ಭಾರತೀಯ ಸಂಪ್ರದಾಯ ಪ್ರಕಾರ ಶುಚಿಯಾದ ಜಾಗದಲ್ಲಿ, ನೆಲದ ಮೇಲೆ ಕುಳಿತು ಶಾಂತ ಚಿತ್ತದಿಂದ ನಿಶ್ಯಬ್ಧವಾಗಿ ಊಟ ಮಾಡಬೇಕು. ಊಟ ಮಾಡುವಾಗ ಮೌನವಾಗಿರ ಬೇಕು ಎಂದು ನಮ್ಮ ಹಿರಿಯರು ನಿಯಮ ರೂಪದಲ್ಲಿ ನಮಗೆ ಬೋಧಿಸಿದ್ದಾರೆ.

ಆರೋಗ್ಯಕರ ಆಹಾರ ಪದ್ಧತಿ, ಅದಕ್ಕೆ ಅನುಗುಣವಾದ ಲೈಫ್‌ಸ್ಟೈಲ್, ದೇಹಕ್ಕೆ ಎಷ್ಟು ಅಗತ್ಯ ಇದೆಯೋ ಅಷ್ಟೇ ಪ್ರಮಾಣದ ಆಹಾರ ತಜ್ಞರು ಹೇಳುವುದು, ಆಹಾರದ ಸೂಕ್ಷ್ಮತಮ ಭಾಗದಿಂದ, ಅಂದರೆ ಅನ್ನದಲ್ಲಿನ ಸತ್ತ್ವ, ರಜ ಮತ್ತು ತಮ ಘಟಕಗಳಿಂದ ಮನಸ್ಸು ತಯಾರಾಗುತ್ತದೆ, ಆದುದರಿಂದಲೇ ಆಹಾರಕ್ಕೆ ತಕ್ಕಂತೆ ನಮ್ಮ ಆಚಾರ ವಿಚಾರಗಳು ಬದಲಾಗುತ್ತವೆ. ಸತ್ತ್ವಗುಣವನ್ನು ಹೆಚ್ಚಿಸುವ ಆಹಾರಕ್ಕೆ ಸಾತ್ತ್ವಿಕ ಮತ್ತು ಮನಸ್ಸಿನ ರಜ ಮತ್ತು ತಮ ದೋಷಗಳನ್ನು ಹೆಚ್ಚಿಸುವ ಆಹಾರಕ್ಕೆ ಕ್ರಮವಾಗಿ ರಾಜಸಿಕ ಮತ್ತು ತಾಮಸಿಕ ಆಹಾರ ಎನ್ನುತ್ತಾರೆ.

ನಾವು ಉಸಿರಾಡುವ ಗಾಳಿ ಮೂಗಿನಿಂದ ಶ್ವಾಸನಾಳದೊಳಕ್ಕೆ ಪ್ರವೇಶಿಸುತ್ತದೆ. ಊಟಮಾಡುವಾ ಆಹಾರ ಅನ್ನನಾಳದ ಮೂಲಕ ಜಠರ ಸೇರುತ್ತದೆ. ನಾವು ಊಟ ಮಾಡುವಾಗ ಮಾತನಾಡಿದರೆ, ಆಹಾರ ಶ್ವಾಸನಾಳಕ್ಕೆ ಹೋಗುವ ಸಾಧ್ಯತೆಯಿದ್ದು ‘ನೆತ್ತಿ ಹತ್ತಿ’ ಸೀನು/ಬಿಕ್ಕಳಿಕೆ/ ಕೆಮ್ಮು ಬಂದು ಬಾಯಿಯಲ್ಲಿರುವ ಅನ್ನವು ಎದುರುಗಡೆ ಇರುವವರ ಎಲೆಗೆ ಬಿದ್ದರೆ….ಅಬ್ಬಾ ಅದೆಂಥಾ ಮುಜುಗರ,ಅವಮಾನ! ಆದ್ದರಿಂದ ಬಾಯಿಯಲ್ಲಿರುವ ತುತ್ತನ್ನು ನುಂಗುವ ತನಕವಾದರೂ ಮಾತನಾಡಬಾರದು.

ಆಹಾರದ ಬಗ್ಗೆ ಗೌರವವಿದ್ದರೆ, ಅದು ಶರೀರ ಮತ್ತು ಮನಸ್ಸು ಇವುಗಳಿಗೆ ಪುಷ್ಟಿದಾಯಕವಾಗುತ್ತದೆ: ಊಟ ಮಾಡುವಾಗ ಆಹಾರದ ಬಗ್ಗೆ ಗೌರವ ಮತ್ತು ಉಚ್ಚ ಭಾವನೆಯಿರಬೇಕು. ಅನ್ನದ ನಿಂದನೆಯನ್ನು ಎಂದಿಗೂ ಮಾಡಬಾರದು. ನಿಂದಿಸಿದರೆ ಅನ್ನವು ಲಾಭದಾಯಕವಾಗುವುದಿಲ್ಲ. ಅನ್ನದ ಬಗ್ಗೆ ಪೂಜ್ಯಭಾವವಿದ್ದರೆ, ಅದು ಶರೀರ ಮತ್ತು ಮನಸ್ಸಿಗೆ ಪುಷ್ಟಿದಾಯಕವಾಗುತ್ತದೆ.

