ಪ್ರತಿನಿತ್ಯ ಕ್ಯಾರೆಟ್ ಜ್ಯೂಸ್ ಕುಡಿರಿ ಆರೋಗ್ಯವನ್ನು ಪಡೆಯಿರಿ. ಈ ವಿಷಯ ತಿಳಿದುಕೊಳ್ಳುವುದಕ್ಕೂ ಮುನ್ನ ಈ ಮಾಹಿತಿ ಸ್ಕಿಪ್ ಮಾಡದೇ ಕೊನೆವರೆಗೂ ಓದುವುದನ್ನು ಮರೆಯಬೇಡಿ. ಕ್ಯಾರೆಟ್ ತಿನ್ನಿ, ಕಣ್ಣಿಗೆ ಒಳ್ಳೆಯದು ಎಂದು ನಮ್ಮ ಹಿರಿಯರು ಹೇಳುತ್ತಾ ಬಂದಿದ್ದನ್ನು ಕೇಳುತ್ತಲೇ ನಾವೂ ದೊಡ್ಡವರಾಗಿದ್ದೇವೆ. ವಾಸ್ತವದಲ್ಲಿ ಕ್ಯಾರೆಟ್ ಸೇವನೆಯಿಂದ ಇದೊಂದೇ ಪ್ರಯೋಜನವಲ್ಲ, ಇನ್ನೂ ಕೆಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇದೊಂದು ಸಡಿಲವಾದ ಮಣ್ಣಿನಲ್ಲಿ ಬೆಳೆಯುವ ಗಡ್ಡೆಯಾಗಿದ್ದು ಕೇಸರಿ ಬಣ್ಣದಲ್ಲಿನ ಕೋನಾಕೃತಿಯ ಗಡ್ಡೆಯಾಗಿದೆ. ಇದರಲ್ಲಿ ಹಲವಾರು ಪೋಷಕಾಂಶಗಳಿದ್ದು ಇದರಲ್ಲಿ ಪ್ರಮುಖ ವಾಗಿರುವ ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ.

ಈ ಭೂಮಿಯಲ್ಲಿ ಯಾವುದೇ ಬೆಳೆಯುವ ತರಕಾರಿಗಳು ಹಣ್ಣು ಹಂಪಲುಗಳು ಆಗಲಿ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇದ್ದೇ ಇರುತ್ತವೆ ಅದರಲ್ಲೂ ನೆಲದ ಅಡಿಯಲ್ಲಿ ಬೆಳೆಯುವಂತಹ ಆಲೂಗಡ್ಡೆ ಈರುಳ್ಳಿ ಮತ್ತಿತರೆಯಲ್ಲಿ ಪೋಷಕಾಂಶಗಳು ಹೆಚ್ಚಿರುತ್ತವೆ. ಇದನ್ನು ಬಳಸುವುದರಿಂದ ನಾವು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದಾಗಿದೆ. ಅದರಲ್ಲೂ ನೆಲದ ಅಡಿಯಲ್ಲಿ ಬೆಳೆಯುವಂತಹ ಕ್ಯಾರೆಟನ್ನು ಟಾಲಾಡ್ ಮತ್ತು ಇತರೆ ಪದಾರ್ಥಗಳಲ್ಲಿ ಬಳಸುತ್ತೇವೆ.

