ನಮಸ್ತೆ ಪ್ರಿಯ ಓದುಗರೇ, ತರಕಾರಿ ಮತ್ತು ಹಣ್ಣುಗಳು ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅದರಲ್ಲಿ ಮುಖ್ಯವಾಗಿ ಹಣ್ಣುಗಳಲ್ಲಿ ಹೇಳುವುದಾದರೆ ಪ್ರತಿಯೊಂದು ಹಣ್ಣು ತನ್ನದೇ ಆದ ವಿಶಿಷ್ಟವಾದ ಮಹತ್ವವನ್ನು ಹೊಂದಿರುತ್ತದೆ. ಹಣ್ಣುಗಳಲ್ಲಿ ಹಲಸಿನ ಹಣ್ಣು ಕೂಡ ಬಹಳಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ವಸಂತ ಕಾಲದಲ್ಲಿ ಸಿಗುವಂತಹ ಗ್ರಾಮೀಣ ಪ್ರದೇಶದಲ್ಲಿ ಪ್ರಸಿದ್ದಿಯನ್ನು ಪಡೆದಿರುವ ಜನಪ್ರಿಯ ಹಣ್ಣು ಇದಾಗಿದೆ. ಗ್ರಾಮೀಣ ಭಾಗದಲ್ಲಿ ಇದನ್ನು ತುಂಬಾನೇ ಯಥೇಚ್ಛವಾಗಿ ಬಳಕೆ ಮಾಡುತ್ತಾರೆ. ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಲು ಹಲಸಿನ ಹಣ್ಣು ಬಳಕೆ ಮಾಡುತ್ತಾರೆ.

ಬೇಸಿಗೆ ಕಾಲದಲ್ಲಿ ಈ ಹಣ್ಣು ಅಧಿಕವಾಗಿ ಲಭ್ಯವಿರುವುದರಿಂದ ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಹಲಸಿನ ಹಣ್ಣಿನಲ್ಲಿ ಅಧಿಕವಾದ ವಿಟಮಿನ್ಸ್, ಮಿನರಲ್ಸ್ ಕ್ಯಾಲ್ಸಿಯಂ ಮ್ಯಾಗ್ನಿಷಿಯಂ ಪ್ರೊಟೀನ್ ಪೊಟ್ಯಾಶಿಯಂ ಸಮೃದ್ದವಾಗಿ ಅಡಗಿದೆ. ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ಅದ್ಭುತವಾದ ಮಾಹಿತಿಯನ್ನು ಹಲಸಿನ ಹಣ್ಣಿನ ಬಗ್ಗೆ ತಿಳಿಸಿಕೊಡುತ್ತೇವೆ. ಸ್ನೇಹಿತರೇ ನೀವು ಕೇಳಿರಬಹುದು ಸ್ಟ್ರೋಕ್ ಎಂಬ ರೋಗವನ್ನು ಇದನ್ನು ನಾವು ಕನ್ನಡದಲ್ಲಿ ಲಕ್ವಾ ಅಂತ ಕರೆಯುತ್ತೇವೆ.

ಇದು ದೇಹದ ಎಲ್ಲಾ ಅಂಗಗಳನ್ನು ಬಿಗಿಯಾಗಿ ಚಾಲನೆ ಮಾಡದಂತೆ ಮಾಡುತ್ತದೆ. ಆದರೆ ನಿಮಗೆ ಗೊತ್ತೇ ಫೇಶಿಯಲ್ ಸ್ಟ್ರೋಕ್ ಎಂಬ ಕಾಯಿಲೆ ಕೂಡ ಬಂದಿದೆ. ಈಗಿನ ಆಧುನಿಕ ಕಾಲದಲ್ಲಿ ಜನರು ಹಲವಾರು ಬಗೆಯ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಫೇಸ್ ಸ್ಟ್ರೋಕ್ ಎಂಬ ಕಾಯಿಲೆ ಕೂಡ ಬಂದು ಬಿಟ್ಟಿದೆ. ನಿಮಗೆ ಗೊತ್ತೇ ಹಲಸಿನ ಹಣ್ಣು ಮಾತ್ರ ಆರೋಗ್ಯಕ್ಕೆ ಒಳ್ಳೆಯದಲ್ಲದೇ ಹಲಸಿನ ಎಲೆಗಳು ಕೂಡ ಹಲವಾರು ಬಗೆಯ ಕಾಯಿಲೆಗಳನ್ನು ದೂರ ಮಾಡುತ್ತದೆ. ಹಾಗಾದ್ರೆ ಹಲಸಿನ ಹಣ್ಣಿನ ಎಲೆಯು ಯಾವ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ ಅಂತ ಇಂದಿನ ಲೇಖನದಲ್ಲಿ ಪರಿಚಯಿಸಿ ಕೊಡುತ್ತೇವೆ ಬನ್ನಿ.

