ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮ ಕೂದಲು ಬಿಳಿ ಆಗಬಾರದು ಮತ್ತು ಉದರಬಾರದು ಹಾಗೆ ತುಂಬ ಹೊಳಪಾಗಿರಬೇಕು ಅಂತ ಪ್ರತಿಯೊಬ್ಬರಿಗೂ ಅಸೆ ಇರುತ್ತದೆ ಆದರೆ ಇತ್ತೀಚಿನ ದಿನಗಲ್ಲಿ ನಮ್ಮ ಜೀವನ ಶೈಲಿಯಲ್ಲಿ ಹಲವಾರು ರೀತಿಯಾದ ಆಹಾರ ಹಾಗು ಕೆಲವೊಂದು ಪದಾರ್ಥಗಳಿಂದ ಕೂದಲು ಉದುರುವುದು ಹಾಗೆ ಕೂದಲು ಬಿಳಿ ಆಗುವುದು ಹೀಗೆ ಅನೇಕ ಸಮಸ್ಯೆಗಳು ಕಂಡುಬರುತ್ತವೆ. ಇದರಿಂದ ಸಾಕಷ್ಟು ಜನ ತುಂಬ ಚಿಂತೆ ಮಾಡುತ್ತಾರೆ ಕೂದಲು ಉದುರುವುದನ್ನು ತಡೆಗಟ್ಟಲು ಮತ್ತು ಬಿಳಿ ಕೂದಲನ್ನು ಕಪ್ಪಾಗಿಸಲು ಹಾಗಾಗಿ ಇದರ ಚಿಂತೆ ಬೇಡ ಇದಕ್ಕೆಲ್ಲ ಮನೆಮದ್ದು ಬಾಳೆಹಣ್ಣು ಇದೆ ನೋಡಿ, ಇದನ್ನು ಹೇಗೆ ಬಳಸಬೇಕು ಮತ್ತು ಏನೇನು ಇದರ ಜೊತೆ ಮಿಶ್ರಣ ಮಾಡಬೇಕು ಅನ್ನೋದು ಇಲ್ಲಿದೆ ಗಮನಿಸಿ.

ಕೂದಲು ದಪ್ಪವಾಗಿ ಮತ್ತು ಹೆಚ್ಚು ಕಪ್ಪಗಿರಲು ಈ ವಿಧಾನ ಅನುಸರಿಸಿ ಒಂದು ಚಮಚ ನೆಲ್ಲಿಕಾಯಿ ಎಣ್ಣೆ ಹಾಗು ಒಂದು ಬಾಳೆಹಣ್ಣು ಎರಡನ್ನು ಚನ್ನಾಗಿ ನುಣ್ಣಗೆ ಮಿಶ್ರಣ ಮಾಡಿಕೊಳ್ಳಿ ನಂತರ ಆ ಮಿಶ್ರಣವನ್ನು ತಲೆ ಎಲ್ಲ ಭಾಗಕ್ಕೆ ಹಚ್ಚಿಕೊಂಡು ನಟ ಸುಮಾರು ಒಂದು ಗಂಟೆಯ ನಂತರ ಬಿಸಿನೀರು ಹಾಗು ಶ್ಯಾಂಪು ಸಹಾಯದಿಂದ ನಿಮ್ಮ ತಲೆ ತೊಳೆದುಕೊಳ್ಳಿ ಹೀಗೆ ನೀವು ತಿಂಗಳಿಗೆ ಮೂರೂ ಅಥವಾ ನಾಲ್ಕು ಬಾರಿ ಮಾಡಿ ಕೂದಲು ಕಪ್ಪಾಗಿ ಮತ್ತು ಹೆಚ್ಚು ದಪ್ಪವಾಗಿರುತ್ತವೆ.

ಮೊದಲಿಗೆ ಒಂದು ಚಮಚ ನಿಂಬೆ ರಸ ಹಾಗು ಇಂದು ಬಟ್ಟಲಿನಲ್ಲಿ ಕಿವಚಿದ ಬಾಳೆಹಣ್ಣು ಎರಡನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ ನಂತರ ತಲೆ ತುಂಬ ಈ ಮಿಶ್ರಣವನ್ನು ಲೇಪಿಸಿಕೊಳ್ಳಿ ನಂತರ ಸುಮಾರು ಒಂದು ಘಂಟೆ ಹಾಗೆ ಒಣಗಲು ಬಿಡಿ ನಂತರ ಶುದ್ಧ ಹಾಗು ಬಿಸಿ ನೀರನ್ನು ಬಳಸಿ ಸ್ನಾನ ಮಾಡಿ ಹೀಗೆ ನೀವು ವಾರಕ್ಕೊಮ್ಮೆ ಮಾಡಿದರೆ ನಿಮ್ಮ ಕೂದಲು ಹೊಳಪಾಗಿ ಮತ್ತು ಗಟ್ಟಿಯಾಗುರುತ್ತವೆ ಹಾಗೆ ಇನ್ನು ಇನ್ನು ಬಿಳಿ ಕೂದಲಿಗೆ ಮುಂದೆ ಹೇಳಲಾಗಿದೆ ಗಮನಿಸಿ.

ಇನ್ನು ಇದು ಒಂದು ವಿಧಾನ ಮೊಟ್ಟೆಯ ಬಿಳಿ ಭಾಗವನ್ನು ಮತ್ತು ಒಂದು ಬಾಳೆಹಣ್ಣು ಎರಡನ್ನು ಒಟ್ಟಿಗೆ ಸೇರಿಸಿ ಚನ್ನಾಗಿ ಮಿಶ್ರಣ ಮಾಡಿಕೊಂಡು ನೆತ್ತಿ ಹಾಗು ತಲೆಯ ಎಲ್ಲ ಭಾಗಕ್ಕೆ ಲೇಪಿಸಿಕೊಳ್ಳಿ ನಂತರ ಅಂದರೆ ಸುಮಾರು ಒಂದು ಗಂಟೆ ನಂತರ ನಿಮ್ಮ ತಲೆಯನ್ನು ಶ್ಯಾಂಪು ಹಾಗು ಬಿಸಿ ನೀರು ಬಳಸಿ ತೊಳೆದುಕೊಳ್ಳಿ ಇದನ್ನು ನೀವು ವಾರಕ್ಕೆ ಎರಡು ಸಲ ಮಾಡಿದರೆ ಸಾಕು ಕೂದಲು ಹೆಚ್ಚು ಆರೋಗ್ಯವಾಗಿರುತ್ತವೆ.

Leave a Reply

Your email address will not be published. Required fields are marked *