ಕೂದಲು ಎಲ್ಲಾ ಸಮಯದಲ್ಲೂ ಹೆಚ್ಚು ಕಾಂತಿಯುತವಾಗಿ ಹಾಗೂ ಸದೃಢವಾಗಿ ಇರಬೇಕೆಂದು ಅನೇಕರು ವಿವಿಧ ಬಗೆಯ ದುಬಾರಿ ಬೆಲೆಯ ಕೂದಲ ಆರೈಕೆ ಮಾಡಿಕೊಳ್ಳುತ್ತಾರೆ. ಅದೇ ನೈಸರ್ಗಿಕ ಆರೈಕೆಯಲ್ಲಿ ಒಂದಾದ ಬಾಳೆ ಹಣ್ಣಿನ ಆರೈಕೆಯು ಕೂದಲನ್ನು ಸದಾ ಆರೋಗ್ಯವಾಗಿರುವಂತೆ ಮಾಡುತ್ತದೆ.

ಒಂದು ಬಾಳೆ ಹಣ್ಣನ್ನು ಕಿವುಚಿ ಅದಕ್ಕೆ 1 ಟೇಬಲ್‌ ಚಮಚ ನಿಂಬೆ ರಸ ಸೇರಿಸಿ, ಮಿಶ್ರಗೊಳಿಸಿ. ಮಿಶ್ರಣವನ್ನು ನೆತ್ತಿ ಹಾಗೂ ಕೂದಲಿನ ಇತರ ಭಾಗಗಳಲ್ಲಿ ಹಚ್ಚಿ, ಒಂದು ಗಂಟೆ ಒಣಗಲು ಬಿಡಿ. ಶುಷ್ಕ ನೀರು ಹಾಗೂ ಶ್ಯಾಂಪುವಿನ ಸಹಾಯದಿಂದ ಕೂದಲನ್ನು ಸ್ವಚ್ಛಗೊಳಿಸಿ. ಹೀಗೆ ವಾರಕ್ಕೊಮ್ಮೆ ಮಾಡುವುದರಿಂದ ಕೇಶವು ಅಧಿಕ ಹೊಳಪು ಹಾಗೂ ಗಟ್ಟಿಯಾಗಿರುವುದು.

ಬಾಳೆ ಹಣ್ಣನ್ನು ಕಿವುಚಿ ಅದಕ್ಕೆ ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ, ಮಿಶ್ರಗೊಳಿಸಿ. ಮಿಶ್ರಣವನ್ನು ನೆತ್ತಿ ಹಾಗೂ ತಲೆಯ ಇತರೆಡೆ ಹಚ್ಚಿ. 40-45 ನಿಮಿಷ ಬಿಡಿ. ಬೆಚ್ಚಗಿನ ನೀರು ಮತ್ತು ಶ್ಯಾಂಪುವಿನ ಸಹಾಯದಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸಿದರೆ ಕೂದಲು ಹೆಚ್ಚು ಆರೋಗ್ಯವಾಗಿರುವುದು.

ಕಿವುಚಿದ ಬಾಳೆಹಣ್ಣಿಗೆ 1 ಟೇಬಲ್‌ ಚಮಚ ಆಲಿವ್‌ ಎಣ್ಣೆಯನ್ನು ಸೇರಿಸಿ. ಮಿಶ್ರಣವನ್ನು ನೆತ್ತಿ ಹಾಗೂ ತಲೆಗೆ ಹಚ್ಚಿ, ಮೃದುವಾಗಿ ಮಸಾಜ… ಮಾಡಿ. 30-35 ನಿಮಿಷ ಬಿಟ್ಟು, ನಂತರ ಶುಷ್ಕ ನೀರು ಹಾಗೂ ಶಾಂಪುವಿನ ಸಹಾಯದಿಂದ ತೊಳೆಯಿರಿ. ತಿಂಗಳಿಗೆ ಎರಡು ಬಾರಿ ಹೀಗೆ ಮಾಡುವುದರಿಂದ ಕೂದಲ ಆರೋಗ್ಯ ಹೆಚ್ಚುವುದು.

ಒಂದು ಬೌಲ್‌ನಲ್ಲಿ ಕಿವುಚಿದ ಬಾಳೆ ಹಣ್ಣು ಮತ್ತು 2 ಟೀ ಚಮಚ ಅಲೋವೆರಾ ರಸವನ್ನು ಮಿಶ್ರಗೊಳಿಸಿ. ನೆತ್ತಿ ಹಾಗೂ ಕೂದಲಿಗೆ ಹಚ್ಚಿ, ಒಂದು ಗಂಟೆ ಹೀರಿಕೊಳ್ಳಲು ಬಿಡಿ. ನಂತರ ಶುಷ್ಕ ನೀರು ಮತ್ತು ಶ್ಯಾಂಪುವಿನ ಸಹಾಯದಿಂದ ಸ್ವಚ್ಛಗೊಳಿಸಿ. ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸುವುದರಿಂದ ಕೂದಲು ದಪ್ಪ ಹಾಗೂ ಉದ್ದವಾಗಿ ಬೆಳೆಯುತ್ತದೆ.

ಒಂದು ಬಟ್ಟಲಿನಲ್ಲಿ ಕಿವುಚಿದ ಬಾಳೆ ಹಣ್ಣು ಮತ್ತು 3-4 ಟೇಬಲ್‌ ಚಮಚ ನೆಲ್ಲಿಕಾಯಿ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ನೆತ್ತಿ ಹಾಗೂ ಕೂದಲ ಬುಡದಲ್ಲಿ ಹಚ್ಚಿ. ಒಂದು ಗಂಟೆ ಒಣಗಲು ಬಿಡಿ. ಶ್ಯಾಂಪು ಮತ್ತು ಶುಷ್ಕ ನೀರಿನಿಂದ ಸ್ವಚ್ಛಗೊಳಿಸಿ. ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಹೀಗೆ ಮಾಡುವುದರಿಂದ ಕೂದಲು ಕಪ್ಪಾಗಿ ಹಾಗೂ ಆರೋಗ್ಯವಾಗಿ ಬೆಳೆಯುವುದು.

Leave a Reply

Your email address will not be published. Required fields are marked *