ಹೌದು ಹಳ್ಳಿಗಳಲ್ಲಿ ಹಾಗು ಹಲವು ಮನೆಯ ಮುಂದೆ ಸಿಗುವ ಬಿಳಿ ಎಕ್ಕೆ ಗಿಡ ಹಲವು ರೋಗಗಳಿಗೆ ಮನೆಮದ್ದಾಗಿದೆ ಹಾಗು ಬಿಳಿ ಎಕ್ಕೆ ಗಿಡದ ಹೂವು ಪೂಜೆಗೆ ಶ್ರೇಷ್ಠ ಎಂದು ಹೇಳಾಗುತ್ತದೆ ಹಾಗಾಗಿ ಹಲವು ಜನ ತಮ್ಮ ಮನೆಮುಂದೆ ಈ ಬಿಳಿ ಎಕ್ಕೆ ಗಿಡವನ್ನು ಹಾಕಿರುತ್ತಾರೆ ಇನ್ನು ಈ ಎಕ್ಕೆ ಗಿಡದಿಂದ ಬಿಳಿತೊನ್ನು ಹಾಗು ಕಿಲು ನೋವು ಹೇಗೆ ವಾಸಿಯಾಗುತ್ತದೆ ಅನ್ನೋದು ಇಲ್ಲಿದೆ ನೋಡಿ.

ವಾಯು ನೋವುಗಳಿಗೆ: ಎಕ್ಕದಎಲೆಯರಸ 20 ಗ್ರಾಂ, ಬೊಂತೆ ಕಳ್ಳಿ ರಸ 20ಗ್ರಾಂ, ಲಕ್ಕಿ ಎಲೆ ರಸ, 20 ಗ್ರಾಂ, ಉಮ್ಮತ್ತಿ ಎಲೆ ರಸ 20 ಗ್ರಾಂ, ಹಸುವಿನ ಹಾಲು 60ಮಿ, ಲಿ. ಎಳ್ಳಣ್ಣೆ 120 ಗ್ರಾಂ ಸೇರಿಸಿ ಕಾಯಿಸುವಾಗ, ರಾಸ್ಮಿ, ವಿಳಂಗ, ದೇವದಾರು, ಗಜ್ಜುಗದ ತಿರುಳು ಪುಡಿ ಎರಡೆರಡುಟೀ ಚಮಚ ಹಾಕಿ ಇಳಿಸುವಾಗ 20 ಗ್ರಾಂ ಆರತಿ ಕರ್ಪೂರ ಹಾಕುವುದು. ತಣ್ಣಗಾದ ಮೇಲೆ ಕೀಲು, ಕಾಲು ನೋವುಗಳಿಗೆ ಹಚ್ಚುವುದು.

ಬಿಳಿ ತೊನ್ನು ಹೋಗಲಾಡಿಸಲು ಗೋರೆಂಟಿ: 10ಗ್ರಾಂ ಗೋರಂಟಿ ಬೀಜಗಳನ್ನು ನಯವಾಗಿ ಅರೆದು ಚೂರ್ಣ ಮಾಡುವುದು. ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಸಕ್ಕರೆ ಪುಡಿ ಸೇರಿಸಿ ಸೇವಿಸುವುದು. ಹೀಗೆ ನಲವತ್ತು ದಿವಸ, ಒಂದು ಟೀ ಚಮಚ ಗೋರಂಟಿ ಬೀಜಗಳನ್ನು ನಿಂಬೆ ರಸದಲ್ಲಿ ಅರೆದು ಹೊರಗೆ ಲೇಪಿಸುವುದು, ಇದರ ಜೊತೆಗೆ ಸ್ವಲ್ಪ ಶ್ರೀಗಂಧವನ್ನು ನೀರಿನಲ್ಲಿ ತೇದು ನೀರಿನಲ್ಲಿ (ಒಂದು ಬಟ್ಟಲು) ಕದಡಿ ಸೇವಿಸುವುದು.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *