ಉತ್ಕರ್ಷಣ ನಿರೋಧಕವನ್ನು ಬಿಡುಗಡೆ ಮಾಡುತ್ತದೆ: ಉತ್ಕರ್ಷಣ ನಿರೋಧಕಗಳು ಫ್ರೀ ರ್ಯಾಡಿಕಲ್ಸ್​ಗಳಿಂದ ಜೀವಕೋಶಗಳು ಹಾಳಾಗುವುದನ್ನು ತಡೆಯುತ್ತದೆ. ಇದರಲ್ಲಿ ವಿಟಮಿನ್​ ಸಿ, ಮ್ಯಾಂಗನೀಸ್​ನಂತಹ ಫ್ಲಾವನೊಡ್​ ಆ್ಯಂಟಿ ಆಕ್ಸಿಡೆಂಟ್​ಗಳಿವೆ.

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಸೌತೆಕಾಯಿಯಲ್ಲಿ ಡೈಯೆಟರಿ ಫೈಬರ್​ ಅಂಶ ಸಮೃದ್ಧವಾಗಿರುವುದರಿಂದ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಸವತೆಕಾಯಿ ಸಿಪ್ಪೆಯಲ್ಲಿ ಕರಗದ ಫೈಬರ್​ ಅಂಶವಿದೆ. ಇದು ಆಹಾರ ಸುಲಭವಾಗಿ ಅನ್ನನಾಳದಲ್ಲಿ ಇಳಿದು ಹೋಗಲು ಸಹಾಯ ಮಾಡುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ: ರಕ್ತದೊತ್ತಡಕ್ಕೆ ಮುಖ್ಯ ಕಾರಣವೆಂದರೆ ಆಹಾರದಲ್ಲಿ ಹೆಚ್ಚಿಗೆ ಉಪ್ಪಿನಾಂಶ ಸೇರುವುದು. ಸವತೆಕಾಯಿಯಲ್ಲಿರುವ ಪೊಟ್ಯಾಶಿಯಮ್​ ಇಲೆಕ್ಟ್ರೊಲೈಟ್​ ತರಹ ಕೆಲಸ ಮಾಡಿ ಸೋಡಿಯಮ್​ ಪ್ರಮಾಣವನ್ನು ನಿಯಂತ್ರಿಸುತ್ತದೆ.

ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ: ತ್ವಚೆಯ ಆರೋಗ್ಯವನ್ನು ಒಳಗಿನಿಂದಲೂ ಹಾಗೆ ಹೊರಗಿನಿಂದ ಕಾಪಾಡಲು ಇದು ಸಹಕಾರಿಯಾಗಿದೆ. ಇದು ದೇಹದಲ್ಲಿನ ಟಾಕ್ಸಿನ್​ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್​ ಬಿ5 ಆರೋಗ್ಯಕಾರಿ ವರ್ಣವನ್ನು ನೀಡುತ್ತದೆ.

ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ: ಸೌತೆಕಾಯಿಯಲ್ಲಿ ವಿಟಮಿನ್​ ಕೆ ಅಂಶವಿದೆ, ಇದು ಪ್ರೋಟಿನ್​ ಉತ್ಪತ್ತಿಗೆ ಸಹಾಯ ಮಾಡಿ ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಜೊತೆಗೆ ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸುತ್ತದೆ.

ತೂಕ ಇಳಿಸಲು ಸಹಾಯ ಮಾಡುತ್ತದೆ: ಸೌತೆಕಾಯಿ ನೀರು ದೇಹದ ಚಯಾಪಚನ ಕ್ರಿಯೆಯನ್ನು ಹೆಚ್ಚಿಸಿ ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ. ಜೊತೆಗೆ ದೇಹಕ್ಕೆ ಎನರ್ಜಿಯನ್ನೂ ನೀಡುತ್ತದೆ. ಇದರಿಂದ ಪದೇ ಪದೇ ಜಂಕ್​ಫುಡ್ಸ್​ ತಿನ್ನುವ ಪ್ರಮೇಯ ಬರುವುದಿಲ್ಲ.

ಮೆದುಳಿನ ಆರೋಗ್ಯಕ್ಕೂ ಉತ್ತಮ: ಸೌತೆಕಾಯಿಯಲ್ಲಿರುವ ಫಿಸ್ಟೆನ್​ ಅಂಶ ಮೆದುಳಿನ ಕಾರ್ಯಕ್ಷಮತೆ ಹೆಚ್ಚಲು ಮತ್ತು ನೆನಪಿನ ಶಕ್ತಿ ಉತ್ತಮಗೊಳ್ಳಲು ಸಹಾಯಮಾಡುತ್ತದೆ. ಇದು ಮೆದುಳು ಆರೋಗ್ಯವಾಗಿರಲು ಹಾಗೆ ಯಂಗ್​ ಆಗಿರಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *