ನಮಸ್ತೆ ಪ್ರಿಯ ಓದುಗರೇ, ನಮ್ಮ ಕರುನಾಡಿನ ಕುಡಿಯಾದ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಇದೊಂದು ನಿಜಕ್ಕೂ ಯಾರು ಅಪೇಕ್ಷಿಸಲಾಗದ, ಊಹಿಸಲಾಗದ ಮತ್ತು ನುಂಗಲು ಸಾಧ್ಯವಿಲ್ಲದ ತುತ್ತಾಗಿದೆ ಹೋಗಿದೆ ಇಡೀ ಕರ್ನಾಟಕದ ಜನರಿಗೆ. ಹಾಗಾದರೆ ಬನ್ನಿ ಸ್ನೇಹಿತರೇ ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ಮುಖ್ಯವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ನಗುವಿನ ಶ್ರೀಮಂತನಾದ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣರಾಗಿದ್ದು, ಇಷ್ಟೊಂದು ಆರೋಗ್ಯದ ಬಗ್ಗೆ ಕಾಳಜಿ ಮಾಡುವ ಈ ನಗುವಿನ ಅರಸನ ಸಾವಿಗೆ ಕಾರಣವಾದರೂ ಏನು?ಇದರ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಅಂತ ವಿವರವಾಗಿ ತಿಳಿಸಿ ಕೊಡುತ್ತೇವೆ ಬನ್ನಿ. ಪುನೀತ್ ರಾಜಕುಮಾರ್ ಅವರ ಮರಣವು ಒಂದು ಮ್ಯಾಸಿವ್ ಆಂಟಿರಿಯಲ್ ವಾಲ್ ಹೃದಯಾಘಾತದಿಂದ ಆಗಿದೆ. ಈ ಮ್ಯಾಸಿವ್ ಆಂಟಿರಿಯಲ್ ವಾಲ್ ಹೃದಯಾಘಾತ ಅಂದರೆ ನಮ್ಮ ಹೃದಯದಲ್ಲಿ ಮೂರು ಭಾಗಗಳಿವೆ. ಮೇಲ್ಭಾಗ ಮಧ್ಯಭಾಗ ಮತ್ತು ಕೆಳಭಾಗ ಅಂತ ವಿಂಗಡನೆ ಮಾಡಲಾಗಿದ್ದು. ಮೇಲ್ಭಾಗವು ಗರಿಷ್ಠ 60% ರಷ್ಟು ಸ್ನಾಯುಗಳನ್ನು ಒಳಗೊಂಡಿರುವ ಗೋಡೆಯಾಗಿದೆ. ಈ ಕವಾಟವು ಮೆದುಳಿಗೆ ಮತ್ತು ಹೃದಯಕ್ಕೆ ನೇರ ಸಂಭಂದವನ್ನು ಹೊಂದಿದ್ದು ಈ ಭಾಗಕ್ಕೆ ರಕ್ತವು ಸರಿಯಾಗಿ ಸಂಚಾರವಾಗದೆ ರಕ್ತವು ವ್ಯತ್ಯಯವಾದರೆ ಈ ರೀತಿಯ ಹೃದಯಾಘಾತ ಸಂಭವಿಸುತ್ತದೆ. ಈ ರೀತಿ ಹೃದಯಾಘಾತ ಸಂಭವಿಸಿದರೆ ವ್ಯಕ್ತಿಯು ಬದುಕುಳಿಯುವ ಆಸೆಯ ಕೈ ಬಿಟ್ಟು ಬಿಡಬಿಡಬೇಕಾಗುತ್ತದೆ. ಈ ರೀತಿ ಹೃದಯಾಘಾತ ಕಂಡರೆ ವ್ಯಕ್ತಿಯ ಪ್ರಾಣ ಪಕ್ಷಿಯು ನಿಂತ ಸ್ಥಳದಲ್ಲಿ ಹಾರಿ ಹೋಗುತ್ತದೆ. ಅಷ್ಟೊಂದು ಭಯಂಕರವಾದ ಹೃದಯಾಘಾತ ಇದಾಗಿದೆ ಅಂತ ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ.ಸಿ.ಏನ್.ಮಂಜುನಾಥ್ ಹೇಳುತ್ತಾರೆ.

