ಎಸ್ ಇವತ್ತಿನ ದಿನಗಳಲ್ಲಿ ಪ್ರತಿಯೊಂದು ನಗರಗಳಲ್ಲಿ ಹೆಚ್ಚಾಗಿ ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿ ಅದಕ್ಕೆ ಸಿಕ್ಕಾಪಟ್ಟೆ ದಂಡ ಕಟ್ಟುವ ಕಾಯಕ ಎಷ್ಟೋ ಮಂದಿಯದಾಗಿದೆ ಅಂತಹ ಕಾಯಕವನ್ನು ಬಿಡುವಂತಹ ಸುದ್ದಿ ಇಲ್ಲಿದೆ ನೋಡಿ.

ಯಾವುದೇ ಒಂದು ನೋ ಪಾರ್ಕಿಂಗ್ ಜಾಗದಲ್ಲಿ ಒಂದು ವಾಹನವನ್ನು ಪೊಲೀಸ್ ತೆಗೆದುಕೊಂಡು ಹೋಗಬೇಕು ಅಂದ್ರೆ ಅದಕ್ಕೆ ಅದರದ್ದೇ ಆದ ನೀತಿ ನಿಯಮಗಳಿವೆ. ಹೇಗೆ ಏನು ಯಾವ ನಿಯಮಗಳು ಅನ್ನೋದು ಇಲ್ಲಿವೆ ನೋಡಿ.

ನಿಯಮಗಳು: ಮೊದಲನೆಯದಾಗಿ ನಿಮ್ಮ ವಾಹನ ನೋ ಪಾರ್ಕಿಂಗ್ ಜಾಗದಲ್ಲಿ ಇದ್ದಾರೆ ಆ ವಾಹನದ ನಂಬರ್ ತೆಗೆದುಕೊಂಡು ಪೊಲೀಸರು ಮೈಕ್ ನಲ್ಲಿ ಜೋರಾಗಿ ಹೇಳಬೇಕು ಇದು ಕಡ್ಡಾಯ ನಿಯಮವಾಗಿದೆ.

ಸಂಚಾರಿ ಪೊಲೀಸರು ವಾಹನವನ್ನು ತೆಗೆದುಕೊಂಡು ಹೋಗುವಾಗ ಕಡ್ಡಾಯವಾಗಿ ತಮ್ಮ ಜೊತೆ ಮೈಕ್ ಹೊಂದಿರಬೇಕು.

ದ್ವಿಚಕ್ರ ವಾಹನಗಳಿಗೆ ೭೫೦ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ೧,೧೦೦ ದಂಡ ವಿಧಿಸುತ್ತಾರೆ.
ಈ ದಂಡದಲ್ಲಿ ಕೇವಲ ೧೦೦ ಮಾತ್ರ ನೀವು ನೋ ಪಾರ್ಕಿಂಗ್ ದಂಡ ಕಟ್ಟುತ್ತೀರಾ ಆದ್ರೆ ಇನ್ನು ಉಳಿದ ಹಣ ಟೋಯಿಂಗ್‌ ಶುಲ್ಕವಾಗಿರುತ್ತದೆ.

ನಗರ ಪೊಲೀಸ್ ಕಮಿಷನರ್ ನೀಡಿರುವ ಆದೇಶದಂತೆ ವಾಹನದ ಸಂಖ್ಯೆಯನ್ನು ಜೋರಾಗಿ ಮೈಕ್ ನಲ್ಲಿ ಕೂಗಬೇಕು ಮತ್ತು ಕೂಗಿ ೫ ನಿಮಿಷ ಅಲ್ಲಿಯೇ ಕಾಯಬೇಕು. ೫ ನಿಮಿಷದ ನಂತರ ವಾಹನದ ಮಾಲೀಕರು ಬರದೇ ಇದ್ದಾಗ ಆ ವಾಹನವನ್ನು ಪೊಲೀಸರು ತೆಗೆದುಕೊಂಡು ಹೋಗಬಹುದು.

ಐದು ನಿಮಿಷದಲ್ಲಿ ವಾಹನದ ಮಾಲೀಕರು ಬಂದ್ರೆ ಅವರಿಂದ ಅಲ್ಲಿಯೇ ೧೦೦ ರೂ ದಂಡವನ್ನು ಕಟ್ಟಿಸಿಕೊಳ್ಳಬೇಕು ನಂತರ ವಾಹನವನ್ನು ನೀಡಬೇಕು. ಈ ರೀತಿಯಲ್ಲಿ ಸಂಚಾರಿ ಪೊಲೀಸರು ನಡೆದುಕೊಳ್ಳದಿದ್ದರೆ ಅವರ ವಿರುದ್ಧ ಕಠಿಣಕ್ರಮ ಜರುಗಿಸಲಾಗುತ್ತದೆ ಎಂದು ಕಮಿಷನರ್ ತಿಳಿಸಿದ್ದರು.

Leave a Reply

Your email address will not be published. Required fields are marked *