ಒಂದು ಕಾಲದಲ್ಲಿ ಪ್ರತಿಯೊಬ್ಬ ಯುವಕನಿಗೂ ಕನಸಾಗಿದ್ದ ಗಾಡಿ RX100. ಹೌದು ಈ ಗಾಡಿಯ ಕ್ರೆಜ್ ಅಂದಿನ ಕಾಲದಲ್ಲಿ ಹೇಗಿತ್ತು ಅದರಕ್ಕಿಂತ ದುಪ್ಪಟ್ಟು ಈಗ ಇದೆ.RX 100 ಈ ಹೆಸರು ಕೇಳಿದರೆ ಸಾಕು, ಹುಡುಗರ ಮನಸ್ಸಲ್ಲಿ ಅದೇನೋ ಒಂದು ರೋಮಾಂಚನವಾಗುತ್ತೆ. ಯಾಕೆಂದರೆ ಜೀವನದಲ್ಲಿ ಒಮ್ಮೆಯಾದರೂ ಈ ಗಾಡಿಯನ್ನು ತಮ್ಮದಾಗಿಸಬೇಕೆಂಬುವುದು ಪ್ರತಿ ಯುವಕನ ಕನಸು. ಎಲ್ಲಾ ವಯಸ್ಸಿನ ಜನರು ಈ ಬೈಕ್ ಗೆ ಅಭಿಮಾನಿಯಾಗಿದ್ದರು. ಇದಕ್ಕೆ ಕಾರಣ ಎಂದರೆ ಇದಕ್ಕಿಂತ ಹೆಚ್ಚು ಜನಪ್ರೀಯ ಯಮಹಾ ಬೈಕ್ ಭಾರತ ಇದುವರೆಗೂ ಕಂಡಿಲ್ಲ.

ಈ ಗಾಡಿಯ ಕ್ರೇಜಿನಿಂದ ತೆಲುಗು ಕ್ಷೇತ್ರದಲ್ಲಿ RX100 ಎಂಬ ಚಲನಚಿತ್ರ ಬಿಡುಗಡೆಯಾಗಿತ್ತು ಈ ಹೆಸರಿನಿಂದ ನಿರ್ಮಿಸಿದ್ದ ಈ ಚಲನಚಿತ್ರ ಬ್ಲಾಕ್ಬಸ್ಟರ್ ನಲ್ಲಿ ತುಂಬಾ ಹೆಸರು ಮಾಡಿತ್ತು.ಯಮಹಾ ಆರ್ ಎಕ್ಸ್ 100 ಬೈಕ್ ಕ್ರೇಜ್ ಇಂದಿಗೂ ಮುಂದುವರೆದಿದೆ. 90 ರ ದಶಕದಲ್ಲಿ, ಈ ಬೈಕ್ ಯುವಕರಲ್ಲಿ ಬಹಳ ಜನಪ್ರಿಯವಾಗಿತ್ತು. ಇಂದಿಗೂ ಈ ಬೈಕ್‌ಗೆ ಅನೇಕ ಅಭಿಮಾನಿಗಳು ಇದ್ದಾರೆ.ಈ ಬೈಕ್ ಅನ್ನು 1985 ರಿಂದ 1996 ಮಧ್ಯದ ಕಾಲದವರೆಗೆ ಈ ಗಾಡಿಯನ್ನು ಮಾರುಕಟ್ಟೆಯಲ್ಲಿ ಮಾರಲು ಅನುಮತಿ ಇತ್ತು. ಅದರ ನಂತರ ಈ ಬೈಕ್ ಉತ್ಪಾದನೆಯನ್ನು ನಿಲ್ಲಿಸಲಾಯಿತು. ಈ ನಿರ್ಧಾರದಿಂದ ಹಲವಾರು ಯುವಕರ ಕನಸಿನ ಮೇಲೆ ಎಳ್ಳು ನೀರು ಬಿಟ್ಟಂಗಾಯಿತು ಆದರೆ ಎಂದಿಗೂ ಕೂಡ ಸೆಕೆಂಡ್ ಹ್ಯಾಂಡ್ ಗಾಡಿಯು ತುಂಬಾನೇ ಚಾಲ್ತಿಯಲ್ಲಿದೆ.