ಇನ್ನೂ ಡಾ.ಅಂಜನಪ್ಪ ಅವರ ಅಭಿಪ್ರಾಯವನ್ನು ಇದರ ಬಗ್ಗೆ ನೋಡುವುದಾದರೆ, ಒಬ್ಬ ವ್ಯಕ್ತಿಯು ದೇಹದ ಯಾವುದೇ ಭಾಗವನ್ನು ಮಿತಿ ಮೀರಿ ದಣಿಸಿದರೆ ಅಥವಾ ಶ್ರಮವನ್ನು ನೀಡಿದರೆ ಈ ರೀತಿಯ ಹೃದಯಾಘಾತ ಆಗುವ ಸಾಧ್ಯತೆ ಇರುತ್ತದೆ. ಇದನ್ನು ಕಾರ್ಡಿಯಾ ಕರೆಸ್ಟ್ ಅಂತ ವೈಜ್ಞಾನಿಕ ಭಾಷೆಯಲ್ಲಿ ಕರೆಯುತ್ತಾರೆ ಅಂತ ಹೇಳಿದ್ದಾರೆ. ಈ ಹೃದಯಾಘಾತ ಬರುವ ಮುನ್ನ ಮೂರು ಗಂಟೆ ಮುಂಚಿತವಾಗಿ ಸೂಚನೆಯನ್ನು ನೀಡುತ್ತದೆ. ತಕ್ಷಣವೇ ಆಸ್ಪತ್ರೆಗೆ ದಾಖಲಾದರೆ ಬದುಕುವ ಸಾಧ್ಯತೆ ಕೂಡ ತೀರ ಕಡಿಮೆ ಇರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ದೇಹಕ್ಕೆ ಅನುಗುಣವಾಗಿ ವ್ಯಾಯಾಮ ಮಾಡುವುದು ಸೂಕ್ತ ಅಂತ ಕೆಲವು ವೈದ್ಯರ ಅಭಿಪ್ರಾಯವಾಗಿದೆ. ಇನ್ನೂ ಈ ಹೃದಯಾಘಾತ ಯಾವ ರೀತಿ ಉಂಟಾಗುತ್ತದೆ ಅಂತ ಹೇಳುವುದಾದರೆ, ಅತಿ ಹೆಚ್ಚು ಹೆಚ್ಚು ವ್ಯಾಯಾಮ ಮಾಡುವುದು, ದೇಹದ ಭಾಗವನ್ನು ದಂಡಿಸುವುದು, ಹೆಚ್ಚಾಗಿ ಶ್ರಮ ಕೊಡುವುದು, ಗೊತ್ತಿಲ್ಲದೆ ಸಮಯವಿಲ್ಲದ ಸಮಯಕ್ಕೆ ವ್ಯಾಯಾಮ ಮಾಡುವುದು ಈ ರೀತಿಯಾಗಿ ಮಾಡುವುದರಿಂದ ಈ ಬಗೆಯ ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸದ ಒತ್ತಡವನ್ನು ನಿಯಂತ್ರಿಸಲು ಬಲು ಕಷ್ಟ ಪಡುವುದು ಕುಟುಂಬವನ್ನು ನಿಯಂತ್ರಿಸುವಲ್ಲಿ ಬಳಕೆ ಮಾಡುವ ಶಕ್ತಿ ಇಂದ ಕೂಡ ಈ ಮ್ಯಾಸಿವ್ ಆಂಟಿರಿಯಲ್ ವಾಲ್ ಹೃದಯಾಘಾತ ಬರುತ್ತದೆ. ಈ ರೋಗಕ್ಕೆ 30% ರಷ್ಟು ಜನರು ಗೊತ್ತಿಲ್ಲದೆ ತುತ್ತಾಗುತ್ತಾರೆ ಅಂತ ವೈದ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಹೃದಯಾಘಾತ ಯಾವ ಸಂದರ್ಭದಲ್ಲಿ ಸಮಯದಲ್ಲಿಯಾದರು ಕೂಡ ಬರಬಹುದು. ಈ ಮೇಲೆ ತಿಳಿಸಿದ ಹಾಗೆ ಈ ಹೃದಯಾಘಾತ ಬರುವ ಮುನ್ನ ಮೂರು ತಾಸು ಮುಂಚಿತವಾಗಿ ಸೂಚನೆ ನೀಡುತ್ತದೆ ಜೊತೆಗೆ ಅರ್ಧ ಗಂಟೆಗೆ ಹೃದಯಲ್ಲಿ ನೋವು ಸತತವಾಗಿ ಕಾಣಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಸಮಯವನ್ನು ವ್ಯರ್ಥ ಮಾಡದೆ ತಕ್ಷಣವೇ ಆಸ್ಪತ್ರೆಗೆ ಹೋಗುವುದು ತುಂಬಾನೇ ಸೂಕ್ತ. ಈ ಹೃದಯದ ನೋವು ಹೇಗೆ ಹೆಚ್ಚಾಗುತ್ತಾ ಹೋಗುತ್ತದೆಯೋ ಹಾಗೆಯೇ ದೇಹದ ಭಾಗಗಳಾದ ದವಡೆ ಬೆನ್ನು ಕತ್ತಿನ ಎಡ ಭಾಗ ಎಡಗೈ ಗೆ ಹರಡುತ್ತಾ ಹೋಗುತ್ತದೆ. ಸಾಮಾನ್ಯವಾಗಿ ಈ ರೀತಿಯ ಹೃದಯಾಘಾತ ಯುವಕರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಅಂತ ತಿಳಿದು ಬಂದಿದೆ. 2017 ಜಯದೇವ ಆಸ್ಪತ್ರೆಯಲ್ಲಿ ನಡೆದ ಯುವ ಜನರಲ್ಲಿ ಹೃದಯಾಘಾತ ಅನ್ನುವ ಪೀಕ್ ಕ್ಯಾಡ್ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗ ವಹಿಸಿದ್ದರು. ಅವರು ಹೃದಯದ ಬಗ್ಗೆ ತುಂಬಾನೇ ಕಾಳಜಿಯನ್ನು ವಹಿಸುತ್ತಿದ್ದರು ಅಂಥಹ ವ್ಯಕ್ತಿಗೆ ಈ ರೀತಿಯಾಗಿದೆ ಅಂದರೆ ನಂಬಲು ಸಾಧ್ಯವಿಲ್ಲ ಅಂತ ಡಾ. ಮಂಜುನಾಥ ಅವರು ಮನಸ್ತಾಪವನ್ನು ವ್ಯಕ್ತ ಪಡಿಸಿದ್ದಾರೆ.

Leave a Reply

Your email address will not be published. Required fields are marked *