಂದು ಹೇಳಲಾಗಿದೆ ಅದು ಶಿವನ ಮೂರನೇ ಕಣ್ಣಿನ ರೂಪ ವಾಗಿದ್ದು ಜನರ ಕಣ್ಣೀರನ್ನು ವರಿಸುವ ಅಂದರೆ ದುಃಖವನ್ನು ದೂರ ಮಾಡುವ ಗುಣವನ್ನು ಹೊಂದಿದೆ ಇನ್ನೊಂದು ಕಥೆಯಂತೆ ಶಿವನು ತಾರಕಾಸುರನನ್ನು ಸಂಹರಿಸಿದ ಮೇಲೆ ಅವನ ಮಕ್ಕಳ ಕಮಲಾಕ್ಷ ಗುಣವಂತನಾಗಿ ದೇವತೆಗಳ ಸಾಲಿಗೆ ಸೇರಿದರು.

ಆದರೆ ಕೆಲವು ಕಾಲಗಳ ನಂತರ ದುಷ್ಟರಾಗಿ ಜನರಿಗೆ ತೊಂದರೆಯನ್ನು ಕೊಟ್ಟರು ಅವರನ್ನು ಶಿವನು ಸಂಹರಿಸಿದನು. ಹೀಗೆ ತನ್ನ ಭಕ್ತರು ದುಷ್ಟರಾಗಿ ಸತ್ತುದನ್ನು ನೋಡಿ ಶಿವನ ಕಣ್ಣಿನಿಂದ ನೀರಿನ ಹನಿಗಳು ದೊರೆತವು. ಅದೇ ಮರಗಳಾಗಿ ಅದರ ಸಂತತಿ ರುದ್ರಾಕ್ಷಿಗಳನ್ನು ಕೊಡುತ್ತೇವೆ ಒಂದು ಮರದಲ್ಲಿ ಸುಮಾರು 2,000 ದಷ್ಟು ಹಣ್ಣು ಬೀಳುವುದು ಅದರಲ್ಲಿ 108 ಮಣಿಗಳ ಜಪಮಾಲೆಯನ್ನು ಮಾಡುತ್ತಾರೆ ಮಾಡುತ್ತಾರೆ. ಹಿಮಲಯ ದತಿಗಳು ಅಮರದ ಹಣ್ಣುಗಳನ್ನು ಅಮೃತ ಫಲವೆಂದು ತಿನ್ನುತ್ತಾರೆ.

ರುದ್ರಾಕ್ಷಿ ಇದರ ಮಾಲೆಯನ್ನು ಪ್ರತಾಹಕಾಲ ಮತ್ತು ಸಾಯಂಕಾಲ ಶುದ್ಧ ಮನಸ್ಕರಾಗಿ ಪರಮೇಶ್ವರನ ದಿವ್ಯ ನಾಮವಾದ ಪಂಚಾಕ್ಷರಿ ಮಹಾಮಂತ್ರ ಓಂ ನಮಃ ಶಿವಾಯ ಜಪಿಸಿ ಧರಿಸಬೇಕು. ಪರ ಮಂತ್ರ ಪಠಣದಿಂದ ಹಾಗೂ ರುದ್ರಾಕ್ಷಿ ಮಾಲಾ ಧಾರಣೆಯಿಂದ ಭಯ ಅಳುಕು ದೂರವಾಗಿ ಶಿವ ಕೃಪೆ ನೆಮ್ಮದಿ ಶಾಂತಿ ಲಭಿಸುತ್ತದೆ. ಇದನ್ನು ಹಿಡಿದುಕೊಂಡು ಜಪಿಸುವುದರಿಂದ ಆರೋಗ್ಯ ಲಭಿಸುತ್ತದೆ ರುದ್ರಾಕ್ಷಿಗೆ ಹಲವು ಮುಖಗಳು ಇವೆ ಎಷ್ಟು ಮುಖದ ರುದ್ರಾಕ್ಷಿ ಶಿವನ ಯಾವ ಸ್ವರೂಪವನ್ನು ಪ್ರತಿನಿಧಿಸುತ್ತದೆ ಅದನ್ನು ಯಾವ ರಾಶಿಯವರು ಧರಿಸಬೇಕು ಎಂಬುದನ್ನು ಈಗ ತಿಳಿಯೋಣ.

ಏಕ ಮುಖದ ರುದ್ರಾಕ್ಷಿ ಸಾಕ್ಷಾತ್ ಪರಶಿವ ಇದನ್ನು ಮಕರ ರಾಶಿಯವರು ಧರಿಸಬಹುದು. ಎರಡು ಮುಖದ ರುದ್ರಾಕ್ಷಿ ಎಂದರೆ ಅರ್ಧನಾರೀಶ್ವರ. ಶಕ್ತಿ ಮತ್ತು ಶಿವ ಇದನ್ನು ಮೇಷ ರಾಶಿಯವರು ಧರಿಸಿದರೆ ಸುಲಭ ಮೂರು ಮುಖದ ರುದ್ರಾಕ್ಷಿ ಅಗ್ನಿ ದೇವ ಇದು ಕನ್ಯಾರಾಶಿಯವರಿಗೆ ಶುಭಕರ ನಾಲ್ಕು ಮುಖದ ರುದ್ರಾಕ್ಷಿ ಚತುರ್ಮುಖ ಬ್ರಹ್ಮದೇವರು. ಇದನ್ನು ಧರಿಸಬೇಕಾದವರು ಮಿಥುನ ರಾಶಿಯವರು. ಹೌದು ಈ ಮೇಲಿನ ರೀತಿಯಾದಂತಹ ರುದ್ರಾಕ್ಷಿಯನ್ನು ನೀವು ಧರಿಸಿದರೆ ತುಂಬಾನೇ ಉಪಯೋಗವಾಗುತ್ತದೆ ಎಂದು ಹೇಳಬಹುದು. ನಿಮ್ಮ ರಾಶಿಗೆ ಅನುಗುಣವಾಗಿ ನೀವು ರುದ್ರಾಕ್ಷಿಯನ್ನು ಧರಿಸಿಕೊಳ್ಳಿ.

Leave a Reply

Your email address will not be published. Required fields are marked *