ಅಂತವರು ಇದನ್ನು ಜ್ಯೂಸ್ ಮಾಡಿ ಕುಡಿದರೆ ಇದರಿಂದ ಪಾರ ಲಾಭವನ್ನು ಪಡೆದುಕೊಳ್ಳಬಹುದು. ಮೊದಲಿಗೆ ಮೊಡವೆಗಳನ್ನು ನಿವಾರಿಸುತ್ತದೆ. ಕ್ಯಾರೆಟ್ ನಲ್ಲಿ ಇರುವ ವಿಟಮಿನ್ ಎ ಚರ್ಮಕ್ಕೆ ಆರೋಗ್ಯ ನೀಡುವುದರ ಜೊತೆಗೆ ಮೊಡವೆಗಳನ್ನು ಕೋಣೆಗೊಳಿಸಲು ನೆರವಾಗುತ್ತದೆ. ಮತ್ತು ಚರ್ಮದ ಕಲ್ಮಶಗಳನ್ನು ಚರ್ಮದ ರಂದ್ರಗಳ ಮೂಲಕ ಒಡವಿಗಳನ್ನು ಮೂಡುವ ಸಂಭವಗಳನ್ನು ಬುಡದಿಂದ ನಿವಾರಿಸುತ್ತದೆ. ಎರಡನೇದಾಗಿ ಕೂದಲ ಬೆಳವಣಿಗೆಗೆ ಉಪಯೋಗವಾಗುತ್ತದೆ ಕ್ಯಾರೆಟ್ ನಲ್ಲಿರುವ ಅಪಾರ ಪೋಷಕಾಂಶಗಳು ಕೂದಲನ್ನು ಬುಡದಿಂದ ದೃಢಗೊಳಿಸಿ, ಕೂದಲ ಬೆಳವಣಿಗೆ ನೆರವಾಗುತ್ತದೆ. ಅದಲ್ಲದೆ ಕ್ಯಾರೆಟ್ ನಲ್ಲಿ ಇರುವ ವಿಟಮಿನ್ ಸಿ ಮತ್ತು ಈ ರಕ್ತಪರ್ಲಿ ಚಲನೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಕೂದಲು ಉದುರುವುದನ್ನು ತಡೆಯುತ್ತದೆ.

ಮುಂದಿನದು ಹೃದಯದ ಆರೋಗ್ಯ ಕ್ಯಾರೆಟ್ ಜೂಸ್ ಅನ್ನು ಹೃದಯ ಬಡಿತದ ಮಧ್ಯ ಉಂಟಾಗುವ ಒತ್ತಡಗಳು ಕಡಿಮೆ ಮಾಡುತ್ತದೆ. ಕ್ಯಾರೆಟ್ ಸೇವನೆಯಿಂದ ಸ್ಪಷ್ಟವಾಗಿ ದೊರಕಬಲ್ಲ ಇನ್ನೊಂದು ಪ್ರಯೋಜನವೆಂದರೆ ತ್ವಚೆ ಉತ್ತಮಗೊಳ್ಳುವುದು. ಕ್ಯಾರೆಟ್ ರಸದ ನಿತ್ಯದ ಸೇವನೆಯಿಂದ ತ್ವಚೆಯ ತೊಂದರೆಗಳು ಶೀಘ್ರವೇ ಸರಿಹೋಗುತ್ತವೆ. ಚರ್ಮದಲ್ಲಿ ಎದುರಾಗಿರುವ ಕೆಂಪು ಗೆರೆಗಳು, ಉರಿ, ಸೋರಿಯಾಸಿಸ್, ಎಕ್ಸಿಮಾ ಮೊದಲಾದ ಕಾಯಿಲೆಗಳು ಕ್ಯಾರೆಟ್ ಸೇವನೆಯಿಂದ ಶೀಘ್ರವೇ ಗುಣವಾಗುತ್ತವೆ.

ಕ್ಯಾರೆಟ್ ನಲ್ಲಿ ವಿಟಮಿನ್ ಎ ಹೊರತಾಗಿ ಇತರ ಪೋಷಕಾಂಶಗಳೂ ಉತ್ತಮ ಪ್ರಮಾಣದಲ್ಲಿವೆ. ಕ್ಯಾಲ್ಸಿಯಂ, ಮೆಗ್ನೀಶಿಯಂ, ಪೊಟ್ಯಾಶಿಯಂ, ಫೋಲೇಟ್ ಗಳು ಪ್ರಮುಖವಾಗಿದ್ದು ಇವೆಲ್ಲವೂ ಗರ್ಭಿಣಿಯರ ಆರೋಗ್ಯಕ್ಕೆ ಪೂರಕವಾಗಿವೆ. ಎಂದು ನ್ಯೂಟ್ರಿಷನ್ ಜನರಲ್ ನಲ್ಲಿ ಪ್ರಕಟವಾದ ಸಂಶೂಧನೆಯಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *