ನಮಸ್ತೇ ಆತ್ಮೀಯ ಪ್ರಿಯ ಓದುಗರೇ ಎಲ್ಲ ಕಾಲದಲ್ಲಿ ಸಿಗುವ ಹಣ್ಣುಗಳಲ್ಲಿ ಬಾಳೆಹಣ್ಣು ಹಾಗೂ ಪಪ್ಪಾಯಿ ಹಣ್ಣು ಅಂತ ಹೇಳಿದರೆ ತಪ್ಪಾಗಲಾರದು. ಪಪ್ಪಾಯಿ ಅಥವಾ ಪರಂಗಿ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಪಪ್ಪಾಯಿ ಒಂದು ಅದ್ಭುತ ಹಣ್ಣಾಗಿದ್ದು ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿ ಕಾಣಸಿಗುವ ಹಾಗೂ ಎಲ್ಲಾ ಋತುಗಳಲ್ಲಿ ದೊರೆಯುವ ಪಪ್ಪಾಯಿ ಹಣ್ಣಿನಲ್ಲಿ ಅಪಾರ ಔಷಧೀಯ ಗುಣಗಳಿವೆ.

ಯಾರೂ ಬೇಕಾದರೂ ಪರಂಗಿಹಣ್ಣನ್ನು ತಿನ್ನಬಹುದು. ತಿಂದವರೆಲ್ಲರಿಗೂ ಒಂದೊಂದು ರೀತಿಯ ಪ್ರಯೋಜನಗಳು ಪರಂಗಿ ಹಣ್ಣಿನಿಂದ ಸಿಗುತ್ತವೆ. ಹೀಗಾಗಿ ಪಪ್ಪಾಯಿ ಹಣ್ಣು ನೋಡಿದರೆ ಸಾಕು ಬಾಯಿಯಲ್ಲಿ ನೀರು ಬರುತ್ತದೆ. ಏಕೆಂದರೆ ಇದರ ರುಚಿಯೇ ಇದರ ಸೊಬಗನ್ನು ಹೆಚ್ಚಿಸುತ್ತದೆ. ಇದನ್ನು ಎಲ್ಲರೂ ಸೇವನೆ ಮಾಡಬಹುದು. ಇದರಲ್ಲಿ ಪೌಷ್ಠಿಕ ಸತ್ವಗಳನ್ನು ಹೊಂದಿದೆ.

ಇದರಿಂದ ಹೃದಯದ ಆರೋಗ್ಯ ಬಹಳ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ. ಕ್ಯಾನ್ಸರ್ ಕಾಯಿಲೆ ಇದ್ದವರು ಯಾವುದೇ ಆತಂಕ ಇಲ್ಲದೇ ಪಪ್ಪಾಯಿ ಹಣ್ಣು ಸೇವನೆ ಮಾಡಬಹುದು. ಕಣ್ಣುಗಳ ದೃಷ್ಟಿಯನ್ನು ನಿವಾರಣೆ ಮಾಡಬಹುದು. ಅಧಿಕ ರಕ್ತದೊತ್ತಡಕ್ಕೆ ರಾಮಬಾಣ ಇದ್ದಂತೆ ಈ ಪಪ್ಪಾಯಿ ಹಣ್ಣು ಪಪ್ಪಾಯಿ ಹಣ್ಣು ಮಾತ್ರವಲ್ಲದೆ ಇದರ ಅನೇಕ ಭಾಗಗಳಾದ ಎಲೆ ಬೀಜ ಎಲ್ಲವೂ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು.

ಈಗಿನ ಪೀಳಿಗೆಯ ಜನರಲ್ಲಿ ಕೊಲೆಸ್ಟ್ರಾಲ್ ಅಂಶ ಜನರ ಆರೋಗ್ಯಕ್ಕೆ ಒಂದು ಶಾಪ ಎಂದು ಹೇಳಬಹುದು. ಏಕೆಂದರೆ ಸೇವನೆ ಮಾಡುವ ಹಲವಾರು ಆಹಾರ ಪದಾರ್ಥಗಳಲ್ಲಿ ಎಣ್ಣೆಯ ಜಿಡ್ಡಿನಂಶ ಸೇರಿರುತ್ತದೆ. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚು ಮಾಡುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿಕೊಳ್ಳಲು ಜನರು ತಮ್ಮ ಆಹಾರ ಪದ್ಧತಿಯಲ್ಲಿ ಆಗಾಗ ಪಪ್ಪಾಯಿ ಹಣ್ಣನ್ನು ಸೇರಿಸಿ ಸೇವನೆ ಮಾಡುವುದು ಒಳ್ಳೆಯ ಆರೋಗ್ಯದ ಬೆಳವಣಿಗೆ ಆಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ಡೆಂಗ್ಯೂ ಕಾಯಿಲೆಯನ್ನು ಕಡಿಮೆ ಮಾಡಿ ದೇಹದಲ್ಲಿ ಬ್ಲಡ್ ಪ್ಲೇಟ್ಲೆಟ್ ಗಳನ್ನು ಹೆಚ್ಚಿಸುತ್ತದೆ. ಒಟ್ಟಾರೆ ನಮ್ಮ ದೇಹದ ಅನಾರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ಹಾಗಾದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಯಾವ ಕಾಯಿಲೆಗಳು ಇದ್ದವರು ಪಪ್ಪಾಯಿ ಹಣ್ಣು ಸೇವನೆ ಮಾಡಬಾರದು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಮೂತ್ರ ಪಿಂಡದ ಸಮಸ್ಯೆ ಇದ್ದವರು ಕಿಡ್ನಿ ಸ್ಟೋನ್ ಸಮಸ್ಯೆ ಇದ್ದವರಿಗೆ ಗೊತ್ತು ಅದರ ನೋವು ಏನು ಎಂದು. ಮೂತ್ರ ವಿಸರ್ಜನೆಗೆ ತೊಂದ್ರೆ ಮೂತ್ರದಲ್ಲಿ ರಕ್ತ ಕಂಡು ಬರುವುದು ಇಂತಹ ಸಮಸ್ಯೆಗಳು ಕಂಡು ಬರುತ್ತದೆ. ಅದಕ್ಕಾಗಿ ಮೂತ್ರ ಪಿಂಡದ ಸಮಸ್ಯೆ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದವರು ಎಂದಿಗೂ ಪಪ್ಪಾಯಿ ಹಣ್ಣು ಸೇವನೆ ಮಾಡಬೇಡಿ.

ಇದು ಕೇಳಲು ಅಚ್ಚರಿ ಎನಿಸಿದರೂ ಕೂಡ ಕೆಲವೊಂದು ಪ್ರಕರಣಗಳಲ್ಲಿ ಸತ್ಯ ಎಂದು ತಿಳಿದು ಬಂದಿದೆ. ಪರಂಗಿ ಹಣ್ಣು ತಿನ್ನಲು ತುಂಬಾ ಮೃದುವಾಗಿರುತ್ತದೆ. ಆದರೂ ಕೂಡ ಯಥೇಚ್ಛವಾಗಿ ಸೇವಿಸುವುದರಿಂದ ಅನ್ನ ನಾಳದಲ್ಲಿ ಹುಣ್ಣುಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಯಥೇಚ್ಛವಾದ ಪರಂಗಿ ಹಣ್ಣಿನ ಸೇವನೆಯ ಪ್ರಭಾವದಿಂದ ಪುರುಷರಿಗೆ ತಮ್ಮ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಇದರಿಂದ ನೇರವಾಗಿ ಫಲವತ್ತತೆ ನಕಾರಾತ್ಮಕ ಫಲಿತಾಂಶಗಳನ್ನು ಕೊಡುತ್ತದೆ ಎಂದು ಹೇಳಬಹುದು.

Leave a Reply

Your email address will not be published. Required fields are marked *