ನೀವು ಕೂಡ ಕೇಳಿರಬಹುದು ಅಥವಾ ಓದಿರಬಹುದು ಒಂದು ಕಾಲದಲ್ಲಿ ಜನರು ಕಾಡಿನಲ್ಲಿ ಗಡ್ಡೆ ಗೆಣಸುಗಳನ್ನು ತಿಂದು ಜೀವನ ಮಾಡುತ್ತಿದ್ದರು. ಆ ಕಾಲದಲ್ಲಿ ಮನುಷ್ಯನಿಗೆ ಯಾವುದೇ ರೋಗ ರುಜಿನಗಳು ಕಾಯಿಲೆ ಕಸಾಲೆಗಳು ಕಾಣಿಸುತ್ತಿರಲಿಲ್ಲ. ಚೆನ್ನಾಗಿ ಕೆಲಸ ಮಾಡಿಕೊಂಡು, ತಮ್ಮ ಪಾಡಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಇನ್ನು ತಮ್ಮ ದೇಹ ಸದೃಢತೆಯ ವಿಚಾರದಲ್ಲಿ ಸಹ ನಮಗೆ ಹೋಲಿಸಿದರೆ ತುಂಬಾ ಶಕ್ತಿವಂತರಾಗಿ ಕಾಣುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಸೇವಿಸುವ ಆಹಾರ ಪದ್ಧತಿಯಿಂದ ಹಿಡಿದು, ದೈನಂದಿನ ಜೀವನ ಶೈಲಿ ಎಲ್ಲವೂ ಕೂಡ ಬದಲಾಗಿ ಬಿಟ್ಟಿದೆ.

ಇತ್ತೀಚೆಗೆ ನಾವು ರೂಢಿ ಮಾಡಿಕೊಂಡಿರುವ ಕೆಲವು ಆಹಾರ ಪದಾರ್ಥಗಳು, ಆರೋಗ್ಯಕ್ಕೆ ಸಾಕಷ್ಟು ಮಾರಕ ಪರಿಣಾಮಗಳನ್ನು ಉಂಟು ಮಾಡುತ್ತಿವೆ. ಆದರೆ ವಿರ್ಯಾಸ ಎಂದರೆ, ಈ ವಿಷ್ಯಗಳು ನಮಗೆ ಗೊತ್ತಿದ್ದರೂ ಕೂಡ, ನಾವು ಅದಕ್ಕೆ ಸಾಕಷ್ಟು ಅಂಟಿಕೊಂಡಿದ್ದೇವೆ ಎಂದರೆ ತಪ್ಪಾಗಲಾರದು. ಹೀಗಾಗಿಯೇ ಇಂದು ಹಲವಾರು ರೋಗ ರುಜಿನಗಳು ಚಿಕ್ಕ ವಯಸ್ಸಿಗೆ ಬಂದು ಮನುಷ್ಯರ ಇರುವ ಆಯಸ್ಸನ್ನು ಕಡಿಮೆ ಮಾಡುತ್ತಿವೆ.

ಇವೆಲ್ಲಾ ಸಮಸ್ಯೆಗಳಿಂದ ಹೊರಬರಲು ಸಾಕಷ್ಟು ದಾರಿಗಳಿವೆ. ಹಿರಿಯರು ಅನುಸರಿಸುತ್ತಿದ್ದ ಕೆಲವೊಂದು ಆಹಾರ ಪದ್ಧತಿಗಳನ್ನು, ನಾವು ಕೂಡ ಇಂದಿಗೆ ಅನುಸರಿಸಬೇಕಾದ ಅನಿವಾರ್ಯತೆ ನಮಗೆ ಎದುರಾಗಿದೆ. ಅಂತಹ ಆಹಾರಗಳಲ್ಲಿ ಮರಗೆಣಸು ಕೂಡ ಒಂದು. ಇಂದಿನ ಲೇಖನದಲ್ಲಿ ಈ ಮರಗೆಣಸಿನಲ್ಲಿರುವ ಪ್ರಯೋಜನಗಳ ಬಗ್ಗೆ ನೋಡೋಣ. ಮೈಗ್ರೇನ್ ತಲೆನೋವು ಅನುಭವಿಸಿದವರಿಗೆ ಗೊತ್ತು, ಇದು ಎಷ್ಟು ಹಿಂಸೆ ನೀಡುತ್ತದೆ ಎಂದು. ಎಷ್ಟೋ ಜನರು ಇಂತಹ ಮೈಗ್ರೇನ್ ತಲೆ ನೋವನ್ನು ಸಹಿಸಿಕೊಳ್ಳಲಾಗದೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ವೈದ್ಯರು ಕೊಡುವ ಔಷಧಿಗಳನ್ನು ತೆಗೆದುಕೊಂಡು ಸಹ ಪರಿಹಾರ ವಾಗಿಲ್ಲ ಎಂಬುದು ಹಲವರ ಮಾತು.

ಅಧ್ಯಾಯಾನದ ಪ್ರಕಾರ, ಆಗಾಗ ಕಾಡುವ ತಲೆ ನೋವಿನ ಸಮಸ್ಯೆ ಇದ್ದವರು ಮರಗೆಣಸನ್ನು ಬೇಯಿಸಿ ಸೇವನೆ ಮಾಡಿದರೆ ಅದರಿಂದ ಪರಿಹಾರ ಕಾಣಬಹುದು ಎಂದು ಹೇಳಲಾಗಿದೆ. ಇಲ್ಲಾಂದ್ರೆ ಮರ ಗೆಣಸಿನ ಎಲೆಗಳು ಅಥವಾ ಅದರ ಬೇರುಗಳನ್ನು ಮೊದಲು ಚೆನ್ನಾಗಿ ಶುದ್ಧ ಮಾಡಿ ನೀರಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ನೆನೆ ಹಾಕಿ ನಂತರ ಅದರಿಂದ ಜ್ಯೂಸ್ ತಯಾರಿಸಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ತಲೆ ನೋವಿನ ಸಮಸ್ಯೆ ದೂರಾಗುತ್ತದೆ.

Leave a Reply

Your email address will not be published. Required fields are marked *