ನಮಸ್ತೆ ಪ್ರಿಯ ಓದುಗರೇ, ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಕಷ್ಟಗಳು ಬರುತ್ತವೆ. ಈ ಕಷ್ಟಗಳು ಎಲ್ಲಿಂದ, ಯಾವಾಗ, ಯಾರನ್ನು ಹುಡುಕಿಕೊಂಡು ಬರುತ್ತವೆ ಅಂತ ಹೇಳೋದು ಕಷ್ಟಸಾಧ್ಯ. ಕಷ್ಟಗಳು ಕೆಲವೊಮ್ಮೆ ಸಮಸ್ಯೆಗಳ ರೂಪದಲ್ಲಿ ಇನ್ನೂ ಕೆಲವೊಮ್ಮೆ ವ್ಯಕ್ತಿಗಳ ರೂಪದಲ್ಲಿ ನಮ್ಮನ್ನು ಕಾಡಿಬಿಡುತ್ತವೆ. ಸಮಸ್ಯೆಗಳು ಇವೆ ಎಂದಮೇಲೆ ಅದಕ್ಕೆ ಪರಿಹಾರ ಕೂಡ ಇದ್ದೆ ಇರುತ್ತದೆ ಅಲ್ವಾ. ಬನ್ನಿ ಇವತ್ತಿನ ಲೇಖನದಲ್ಲಿ ಸಕಲ ಕಷ್ಟಗಳನ್ನು ನೀಗುವ ಪುಣ್ಯ ಕ್ಷೇತ್ರದ ಬಗ್ಗೆ ಮಾಹಿತಿ ತಿಳಿದು ಪುನೀತರಾಗೋಣ. ನಾಗದೋಷ ನಿವಾರಕ ಕ್ಷೇತ್ರ ಎಂದೇ ಪ್ರಸಿದ್ಧವಾಗಿರುವ ಶ್ರೀ ಸೀಮಿ ನಾಗನಾಥ ದೇವಾಲಯವು ಸುಮಾರು ೮ ನೆಯ ಶತಮಾನದಲ್ಲಿ ನಿರ್ಮಾಣವಾದ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ದೇಗುಲವು ಗೋಪುರ, ಪ್ರಾಂಗಣ, ಪ್ರದಕ್ಷಿಣಾ ಪಥ ಹಾಗೂ ಗರ್ಭಗೃಹವನ್ನು ಒಳಗೊಂಡಿದೆ. ಆಲಯದ ಗರ್ಭಗೃಹದ ಒಳಗಡೆ ಕಪ್ಪುವರ್ಣ ಶಿಲೆಯಲ್ಲಿರುವ ನಾಗನಾಥನ ವಿಗ್ರಹ ಇದೆ. ಸರ್ವಲಂಕೃತ ಭೂಷಿಥನಾದ ಈ ಸ್ವಾಮಿಯನ್ನು ನೋಡ್ತಾ ಇದ್ರೆ ಮನಸ್ಸಿನ ಎಲ್ಲಾ ಕ್ಲೇಷಗಳು ದೂರವಾಗಿ ಮನದಲ್ಲಿ ಭಕ್ತಿಯ ಸಿಂಚನವಾಗುತ್ತೇ. ಇನ್ನೂ ಈ ಕ್ಷೇತ್ರಕ್ಕೆ ಬಂದು ಸ್ವಾಮಿಯ ಎದುರಿಗೆ ನಿಂತು ಭಕ್ತಿಯಿಂದ ಮನಸ್ಸಿನ ಕೋರಿಕೆಗಳನ್ನು ಬೇಡಿಕೊಂಡು ನಾಗನಾಥನಿಗೆ ಹರಕೆ ಹೊತ್ತುಕೊಳ್ಳುವದರಿಂದ ಮನದ ಅಭಿಲಾಷೆಗಳೆಲ್ಲ ನೆರವೇರುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಸಂತಾನ ಸಮಸ್ಯೆ ಇಂದ ಬಳಲುವವರು ಇಲ್ಲಿಗೆ ಬಂದು ಸ್ವಾಮಿಗೆ ತಮ್ಮ ಕೈಲಾದ ಸೇವೆಯನ್ನು ಮಾಡ್ತೀವಿ ಅಂತ ಹರಸಿಕೊಂಡರೆ ಅವರಿಗೆ ಸಂತಾನ ಭಾಗ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ.

ಅಲ್ಲದೆ ಈ ದೇಗುಲಕ್ಕೆ ಬಂದು ಭಕ್ತಿಯಿಂದ ಸ್ವಾಮಿ ಪೂಜೆ ಮಾಡಿದ್ರೆ ಸಕಲ ನಾಗ ದೋಷಗಳು, ರಾಹು ಕೇತು, ಕುಜ ದೋಷಗಳು ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತೆ  ಹಲವಾರು ಮಂದಿ ನಾಗದೋಷ ಪರಿಹಾರಕ್ಕೆ ನಾಗ ಪ್ರತಿಷ್ಠೆಯನ್ನ ಕೂಡ ಮಾಡಿಸುತ್ತಾರೆ. ಹೆಚ್ಚಿನ ಜನರು ಸಮಸ್ಯೆಗಳ ನಿವಾರಣೆಗೆ ತೆಂಗಿನ ಕಾಯಿಯನ್ನು ಕಟ್ಟುತ್ತಿವಿ ಅಂತ ಹಕಕೆಯನ್ನು ಹೊತ್ತುಕೊಳ್ಳುತ್ತಾರೆ. ಒಂದು ವೇಳೆ ಹರಕೆಯನ್ನು ಹೊತ್ತುಕೊಂಡವರು ಹರಕೆಯನ್ನು ತೀರಿಸದೆ ಹೋದ್ರೆ ಸೀಮಿ ನಾಗಣ್ಣ ಅಪಾಯದ ಮುನ್ಸೂಚನೆ ನೀಡ್ತಾರೆ. ಅಥವಾ ಶಿಕ್ಷೆಯನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ. ಹೀಗಾಗಿ ಈ ದೇಗುಲಕ್ಕೆ ಬರುವವರು ಅತ್ಯಂತ ನಿಷ್ಠೆ, ಹಾಗೂ ಭಯ ಭಕ್ತಿ ಇಂದ ಸ್ವಾಮಿಗೆ ನಡೆದುಕೊಳ್ಳುತ್ತಾರೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ, ಬಹಳ ಹಿಂದೆ ಮಹಿಳೆ ಒಬ್ಬಳು ಮಗು ಹುಟ್ಟಿದರೆ ನಿನ್ನ ಹೆಡೆ ಹಿಡಿದು ನನ್ನ ಎದೆ ಹಾಲು ಉಣಿಸುವೆ ಎಂದು ನಾಗನಾಥನಿಗೇ ಹರಕೆಯನ್ನು ಹೊತ್ತುಕೊಂಡು ಆ ಹರಕೆಯನ್ನು ತೀರಿಸದ ಪರಿಣಾಮ ಅವಳ ಮಗುವಿನ ಪ್ರಾಣ ಹೋಯ್ತು. ಹೀಗೆ ಪ್ರಾಣ ಹೋದ ಮಗುವಿಗೆ ಇಲ್ಲಿ ಸಮಾಧಿಯನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಈ ಕ್ಷೇತ್ರಕ್ಕೆ ಬಂದವರು ಮಗುವಿನ ಸಮಾಧಿಯನ್ನು ಕೂಡ ದರ್ಶನ ಮಾಡ್ಕೊಂಡು ಹೋಗುವ ವಾಡಿಕೆ ಈ ಕ್ಷೇತ್ರದಲ್ಲಿ ಕಂಡು ಬರುತ್ತದೆ.

ಇನ್ನೂ ಹೇಗೆ ಐಯ್ಯಲ ಸ್ವಾಮಿಯ ಭಕ್ತರು ಮಾಲೆ ಹಾಕಿ ವ್ರತ ಆಚರಣೆ ಮಾಡುತ್ತಾರೋ ಅದೇ ರೀತಿ ಈ ಕ್ಷೇತ್ರದಲ್ಲಿ ಶ್ರಾವಣ ಮಾಸದಲ್ಲಿ ನಾಗ ಮಾಲೆಯನ್ನು ಧರಿಸುತ್ತಾರೆ. ಈ ರೀತಿ ನಾಗ ಮಾಲೆಯನ್ನು ಹಾಕುವವರು ೪೧ ದಿನಗಳ ಕಾಲ ಮಾಲೆಯನ್ನು ಧರಿಸಿ ವ್ರತ ಆಚರಣೆ ಮಾಡುವುದರ ಮೂಲಕ ನಾಗನಾಥ ನೀಗೆ ನಮ್ಮ ಕಷ್ಟಗಳನ್ನು ಪರಿಹರಿಸು ಎಂದು ಬೇಡಿಕೊಳ್ಳುತ್ತಾರೆ. ನಾಗರ ಪಂಚಮಿಯ ದಿನ ಜನ ಜಾತ್ರೆಯ ಥರ ತುಂಬಿರುವ ಈ ಕ್ಷೇತ್ರದಲ್ಲಿ ಆ ದಿನ ಈ ದೇವನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ವರ್ಷದ ಎಲ್ಲಾ ದಿನಗಳಲ್ಲಿಯೂ ಕ್ಷೀರಾಭಿಷೇಕ ಮಾಡುವ ಈ ದೇಗುಲದಲ್ಲಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ನಾಗನಾಥನೀಗೇ ವಿವಿಧ ಪೂಜೆಗಳನ್ನು ಮಾಡಲಾಗುತ್ತದೆ. ಪ್ರತಿ ವರ್ಷವೂ ದೀಪಾವಳಿಯ ದಿನದಲ್ಲಿ ನಾಗನಾಥನ ಜಾತ್ರಾ ಮಹೋತ್ಸವವನ್ನಾ ನಡೆಸಲಾಗುತ್ತದೆ. ನಿತ್ಯ ಪೂಜೆಗೊಳ್ಳುವ ಈ ದೇವನನ್ನು ಬೆಳಿಗ್ಗೆ 6 ಗಂಟೆ ಇಂದ ರಾತ್ರಿ 9 ಗಂಟೆ ವರೆಗೂ ದರ್ಶನ ಮಾಡಬಹುದು. ಭಕ್ತಾದಿಗಳು ತಮ್ಮ ಇಷ್ಟಾನುಸಾರ ಪೂಜೆಯನ್ನು ಮಾಡಿಸಬಹುದಾಗಿದೇ. ಸೀಮಿ ನಾಗನಾಥ ನೆಲೆಸಿರುವ ಈ ಕ್ಷೇತ್ರ ವೂ ಬೀದರ್ ಜಿಲ್ಲೆಯ ಹುಮ್ನಬಾದ್ ತಾಲ್ಲೂಕಿನ ಹಳ್ಳಿಖೇಡ ಎಂಬ ಗ್ರಾಮದಲ್ಲಿದೆ. ಈ ದೇಗುಲವು ಬೀದರ್ ನಿಂದ 34 ಕಿಮೀ, ಹುಮ್ನಬಾದ್ ಇಂದ 24 ಕಿಮೀ, ದೂರದಲ್ಲಿದೆ. ಬೀದರ್ ಜಿಲ್ಲೆಗೆ ರಾಜ್ಯದ ನಾನಾ ಭಾಗಗಳಿಂದ ಕರ್ನಾಟಕ ಬಸ್ ಸಾರಿಗೆ ವ್ಯವಸ್ಥೆ ಇದ್ದು, ಬೀದರ್ ಹಾಗೂ ಹುಮ್ನಬಾದ್ ಉತ್ತಮವಾದ ರೈಲ್ವೇ ಸಂಪರ್ಕವನ್ನು ಹೊಂದಿದ್ದು, ಹುಮ್ನಬಾದ್ ಇಂದ ಸರ್ಕಾರಿ ಬಸ್ ಮೂಲಕ ಸುಲಭವಾಗಿ ಈ ದೇಗುಲಕ್ಕೆ ತಲುಪಬುದಾಗಿದೆ. ಸಾಧ್ಯವಾದರೆ ಜೀವಮಾನದಲ್ಲಿ ನೀವೂ ಬನ್ನಿ ಒಮ್ಮೆ ಈ ಕ್ಷೇತ್ರಕ್ಕೂ ಹೋಗಿ ಸೀಮಿ ನಾಗನಾಥನ ಆಶೀರ್ವಾದ ಪಡೆದು ಧನ್ಯರಾಗಿ. ಶುಭದಿನ.

Leave a Reply

Your email address will not be published. Required fields are marked *