ನೆಲ್ಲಿಕಾಯಿ ತಿಂದು ನೀರು ಕುಡಿಯುವುದೆಂದರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಹುಳಿ ಹುಳಿ ರುಚಿಯ ಈ ಕಾಯಿ ಕಚ್ಚಿ ತಿಂದ ಮೇಲೆ ನೀರು ಕುಡಿದರೆ ಸಿಹಿ ಅನುಭವವಾಗುತ್ತದೆ. ನೆಲ್ಲಿಕಾಯಿಯಿಂದ ವೆರೈಟಿ ಉಪ್ಪಿನಕಾಯಿಯನ್ನು ಮಾಡುತ್ತೇವೆ. ಆದರೆ ಈ ಹುಳಿಕಾಯಿ ನಿಂಬೆ ಹಣ್ಣಿನಂತೆ ಆರೋಗ್ಯಕ್ಕೆ ಬಹುಪಯೋಗಿ ಎಂಬುದು ನಿಮಗೆ ಗೊತ್ತೇ?

ನೆಲ್ಲಿಕಾಯಿ ತಿಂದು ನೀರು ಕುಡಿಯುವುದೆಂದರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಹುಳಿ ಹುಳಿ ರುಚಿಯ ಈ ಕಾಯಿ ಕಚ್ಚಿ ತಿಂದ ಮೇಲೆ ನೀರು ಕುಡಿದರೆ ಸಿಹಿ ಅನುಭವವಾಗುತ್ತದೆ. ನೆಲ್ಲಿಕಾಯಿಯಿಂದ ವೆರೈಟಿ ಉಪ್ಪಿನಕಾಯಿಯನ್ನು ಮಾಡುತ್ತೇವೆ. ಆದರೆ ಈ ಹುಳಿಕಾಯಿ ನಿಂಬೆ ಹಣ್ಣಿನಂತೆ ಆರೋಗ್ಯಕ್ಕೆ ಬಹುಪಯೋಗಿ ಎಂಬುದು ನಿಮಗೆ ಗೊತ್ತೇ. ವೃದ್ಧಾಪ್ಯವನ್ನು ನಿಧಾನಗೊಳಿಸುತ್ತದೆ, ಹೃದಯ ಕಾಯಿಲೆ ವಿರುದ್ಧ ಹೋರಾಡುತ್ತದೆ ನೆಲ್ಲಿಕಾಯಿಯಲ್ಲಿ ಹೇರಳವಾಗಿ ಸಿ ವಿಟಮಿನ್ ಇದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪಿತ್ತವನ್ನು ನಿಯಂತ್ರಿಸುತ್ತದೆ.ನೆಲ್ಲಿಕಾಯಿಯಲ್ಲಿ ವಿಟಮಿನ್‌ ಸಿ. ಕಬ್ಬಿಣ, ಕ್ಯಾಲ್ಸಿಯಂ ಅಮಶ ಹೇರಳವಾಗಿದೆ. ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ನೆಲ್ಲಿಕಾಯಿ ಕಾಪಾಡುತ್ತದೆ. ನೆಲ್ಲಿಕಾಯಿಯನ್ನು ಪುಡಿಮಾಡಿಟ್ಟುಕೊಂಡು ನಿತ್ಯ ಅರ್ಧ ಚಮಚ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.

