ಪ್ರತಿಯೊಬ್ಬರ ಮನೆಯಲ್ಲಿ ಕೂಡ ಪೂಜೆಯನ್ನ ಮಾಡಲು ಕರ್ಪೂರವನ್ನ ಬಳಕೆ ಮಾಡೇ ಮಾಡುತ್ತಾರೆ ಮತ್ತು ಕರ್ಪೂರ ಇಲ್ಲದೆ ಪೂಜೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಪ್ರಪಂಚದಲ್ಲಿ ಹಲವು ಬಗೆಯ ಕರ್ಪೂರಗಳನ್ನ ನಾವು ನೋಡಬಹುದು ಆದರೆ ಪ್ರಸಿದ್ಧಿಯಲ್ಲಿ ಇರುವ ಎರಡು ಕರ್ಪೂರ ಅಂದರೆ ಅದೂ ಆರತಿ ಮಾಡುವ ಕರ್ಪೂರ ಮತ್ತು ಪಚ್ಛೆ ಕರ್ಪೂರ. ಕರ್ಪೂರ ಪೂಜಾ ಕಾರ್ಯಗಳಲ್ಲಿ ಉಪಯೋಗಿಸುವ ಸುಗಂಧ ದ್ರವ್ಯವು ಹೌದು ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಕರ್ಪೂರದಲ್ಲಿ ಅನೇಕ ಔಷದಿಯ ಗುಣಗಳು ಇದೆ, ಇನ್ನು ಮನೆಯಲ್ಲಿ ಪ್ರತಿನಿತ್ಯ ಕರ್ಪೂರವನ್ನ ಬೆಳಗಿಸಿದರೆ ಅದೂ ವಾತಾವರಣವನ್ನ ತಿಳಿಗೊಳಿಸಿ ಒಳ್ಳೆಯ ವಾತಾವರಣವನ್ನ ಸೃಷ್ಟಿ ಮಾಡುತ್ತದೆ.
ಇನ್ನು ಸ್ನಾನ ಮಾಡುವ ನೀರಿನಲ್ಲಿ ಕರ್ಪೂರವನ್ನು ಹಾಕಿ ಸ್ನಾನ ಮಾಡಿದರೆ ಆಗುವ ಅದ್ಬುತಗಳನ್ನ ತಿಳಿದರೆ ನೀವು ಆಶ್ಚರ್ಯ ಪಡುವುದು ಗ್ಯಾರೆಂಟಿ, ಹಾಗಾದರೆ ಸ್ನಾನ ಮಾಡುವ ನೀರಿನಲ್ಲಿ ಕರ್ಪೂರವನ್ನ ಹಾಕಿ ಸ್ನಾನ ಮಾಡಿದರೆ ಏನಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಸ್ನಾನದ ನೀರಿನಲ್ಲಿ ಕರ್ಪೂರವನ್ನ ಬೆರೆಸಿ ಸ್ನಾನ ಮಾಡಿದರೆ ಸೋಂಕು ವ್ಯಾಧಿಗಳು ನಮ್ಮ ದೇಹಕ್ಕೆ ತಾಗದಂತೆ ರಕ್ಷಣೆ ಮಾಡುತ್ತದೆ, ಇನ್ನು ಬಿಪಿ ಜಾಸ್ತಿ ಇರುವವರು ಪಾರ್ಟಿ ದಿನ ಚಿಟಿಕೆಯಷ್ಟು ಪಚ್ಛೆ ಕರ್ಪೂರವನ್ನ ಸೇವಿಸಿದರೆ ಅವರ ಬಿಪಿ ಹತೋಟಿಗೆ ಬರುತ್ತದೆ. ಇನ್ನು ದಿನನಿತ್ಯ ನಮ್ಮ ದೇಹದ ಮೇಲೆ ಸೂಕ್ಹ್ಮ ಜೀವಿಗಳು ಪ್ರಭಾವನ್ನ ಬೀರುತ್ತದೆ ಮತ್ತು ನಾವು ಸ್ನಾನ ಮಾಡುವ ಸಮಯದಲ್ಲಿ ಸ್ನಾನದ ನೀರಿಗೆ ಕರ್ಪೂರವನ್ನ ಬೆರೆಸಿ ಸ್ನಾನ ಮಾಡಿದರೆ ಆ ಸೂಕ್ಷ್ಮ ಜೀವಿಗಳು ನಾಶವಾಗುತ್ತದೆ.
ಇನ್ನು ಪಚ್ಛೆ ಕರ್ಪೂರವನ್ನ ದಿನಾಲೂ ಚಿಟಿಕೆಯಷ್ಟು ಸೇವನೆ ಮಾಡಿದರೆ ನಮ್ಮ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ ಮತ್ತು ಕರ್ಪೂರವನ್ನ ಬಟ್ಟೆಯಲ್ಲಿ ಕಟ್ಟಿ ಮಲಗುವಾಗ ದೇಹಕ್ಕೆ ತಾಗುವಂತೆ ಪಕ್ಕದಲ್ಲಿ ಇಟ್ಟುಕೊಂಡು ಮಲಗಿದರೆ ದೇಹದ ರಕ್ತ ಸಂಚಾರ ಕೂಡ ಸರಾಗವಾಗಿ ಆಗುತ್ತದೆ ಎಂದು ಹೇಳುತ್ತಿದ್ದಾರೆ ವೈದ್ಯರು.
ಇನ್ನು ಮನೆಯಲ್ಲಿ ಸೊಳ್ಳೆಯ ಕಾಟ ಜಾಸ್ತಿಯಾಗಿದ್ದರೆ ಒಂದು ಲೋಟದಲ್ಲಿ ನೀರನ್ನ ತೆಗೆದುಕೊಂಡು ಅದರಲ್ಲಿ ಕೆಲವು ಕರ್ಪೂರದ ಬಿಲ್ಲೆಗಳನ್ನ ಹಾಕಿ ಮನೆಯ ಕೊನೆ ಅಥವಾ ಮಂಚದ ಕೆಳಗೆ ಇಟ್ಟರೆ ಮನೆಯಲ್ಲಿ ಇರುವ ಸೊಳ್ಳೆಯ ಕಾಟ ದೂರವಾಗಲಿದೆ. ಇನ್ನು ಪತಿದಿನ ಹಲ್ಲುಜ್ಜುವ ಪೇಸ್ಟ್ ನಲ್ಲಿ ಸ್ವಲ್ಪ ಪಚ್ಛೆ ಕರ್ಪೂರದ ಪುಡಿಯನ್ನ ಬೆರೆಸಿ ಪೇಸ್ಟ್ ಮಾಡುವುದರಿಂದ ದಂತ ಸಂಬಂದಿತ ಕಾಯಿಲೆಗಳು ದೂರವಾಗುತ್ತದೆ ಮತ್ತು ಬಾಯಿಯ ದುರ್ವಾಸನೆ ಕೂಡ ಹೋಗುತ್ತದೆ.