ಹೀಗಾಗಿ ಜಪಾನಿನ ಮೋಟಾರ್‌ಸೈಕಲ್ ತಯಾರಕ ಯಮಹಾ ಭಾರತೀಯ ಮೋಟಾರ್‌ಸೈಕಲ್ ಮಾರುಕಟ್ಟೆಗೆ ಪ್ರವೇಶಿಸುವಲ್ಲಿ RX100 ಪ್ರಮುಖ ಪಾತ್ರ ವಹಿಸಿದೆ. ಆದರೆ ಈ ಬೈಕ್ ಅನ್ನು ಮತ್ತೆ ಭಾರತೀಯ ಮಾರುಕಟ್ಟೆಗೆ ತರಲಾಗುತ್ತಿದೆ. ಈ ಬಗ್ಗೆ ಯಮಹಾ ಮೋಟಾರ್ ಇಂಡಿಯಾ ಅಧ್ಯಕ್ಷ ಐಶಿನ್ ಸಿಹಾನಾ ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಯಮಹಾ RX100 ಮಾದರಿಯನ್ನು ಮತ್ತೆ ಭಾರತೀಯ ಮಾರುಕಟ್ಟೆಗೆ ತರಲು ಬಯಸಿದೆ. ಆದರೆ ಹಳೆಯ ಯಮಹಾ RX100 ಮತ್ತೆ ರಸ್ತೆಗಿಳಿಯುತ್ತಿಲ್ಲ.

ಏಕೆಂದರೆ ಇದು 2-ಸ್ಟ್ರೋಕ್ ಎಂಜಿನ್ ಅನ್ನು ಆಧರಿಸಿದೆ. ಆದ್ದರಿಂದ, ಪ್ರಸ್ತುತ BS6 ವಾಹನಗಳ ಪರಿಚಯದ ದೃಷ್ಟಿಯಿಂದ ಅದರ ಎಂಜಿನ್ ಅನ್ನು ಬದಲಾಯಿಸಬಹುದು. ಹೊಸ RX100 ಗಾಗಿ ಕಂಪನಿಯು ಹೊಸ ರೀತಿಯ ಬೈಕ್ ಅನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸರಕಾರದ ಹೊಸ ನಿಯಮ ಪಾಲನೆ ಮಾಡುವುದು ಅಗತ್ಯ ಇದರ ಪ್ರಕಾರ ಯಾವುದೇ ಹಳೆಯ ಗಾಡಿ 2 ಸ್ಟ್ರೋಕ ಗಾಡಿಗಳನ್ನು ಮಾರುಕಟ್ಟೆಗೆ ತರುವಂತಿಲ್ಲ ಹೀಗಾಗಿ ಈ ಒಂದು ಗಾಡಿಯನ್ನು ಪ್ರಸ್ತುತ ಸ್ಥಿತಿಗೆ ತಕ್ಕಂತೆ ನಿರ್ಮಾಣ ಮಾಡಬೇಕು. ವಿನ್ಯಾಸವನ್ನು ಸಹ ನವೀಕರಿಸಲಾಗುವುದು ಎಂದು ತೋರುತ್ತದೆ. ಹೊಸ RX100 ಗಾಗಿ, ಕಂಪನಿಯು ಹೊಸ ಬೈಕ್‌ನೊಂದಿಗೆ ಬರಬೇಕಿದೆ. ಒಂದು ವೇಳೆ ಈ ಗಾಡಿಯು ಮಾರುಕಟ್ಟೆಗೆ ಬಂದರೆ ನೀವು ಖರೀದಿ ಮಾಡಲು ಮುಂದಾಗುತ್ತೀರಾ..?

Leave a Reply

Your email address will not be published. Required fields are marked *