ಅದಕ್ಕೆ ಶುಂಠಿ ಪುಡಿ, ನಿಂಬೆರಸ ಮತ್ತು ಜೇನುತುಪ್ಪ ಬೆರೆಸಿ ಸೇವಿಸಬಹುದು. ಅಥವಾ ಬೆಳಗ್ಗೆ ಫ್ರೆಶ್‌ ಜ್ಯೂಸ್‌ಗೆ ಒಂದು ಚಮಚ ನೆಲ್ಲಿಕಾಯಿ ಪುಡಿ ಮಿಕ್ಸ್‌ ಮಾಡಿಕೊಂಡು ಕುಡಿದರೆ ಉತ್ತಮ. ಬಾಳೆಹಣ್ಣು, ಪಪ್ಪಾಯ ಮತ್ತು ಸೇಬುಹಣ್ಣಿನ ಹೋಳುಗಳ ಮೇಲೆ ನೆಲ್ಲಿಕಾಯಿ ಪುಡಿಯನ್ನು ಉದುರಿಸಿಕೊಂಡು ತಿನ್ನುವುದು ಕೂಡ ಉತ್ತಮ. ಕೊಲೆಸ್ಟ್ರಾಲ್‌ ಅನ್ನು ಕೂಡ ನೆಲ್ಲಿಕಾಯಿ ಕಡಿಮೆ ಮಾಡುವುದರಿಂದ ಹೃದಯದ ಸಮಸ್ಯೆಗಳು ಬರುವುದಿಲ್ಲ. ಮುಖಕ್ಕೆ ನೆಲ್ಲಿಕಾಯಿ ಪುಡಿ, ಮೊಸರು ಮತ್ತು ಜೇನುತುಪ್ಪ ಮಿಶ್ರಣ ಮಾಡಿ ಮಾಸ್ಕ್‌ ಹಾಕಿಕೊಂಡ್ರೆ ಕಾಂತಿಯುಕ್ತವಾಗುತ್ತದೆ. ನೆಲ್ಲಿಕಾಯಿ ಪುಡಿಯಲ್ಲಿ ಫೈಬರ್‌ ಅಂಶವಿರುವುದರಿಂದ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಮಲಬದ್ದತೆಗೆ ಇದು ಅತ್ಯಂತ ಉತ್ತಮ ಮದ್ದು. ಜೇನುತುಪ್ಪದ ಜೊತೆ ನೆಲ್ಲಿಕಾಯಿ ಪೌಡರ್‌ ಸೇರಿಸಿ ಸೇವಿಸಿದರೆ ರಕ್ತಶುದ್ದಿಯಾಗುತ್ತದೆ. ಬೆಲ್ಲದ ಜೊತೆಗೂ ಇದನ್ನು ತಿನ್ನಬಹುದು.

ವೃದ್ಧಾಪ್ಯವನ್ನು ನಿಧಾನಗೊಳಿಸುತ್ತದೆ, ಹೃದಯ ಕಾಯಿಲೆ ವಿರುದ್ಧ ಹೋರಾಡುತ್ತದೆ ನೆಲ್ಲಿಕಾಯಿಯಲ್ಲಿ ಹೇರಳವಾಗಿ ಸಿ ವಿಟಮಿನ್ ಇದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪಿತ್ತವನ್ನು ನಿಯಂತ್ರಿಸುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್‌ ಸಿ. ಕಬ್ಬಿಣ, ಕ್ಯಾಲ್ಸಿಯಂ ಅಮಶ ಹೇರಳವಾಗಿದೆ. ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ನೆಲ್ಲಿಕಾಯಿ ಕಾಪಾಡುತ್ತದೆ. ನೆಲ್ಲಿಕಾಯಿಯನ್ನು ಪುಡಿಮಾಡಿಟ್ಟುಕೊಂಡು ನಿತ್ಯ ಅರ್ಧ ಚಮಚ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಅದಕ್ಕೆ ಶುಂಠಿ ಪುಡಿ, ನಿಂಬೆರಸ ಮತ್ತು ಜೇನುತುಪ್ಪ ಬೆರೆಸಿ ಸೇವಿಸಬಹುದು. ಅಥವಾ ಬೆಳಗ್ಗೆ ಫ್ರೆಶ್‌ ಜ್ಯೂಸ್‌ಗೆ ಒಂದು ಚಮಚ ನೆಲ್ಲಿಕಾಯಿ ಪುಡಿ ಮಿಕ್ಸ್‌ ಮಾಡಿಕೊಂಡು ಕುಡಿದರೆ ಉತ್ತಮ. ಬಾಳೆಹಣ್ಣು, ಪಪ್ಪಾಯ ಮತ್ತು ಸೇಬುಹಣ್ಣಿನ ಹೋಳುಗಳ ಮೇಲೆ ನೆಲ್ಲಿಕಾಯಿ ಪುಡಿಯನ್ನು ಉದುರಿಸಿಕೊಂಡು ತಿನ್ನುವುದು ಕೂಡ ಉತ್ತಮ. ಕೊಲೆಸ್ಟ್ರಾಲ್‌ ಅನ್ನು ಕೂಡ ನೆಲ್ಲಿಕಾಯಿ ಕಡಿಮೆ ಮಾಡುವುದರಿಂದ ಹೃದಯದ ಸಮಸ್ಯೆಗಳು ಬರುವುದಿಲ್ಲ.

Leave a Reply

Your email address will not be published. Required fields are marked *