ಇದರಲ್ಲಿ ವಿಟಮಿನ್ ಸಿ ಅಂಶ ಅಧಿಕವಿದೆ. ಬೇಸಿಗೆಯಲ್ಲಿ ದಿನಾ ಒಂದು ತುಂಡು ಕಲ್ಲಂಗಡಿ ಹಣ್ಣು ತಿನ್ನುವವರಿಗೆ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ತ್ವಚೆ ರಕ್ಷಣೆಯನ್ನು ಮಾಡುತ್ತದೆ. ಮೈಮೇಲೆ ಗಾಯಗಳಾಗಿದ್ದರೆ ಅದು ಬೇಗನೆ ಒಣಗಲು ಕಲ್ಲಂಗಡಿ ಸಹಾಯ ಮಾಡುತ್ತದೆ. ಹಾಗೆ ಇನ್ನು ಯಾವ ಕಾಯಿಲೆ ಹೋಗಲಾಡಿಸುತ್ತೆ ಅನ್ನೋದು ಇಲ್ಲಿದೆ ನೋಡಿ.

ತೂಕ ಕಮ್ಮಿ ಮಾಡುವ ಶಕ್ತಿಯಿದೆ: ಇದರಲ್ಲಿ ನೀರಿನಂಶ ಅಧಿಕವಿರುವುದರಿಂದ ತೆಳ್ಳಗಾಗಲು ಡಯಟ್ ಮಾಡುವವರು ಒಂದು ಹೊತ್ತು ಕಲ್ಲಂಗಡಿ ಹಣ್ಣು ತಿನ್ನಿ. ಇದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ, ತೂಕವನ್ನು ಕಡಿಮೆ ಮಾಡುವಲ್ಲಿ ಕಲ್ಲಂಗಡಿ ಹಣ್ಣು ಸಹಾಯ ಮಾಡುತ್ತದೆ.

ರಕ್ತ ಸಂಚಾರಕ್ಕೆ ಸಹಾಯ: ಕಲ್ಲಂಗಡಿ ಹಣ್ಣು ತಿಂದರೆ ರಕ್ತ ಸಂಚಾರ ಸರಿಯಾಗಿ ನಡೆಯುವಂತೆ ಮಾಡಿ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಾಗೆಯೇ ಬೇಸಿಗೆಯಲ್ಲಿ ತಿನ್ನಲೇಬೇಕಾದ ಹಣ್ಣುಗಳಲ್ಲಿ ಕಲ್ಲಂಗಡಿ ಹಣ್ಣು ಕೂಡ ಒಂದಾಗಿದ್ದು, ಇದು ದೇಹವನ್ನು ತಂಪಾಗಿ ಇಡುತ್ತದೆ. ಅಲ್ಲದೆ ಇದನ್ನು ಪ್ರತಿದಿನ ತಿಂದರೆ ಮಾನಸಿಕ ಒತ್ತಡ ಕಡಿಮೆಯಾಗಿ ಖಿನ್ನತೆ ಮಾಯವಾಗುವುದು.

ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಟ: ಇತರೆ ಹಣ್ಣುಗಳಿಗಿಂತ ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪೆನೆ ಅಧಿಕವಿದೆ. ಲೈಕೋಪೆನೆ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಸಾಮಥ್ರ್ಯವನ್ನು ಹೊಂದಿದೆ. ಆದ್ದರಿಂದ ಪ್ರತಿ ನಿತ್ಯ ಕಲ್ಲಂಗಡಿ ತಿನ್ನುವುದರಿಂದ ಕ್ಯಾನ್ಸರ್ ನಿಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತದೆ.

ಕಿಡ್ನಿಗೆ ಒಳ್ಳೆದು: ಕಲ್ಲಂಗಡಿ ಹಣ್ಣನ್ನು ನಿತ್ಯವು ಸೇವಿಸುವುದರಿಂದ ದೇಹದ ಚೈತನ್ಯ ಹೆಚ್ಚಾಗುತ್ತೆ, ಹಾಗೆಯೇ ಸುಸ್ತು ಮಾಯವಾಗುತ್ತೆ. ಇದರಲ್ಲಿ ವಿಟಮಿನ್ ಬಿ6 ಇರುವುದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ಬೇಗನೆ ಉದ್ವೇಗಕ್ಕೆ ಒಳಗಾಗುವುದನ್ನು ತಡೆಯುತ್ತದೆ.

ಇದರಲ್ಲಿ ವಿಟಮಿನ್ ಸಿ ಅಂಶ ಅಧಿಕವಿದೆ. ಬೇಸಿಗೆಯಲ್ಲಿ ದಿನಾ ಒಂದು ತುಂಡು ಕಲ್ಲಂಗಡಿ ಹಣ್ಣು ತಿನ್ನುವವರಿಗೆ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ತ್ವಚೆ ರಕ್ಷಣೆಯನ್ನು ಮಾಡುತ್ತದೆ. ಮೈಮೇಲೆ ಗಾಯಗಳಾಗಿದ್ದರೆ ಅದು ಬೇಗನೆ ಒಣಗಲು ಕಲ್ಲಂಗಡಿ ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *