ಸಾರಾ ಅರ್ಜುನ್ ಅಕಾ ನಂದಿನಿ 10 ಕೋಟಿ ರೂಪಾಯಿ ಮೌಲ್ಯದ ನಿವ್ವಳ ಹೊಂದಿರುವ ದೇಶದ ಅತ್ಯಂತ ಶ್ರೀಮಂತ ಬಾಲನಟಿ ಆಗಿ ಹೊರಹೊಮ್ಮಿದ್ದಾರೆ. ಕೆಲವು ಟಾಪ್‌ ಚಲನಚಿತ್ರ ನಟಿಯರಷ್ಟೇ ಜನಪ್ರಿಯ ಮತ್ತು ಶ್ರೀಮಂತೆಯಾಗಬಹುದು ಎಂಬುದನ್ನು ಊಹಿಸುವುದು ಕಷ್ಟ. ಆದರೆ ಈ ಬಾಲನಟ ಅದನ್ನು ಸಾಧಿಸಿದ್ದಾರೆ. ತಮಿಳುನಾಡಿನ ಈ ಸ್ಟಾರ್ ಕಿಡ್ ಹಲವು ವರ್ಷಗಳಿಂದ ತಮಿಳು ಮತ್ತು ಹಿಂದಿ ಚಿತ್ರರಂಗದ ಹಿಟ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಆಕೆ ಭಾರತದ ಅತ್ಯಂತ ಶ್ರೀಮಂತ ಬಾಲನಟಿಯೆಂದು ಗುರುತಿಸಿಕೊಂಡಿದ್ದಾರೆ. 2023ರ ವೇಳೆಗೆ 10 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ಬಾಲನಟ ಎಂಬ ದಾಖಲೆಯನ್ನು ಸಾರಾ ಅರ್ಜುನ್ ಹೊಂದಿದ್ದಾರೆ. 2006ರಲ್ಲಿ ಜನಿಸಿದ ನಟಿ, 5ನೇ ವಯಸ್ಸಿನಲ್ಲಿ ಹಿಂದಿ ಚಲನಚಿತ್ರ 404 ಮತ್ತು ತಮಿಳನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ತಮಿಳಿನ ದೈವ ತಿರುಮಗಳ್ ಚಿತ್ರದಲ್ಲಿ ಖ್ಯಾತ ನಟ ವಿಕ್ರಮ್ ಅವರ ಮಗಳ ಪಾತ್ರವನ್ನು ನಿರ್ವಹಿಸಿದ್ದು ಎಲ್ಲರ ಮೆಚ್ಚುಗೆ ಪಾತ್ರವಾಯಿತು.

ಮಾತ್ರವಲ್ಲ ಚಿತ್ರ ಸೂಪರ್ ಹಿಟ್ ಸಹ ಆಯಿತು. ಆ ನಂತರ ಈ ಬಾಲ ನಟ ಸೂಪರ್‌ಸ್ಟಾರ್‌ಗಳೊಂದಿಗೆ ದೊಡ್ಡ ಬಜೆಟ್‌ ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರೆಸಿದರು, ಸಾರಾ ಅರ್ಜುನ್ ಹಿರಿಯ ನಟ ರಾಜ್ ಅರ್ಜುನ್ ಅವರ ಮಗಳು. ರಾಜ್ ಅರ್ಜುನ್, ಎರಡು ದಶಕಗಳಿಂದ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಹೆಸರು ಅಭಿನಯಿಸುತ್ತಿದ್ದಾರೆ. ಅನುರಾಗ್ ಕಶ್ಯಪ್ ಅವರ ಬ್ಲ್ಯಾಕ್ ಫ್ರೆಡೇ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ನಂತರ ಅವರು ರೌಡಿ ರಾಥೋರ್, ರಸ್, ಸೀಕ್ರೆಟ್ ಸೂಪರ್ ಸ್ಟಾರ್, ಡಿಯ‌ ಕಾಮೇಡ್ ಮತ್ತು ತಲೈವಿಯಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 2021ರಲ್ಲಿ, ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಯುವ ನಂದಿನಿ (ಐಶ್ವರ್ಯ ರೈ ನಿರ್ವಹಿಸಿದ ಪಾತ್ರ) ಪಾತ್ರದಲ್ಲಿ ಸಾರಾ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿತು. ಅವರು ಭಾಗ 1ರಲ್ಲಿ ಅತಿಥಿ ಪಾತ್ರವನ್ನು ಹೊಂದಿದ್ದರು ಆದರೆ ಭಾಗ 2ರಲ್ಲಿ ದೊಡ್ಡದಾದ, ಹೆಚ್ಚು ಅರ್ಥಪೂರ್ಣ ಪಾತ್ರವನ್ನು ಹೊಂದಿದ್ದರು.

ಸಾರಾ ಅರ್ಜುನ್ ಅವರ ವೃತ್ತಿಜೀವನವು ಒಂದೂವರೆ ವರ್ಷದವಳಿದ್ದಾಗ ಪ್ರಾರಂಭವಾಯಿತು . ತನ್ನ ತಾಯಿಯೊಂದಿಗೆ ಮಾಲ್‌ಗೆ ಹೋದಾಗ ಪುಟ್ಟ ಸಾರಾಗೆ ಮೊದಲ ಜಾಹೀರಾತು ಆಫರ್ ಸಿಕ್ಕಿತು . ಇಲ್ಲಿಯವರೆಗೆ ಅವರು ಸುಮಾರು 100 ವಾಣಿಜ್ಯ ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದಾರೆ . ಸಾರಾ ತಮಿಳು ಚಲನಚಿತ್ರ ನಿರ್ದೇಶಕ ವಿಜಯ್ ಅವರ ಚಿತ್ರ ದೇವಿ ತಿರುಮಗಲ್ ನೊಂದಿಗೆ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು . ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆಯನ್ನು ಗಳಿಸಿದ್ದಲ್ಲದೆ, ಚಿತ್ರವು ವಿಮರ್ಶಕರಿಂದಲೂ ಹೆಚ್ಚು ಮೆಚ್ಚುಗೆ ಪಡೆದಿದೆ.

Leave a Reply

Your email address will not be published. Required fields are marked *