ಮೊದಲಿಗೆ ನರಗಳಲ್ಲಿ ಸಂಧಿಗಳಲ್ಲಿ ನೋವು ಇದ್ದರೆ ಅಥವಾ ಫೇಸ್ ಪ್ಯಾರಲೈಸಿಸ ಆಗಿದ್ದರೆ ಹಲಸಿನ ಹಣ್ಣಿನ ಎಲೆಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ ಅದರಲ್ಲಿ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆ ಹಾಕಿ ಮಿಕ್ಸ್ ಮಾಡಿ ಅದನ್ನು ದೋಸೆ ತವೆಯ ಮೇಲಿಟ್ಟು ಅದರ ಶಾಖವನ್ನು ನೋವು ಇರುವ ಜಾಗದಲ್ಲಿ ಮತ್ತು ಮುಖದಲ್ಲಿ ಸ್ಟ್ರೋಕ್ ಆಗಿದ್ದರೆ ಬಾಯಿಯ ಹತ್ತಿರ ಹಲಸಿನ ಹಣ್ಣಿನ ಎಲೆಯ ಈ ಪೇಸ್ಟ್ ಮಾಡಿ ಅದರ ಶಾಖವನ್ನು ಮುಖಕ್ಕೆ ಹಚ್ಚುವುದರಿಂದ ಕ್ರಮೇಣ ನೋವು ನಿವಾರಣೆ ಆಗುತ್ತದೆ. ಮುಖದಲ್ಲಿ ಸ್ಟ್ರೋಕ್ ಆಗಿದ್ದರೆ ತಕ್ಕ ಮಟ್ಟಿಗೆ ಕಡಿಮೆ ಆಗುವ ಸಾಧ್ಯತೆ ಇರುತ್ತದೆ.

ಹಲಸಿನ ಹಣ್ಣಿನ ಎಲೆಗಳಲ್ಲಿ ಲಿಗ್ನಾನ್ಸ್, ಐಸೊಫ್ಲಾವೊನ್ ಮತ್ತು ಸಪೋನಿನ್ ಗಳಂತಹ ಹಲವಾರು ರಿತಿಯ ಪೈಥೋ ಕೆಮಿಕಲ್ ಗಳು ಇವೆ. ಇದೆಲ್ಲವೂ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಎಂದು ಹೇಳಲಾಗುತ್ತದೆ. ಹಲಸಿನ ಎಲೆಗಳಲ್ಲಿ ಇರುವ ಲ್ಯಾಕ್ಟಿನ ಎಂಬ ಅಂಶವು ಗರ್ಭಕೋಶದ ಕ್ಯಾನ್ಸರ್ ಅನ್ನು ಕೂಡ ತಡೆಯುವಲ್ಲಿ ಸಹಕಾರಿಯಾಗಿದೆ. ಮತ್ತು ನಾರಿನ ಅಂಶವು ಅಧಿಕವಾಗಿ ಇರುವುದರಿಂದ ಅನ್ನನಾಳ, ಹೊಟ್ಟೆ ಕ್ಯಾನ್ಸರ್ ಆಗುವುದನ್ನು ತಡೆಯುತ್ತದೆ.

ಹಲಸಿನ ಹಣ್ಣಿನ ಎಲೆಗಳಲ್ಲಿ ಅಧಿಕವಾದ ಪೊಟ್ಯಾಶಿಯಂ ಇರುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ಮತ್ತು ಇನ್ನಿತರ ಹೃದಯ ಸಂಬಂಧಿ ರೋಗಗಳನ್ನು ಗುಣಪಡಿಸುವಲ್ಲಿ ಪ್ರಮುಖವಾದ ಪಾತ್ರವನ್ನು ಈ ಹಲಸಿನ ಎಲೆಗಳು ವಹಿಸುತ್ತವೆ. ಹಲಸಿನ ಹಣ್ಣಿನ ಎಲೆಗಳ ಪೇಸ್ಟ್ ಅನ್ನು ತಲೆಗೆ ಹಚ್ಚುವುದರಿಂದ ನಿದ್ರೆಯ ಸಮಸ್ಯೆ ನಿವಾರಣೆ ಮಾಡಬಹುದು.

ಇದರಲ್ಲಿ ಮ್ಯಾಗ್ನಿಶಿಯಂ ಮತ್ತು ಕಬ್ಬಿನಾಂಶವು ಅಧಿಕವಾಗಿದೆ ಮತ್ತು ಇದು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿ. ಮ್ಯಾಗ್ನಿಷಿಯಂ ನಿದ್ರಾಹೀನತೆಗೆ ಕಾರಣವಾಗುವಂತಹ ರಕ್ತಹೀನತೆಯನ್ನು ಕೂಡ ಕಡಿಮೆ ಮಾಡುವುದು. ಇಷ್ಟೊಂದು ಹಲಸಿನ ಹಣ್ಣಿನ ಪ್ರಯೋಜನಗಳು ಅಡಗಿವೆ. ಇದರ ಬಳಕೆ ಖಂಡಿತವಾಗಿ ಮಾಡಿ ಮತ್ತು ಇದರ ಲಾಭಗಳನ್ನು ಪಡೆದುಕೊಳ್ಳಿ.

Leave a Reply

Your email address will not be published. Required fields are marked *