ಮೋದಿ ಸರ್ಕಾರದ ಪ್ರಧಾನ ಮಂತ್ರಿ ಶ್ರಮಯೋಗಿ ಮನಧನ್ ಯೋಜನೆ ನಿಯಮಗಳನ್ನು ಜಾರಿಗೊಳಿಸಿದೆ.ಈ ಯೋಜನೆ ಇಂದಿನಿಂದಲೇ ಜಾರಿಗೆ ಬಂದಿದೆ. ಈ ಯೋಜನೆಯಡಿ ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷದ ನಂತ್ರ ಮಾಸಿಕ ಪಿಂಚಣಿ 3000 ರೂಪಾಯಿ ಸಿಗಲಿದೆ. ಈ ಯೋಜನೆಯನ್ನು ಫೆಬ್ರವರಿ ಒಂದರಂದು ಮಂಡಿಸಿದ ಬಜೆಟ್ ನಲ್ಲಿ ಸರ್ಕಾರ ಈ ಯೋಜನೆಯ ಘೋಷಣೆ ಮಾಡಿತ್ತು.

ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಸಂಘಟಿತ ವಲಯದ ಕಾರ್ಮಿಕರ ವಯಸ್ಸು 18 ವರ್ಷದಿಂದ 40 ವರ್ಷದೊಳಗಿರಬೇಕು. ಈಗಾಗಲೇ ಸರ್ಕಾರದ ಯಾವುದಾದ್ರೂ ಪಿಂಚಣಿ ಯೋಜನೆ ಹೊಂದಿರುವ ಕಾರ್ಮಿಕರು ಈ ಯೋಜನೆ ಲಾಭ ಪಡೆಯಲು ಸಾಧ್ಯವಿಲ್ಲ.

ಯಾರು ಈ ಯೋಜನೆಗೆ ಒಳ ಪಡುತ್ತಾರೆ?: ರಿಕ್ಷಾ ಚಾಲಕರು, ನಿರ್ಮಾಣ ಕಾರ್ಮಿಕರು, ಕಸ ಸಂಗ್ರಹಕಾರರು, ಬೀಡಿ ತಯಾರಕರು, ಕೈಮಗ್ಗ ಕಾರ್ಮಿಕರು, ಕೃಷಿ ಕಾರ್ಮಿಕರು, ಚರ್ಮದ ಕೆಲಸ ಮಾಡುವವರು ಸೇರಿದಂತೆ ಅಸಂಘಟಿತ ವಲಯದಲ್ಲಿ ಬರುವ ಕಾರ್ಮಿಕರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಪ್ರಧಾನ ಮಂತ್ರಿ ಶ್ರಮಯೋಗಿ ಮನಧನ್ ಯೋಜನೆಯಡಿ ಪಿಂಚಣಿ ಪಡೆಯಲು ಬಯಸುವ ಕಾರ್ಮಿಕರ ವೇತನ 15 ಸಾವಿರಕ್ಕಿಂತ ಹೆಚ್ಚಿರಬಾರದು ಹಾಗೂ ಉಳಿತಾಯ ಠೇವಣಿ ಖಾತೆ ಹಾಗೂ ಆಧಾರ್ ಕಾರ್ಡ್ ಹೊಂದಿರಬೇಕಾಗುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವ 18 ವರ್ಷದ ಕಾರ್ಮಿಕರು ಪ್ರತಿ ತಿಂಗಳು 55 ರೂ ಜಮಾ ಮಾಡಬೇಕು. 29 ವರ್ಷದ ಕಾರ್ಮಿಕರು 100 ರೂಪಾಯಿ ಜಮಾ ಮಾಡಬೇಕಾಗುತ್ತದೆ.
40 ವರ್ಷದ ಕಾರ್ಮಿಕರು 400 ರೂಪಾಯಿ ಜಮಾ ಮಾಡಬೇಕಾಗುತ್ತದೆ.

ಈ ಯೋಜನೆಯ ಸಂಪೂರ್ಣ ನೀಡಲಾಗಿದೆ. ಇದನ್ನು ನೀವು ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳಿ ಮತ್ತು ಈ ವಿಷಯವನ್ನು ನಿಮ್ಮ ಸ್ನೇಹಿತರಲ್ಲೂ ಹಂಚಿಕೊಳ್ಳಿ.

Leave a Reply

Your email address will not be published. Required fields are marked *