ಪೇರಳೆ ಹಣ್ಣು ಅಥವಾ ಸೀಬೆ ಹಣ್ಣು ಸಾಮಾನ್ಯವಾಗಿ ಎಲ್ಲಿರಿಗೂ ಚಿರಪರಿಚಿತ. ವರ್ಷದ ಹೆಚ್ಚಿನ ದಿನಗಳಲ್ಲಿ ಲಭ್ಯವಾಗುವ ಈ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅದೇ ರೀತಿ ಪೇರಳೆ ಗಿಡದ ಎಲೆಗಳೂ ಕೂಡ ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗೆ ನೋಡಿದರೆ ಪೇರಲೇ ಹಣ್ಣಿಗಿಂತ ಅದರ ಸೊಪ್ಪು ಅಥವಾ ಎಳೆಯ ಚಿಗುರಿನಲ್ಲಿಯೇ ಅನೇಕ ಆರೋಗ್ಯ ವೃದ್ಧಿಸುವ ಗುಣಗಳಿದೆ.

ಆಯರ್ವೇದದಲ್ಲಿಯೂ ಪೇರಳೆ ಎಲೆಗಳನ್ನು ಔಷಧವಾಗಿ ಬಳಸುತ್ತಾರೆ. ಉರಿಯೂತ, ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಇದರಲ್ಲಿ ಫ್ಲೇವನಾಯ್ಡ್‌, ಪಾಲಿಫಿನಾಲ್‌ ಸೇರಿದಂತೆ ಅನೇಕ ಪೋಷಕಾಂಶಗಳು ಅಡಕವಾಗಿದೆ. ಹಾಗಾದರೆ ಈ ಪೇರಳೆ ಎಲೆಗಳಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳಿದೆ ಎನ್ನುವ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಪೇರಳೆ ಎಲೆಗಳನ್ನು ಕುದಿಸಿ ಅದರ ನೀರನಲ್ಲಿ ದಿನಕ್ಕೆ ನಾಲ್ಕೈದು ಬಾರಿ ಬಾಯಿ ಮುಕ್ಕಳಿಸಿ. ಇದರಿಂದ ಒಸಡಿನಲ್ಲಿ ರಕ್ತಸ್ರಾವ, ಹಲ್ಲುಗಳ ನೋವು ಕಡಿಮೆಯಾಗುತ್ತದೆ. ಬಾಯಲ್ಲಿನ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ. ಆಯುರ್ವೇದದಲ್ಲಿಯೂ ಹಲ್ಲು, ಒಸಡಿನ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ. ಹೀಗೂ ಮಾಡಬಹುದು, ಪೇರಳೆ ಎಲೆಗಳನ್ನು ಜಜ್ಜಿ ಹಲ್ಲುಜ್ಜುವ ಬ್ರಷ್‌ಗೆ ಹಾಕಿ ಒಸಡನ್ನು ಉಜ್ಜಿಕೊಂಡರೆ ಹುಳುಕು ಹಲ್ಲುಗಳ ನೋವನ್ನು ಹೋಗಲಾಡಿಸಬಹುದು.

ಪೇರಳೆ ಎಲೆ ಜೀರ್ಣಶಕ್ತಿ ಉತ್ತಮಗೊಳಿಸಲು ಸಹಾಯಕವಾಗುತ್ತದೆ. ಕೆಲವೊಮ್ಮೆ ತಿಂದ ಆಹಾರ ಕೆಲವೊಮ್ಮೆ ಜೀರ್ಣವಾಗದೆ ಹೊಟ್ಟೆಯಲ್ಲಿ ಉಳಿದುಬಿಡುತ್ತದೆ. ಇದರಿಂದ ವಾಂತಿ, ತಲೆನೋವು, ತಲೆಸುತ್ತುವುದು ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಸರಿಪಡಿಸಲು ಪೇರಳೆ ಎಲೆಗಳು ನೆರವಾಗುತ್ತದೆ. ಪೇರಳೆ ಎಲೆಗಳನ್ನು ತಂದು ಜಜ್ಜಿ ನೀರಿನಲ್ಲಿ ಹಾಕಿ ಕುದಿಸಿ. 3 ಲೋಟ ನೀರಿಗೆ ನಾಲ್ಕೈದು ಎಲೆಗಳನ್ನು ಹಾಕಿ ಅರ್ಧವಾಗುವವರೆಗೆ ಕುದಿಸಿ. ಅದನ್ನು ದಿನಕ್ಕೆ ಮೂರು ಬಾರಿ ಕುಡಿಯಿರಿ. ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

Leave a Reply

Your email address will not be published. Required fields are marked *