ಆಹಾರ ಮತ್ತು ಮನಸ್ಸು ಇವುಗಳಿಗೆ ಸಮೀಪದ ಸಂಬಂಧವಿರುವುದು: ಹಿಂದೂ ಧರ್ಮೀಯರು ತಮ್ಮ ಸಾಧನೆಯಲ್ಲಿನ ಉನ್ನತಿ ಮತ್ತು ಶರೀರದ ಪೋಷಣೆಗಾಗಿ ಯಾವ ಆಹಾರವನ್ನು ಸೇವಿಸಬೇಕು, ಎಂಬುದನ್ನು ಸ್ಥಳೀಯ ಪರಿಸ್ಥಿತಿ ಮತ್ತು ಆಹಾರದ ಲಭ್ಯತೆಯ ವಿಚಾರವನ್ನು ಮಾಡಿ ತಾವೇ ನಿರ್ಧರಿಸುತ್ತಾರೆ. ಇದಕ್ಕಾಗಿ ಅವರು ಆಹಾರ ಮತ್ತು ಮನಸ್ಸು ಇವುಗಳ ಅಧ್ಯಯನ ಮಾಡುತ್ತಾರೆ. ಆಹಾರ ಮತ್ತು ಮನಸ್ಸು ಇವುಗಳಿಗೆ ಪರಸ್ಪರ ಸಮೀಪದ ಸಂಬಂಧವಿದೆ. ಆಹಾರದ ಸ್ಥೂಲಭಾಗದಿಂದ ರಕ್ತ, ಮಾಂಸ ಮತ್ತು ಮೂಳೆಗಳ ಪೋಷಣೆಯಾಗುತ್ತದೆ ಮತ್ತು ಸೂಕ್ಷ್ಮ ಭಾಗದಿಂದ ಮನಸ್ಸಿನ ಪೋಷಣೆಯಾಗುತ್ತದೆ.

ಬಾಯಿಯ ಹತ್ತಿರವೇ ಮೂಗಿನ ಹಿಂಬದಿಯ ಕುಳಿಯ ಹಿಂದೆ ಮತ್ತು ಅನ್ನನಾಳ ಹಾಗೂ ಧ್ವನಿಪೆಟ್ಟಿಗೆಯ ಮೇಲುಭಾಗಗಳು ಗಂಟಲಿನ ಭಾಗವಾಗಿದೆ ಗಾಳಿಯು ಧ್ವನಿಪೆಟ್ಟಿಗೆಯ ಮುಖಭಾಗವನ್ನು ಪ್ರವೇಶಿಸಿದಾಗ ತೆರೆದಿರುತ್ತದೆ, ಆದರೆ ಆಹಾರ ನುಂಗಿದಾಗ ಮುಚ್ಚುತ್ತದೆ. ಆಹಾರ ದಾಟಲು ಮೊದಲ ಆದ್ಯತೆ. ಮತ್ತು ಆ ಸಮಯದಲ್ಲಿ ಗಾಳಿಯಚಲನೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರತ್ತದೆ.

ಧ್ವನಿಪೆಟ್ಟಿಗೆಯು ಗಂಟಲಕುಳಿಯ ಮಾಸಪೊರೆಯ ಮೂಲಕ ವೇಗಸ್ ನರದ ಸಂಪರ್ಕಹೊಂದಿದೆ. ಕ್ರಿಕೊಯಿಡ್ ಕಾರ್ಟಿಲೆಜ್ ಹಿಂದೆ ಇರುವ ಗಂಟಲಕುಳಿಯು ಅನ್ನನಾಳದ ಪ್ರವೇಶದ್ವಾರಕ್ಕೆ ಇಲ್ಲಿ ಸೇರುತ್ತದೆ.ಗಂಟಲಕುಳಿಯ ಸ್ನಾಯುಗಳು ಅನ್ನನಾಳಕ್ಕೆ ಆಹಾರವನ್ನು ತಳ್ಳುತ್ತದೆ. ಆ ಕ್ರಿಯೆನಡೆಯುವಾಗ ನಾವು ಮಾತನಾಡಿದರೆ ಧ್ವನಿಪೆಟ್ಟಿಗೆಯೊಳಗೆ ಆಹಾರ ಹೋಗಿ ತೋಂದರೆ ಉಂಟಾಗುತ್ತದೆ ಆದ್ದರಿಂದ ಊಟಮಾಡುವಾಗ ಮಾತನಾಡಬಾರು ಎಂದು ಹೇಳುತ್ತಾರೆ.

Leave a Reply

Your email address will not be published. Required fields are marked *