ಅಲೋವೆರಾ ಅಂದರೆ ಲೋಳೆಸರ ಎನ್ನುವ ಈ ಔಷಧೀಯ ಗಿಡ ಮನುಷ್ಯನ ದೇಹಕ್ಕೆ ತ್ವಚೆಗೆ ಸಾಕಷ್ಟು ಉಪಯೋಗಕಾರಿ. ಸಾಕಷ್ಟು ಜೆಲ್ ಗಳಲ್ಲಿ, ಔಷಧಗಳಲ್ಲಿ ಈ ಆಲೋವೆರಾವನ್ನು ಬಳಸುತ್ತಾರೆ. ಸದ್ಯ ಈ ಗಿಡ ಎಲ್ಲರಿಗೂ ಚಿರಪರಿಚಿತವೇ. ಹಾಗಾದರೆ ಏನೆಲ್ಲಾ ಉಪಯೋಗಗಳು ಇವೆ ಅನ್ನೋದನ್ನು ನೋಡೋಣ ಬನ್ನಿ.

ಅಜೀರ್ಣ ಸಮಸ್ಯೆಗೆ ಈ‌ ಅಲೋವೆರಾ ತುಂಬಾ ಉಪಯೋಗಕಾರಿ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರು ಅಲೋ ವೆರಾ ರಸವನ್ನು ಕುಡಿಯುವುದರಿಂದ ಉರಿಯೂತ ಅಥವಾ ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ. ಸಾಕಷ್ಟು ಮಂದಿ ಇದನ್ನು ಈಗಲೂ ಜೀರ್ಣಕಾರಿಗೋಸ್ಕರ ಉಪಯೋಗಿಸೋದುಂಟು.

ಇನ್ನು ಈ ಅಲೋವೇರಾ ಸುಟ್ಟಿರುವ ಗಾಯಗಳಿಗೂ ಕುಡ ರಾಮಭಾಣ. ಸದ್ಯ ಈ ಅಲೋವೇರಾದ ಲೋಳೆ ಅಥವಾ ತಿಳಿಯನ್ನು ತೆಗೆದು ಸುಟ್ಟು ಗಾಯಗಳಿಗೆ ಹಚ್ಚುವುದರಿಂದ ಗಾಯ ಬೇಗನೇ ವಾಸಿಯಾಗುತ್ತದೆ. ಅಷ್ಟೆ ಅಲ್ಲ ಈ ಗಾಯಗಳು ಕಲೆಯಾಗಿ ಉಳಿಯುವದನ್ನು ತಡೆಯುವ ಶಕ್ತಿ ಅಲೋವೇರಾಗೆ ಇದೆ.

ಜೀರ್ಣಕ್ರಿಯೆಯು ಸರಿಯಾಗಿದ್ದರೆ ಆರೋಗ್ಯವಂತರಾಗಿ ಇದ್ದೀರಿ ಎಂದು ಅರ್ಥ. ಆದರೆ ಹಲವಾರು ಕಾರಣಗಳಿಂದ ಅಜೀರ್ಣವಾಗುವುದು ಸಹಜ. ಐಸ್‌ನ ಚಿಕ್ಕ ಚಿಕ್ಕ ತಂಡುಗಳನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಹೊಟ್ಟೆ ನೋವಾಗುತ್ತಿರುವ ಜಾಗದ ಮೇಲೆ ಅಥವಾ ನಿಧಾನವಾಗಿ ಮಸಾಜ್‌ ಮಾಡಿದರೆ ಊರಿಯೂತ, ನೋವು ಕಡಿಮೆಯಾಗುತ್ತದೆ.

ಐಸ್‌ ಮನೆಯಲ್ಲಿ ಇಲ್ಲದಿದ್ದರೂ ಚಿಂತಿಸುವ ಅಗತ್ಯವಿಲ್ಲ. ಮೂಲವ್ಯಾಧಿ ಚಿಕಿತ್ಸೆಗೆ ಲೋಳೆಸರ ಒಳ್ಳೆಯ ಔಷಧವಾಗಿದೆ. ಲೋಳೆಸರವು ಬಾಹ್ಯ ಮತ್ತು ಆತಂರಿಕ ಊರಿಯೂತವನ್ನು ಗುಣಪಡಿಸುತ್ತದೆ. ಲೋಳೆಸರದ ಎಲೆಯ ರಸವನ್ನು ಪ್ರತಿನಿತ್ಯ ಕಾಲು ಲೋಟ ಕುಡಿದರೆ ಮಲದ್ಧತೆ ಸಂಪೂರ್ಣ ನಿವಾರಣೆಯಾಗುತ್ತದೆ.

ಇದು ಕಹಿ ಇರುವುದರಿಂದ ಕುಡಿಯಲು ಕಷ್ಟವಾದರೆ ಊತ ಬಂದಿರುವ ಜಾಗಕ್ಕೆ ಇಟ್ಟು ನಿಧಾನವಾಗಿ 10 ನಿಮಿಷ ಮಸಾಜ್‌ ಮಾಡಿದರೆ ಸಾಕು. ಪ್ರತಿನಿತ್ಯ ಹೀಗೆ ಮಾಡುತ್ತಾ ಬಂದರೆ ಕೆಲವೇ ದಿನದಲ್ಲಿ ಮೂಲವ್ಯಾಧಿ ವಾಸಿಯಾಗುವುದು.

Leave a Reply

Your email address will not be published. Required fields are marked *