ಟೀವಿ ನೋಡಿಕೊಂಡು ರುಚಿಯಾದ ಆಹಾರ ತಿನ್ನುತ್ತ ಕುತಿದ್ದಾಗ ಅಪ್ಪಿತಪ್ಪಿ ತುಟಿಯನ್ನು ಅಥವಾ ನಾಲಿಗೆಯನ್ನು ಕಚ್ಚಿ ಕೊಂಡು ಬಿಡುತ್ತೇವೆ. ಆ ಸಂದರ್ಭದಲ್ಲಿ ಉಂಟಾಗುವ ನೋವು ಹಿಂಸಿಸುತ್ತದೆ. ಇದು ನಾವಾಗಿ ಮಾಡಿಕೊಳ್ಳುವ ತಪ್ಪು. ಆದರೆ ನಮ್ಮ ಬಾಯಲ್ಲಿ ನಾಲಿಗೆಯಲ್ಲಿ ಹಾಗು ತುಟಿಯ ಭಾಗದಲ್ಲಿ ನಮ್ಮ ದೇಹದ ಅತಿಯಾದ ಉಷ್ಣಾಂಶದಿಂದ ಅಲ್ಸರ್ ಉಂಟಾಗುತ್ತವೆ. ಇವು ಕೂಡ ಇಷ್ಟೇನು ದಾಯಕವಾಗಿರುತ್ತವೆ ಮತ್ತು ನೋವು ನಿರಂತರವಾಗಿರುತ್ತದೆ.ಇಂತಹ ಸಂದರ್ಭದಲ್ಲಿ ಬಾಯಿಗೆ ಕಿರಿಕಿರಿ ಎನಿಸುವಂತಹ ಆಹಾರಗಳನ್ನ ತಿನ್ನಲು ಸಾಧ್ಯವಿರುವುದಿಲ್ಲ. ಆದ್ರೂ ಕೂಡ ಧೈರ್ಯ ಮಾಡಿ ತಿಂದರೆ ಅಲ್ಸರ್ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಾದರೆ ಯಾವ ಆಹಾರಗಳನ್ನ ಈ ಸಂದರ್ಭದಲ್ಲಿ ತಿನ್ನಬಾರದು ಎಂಬುದನ್ನ ಇವತ್ತಿನ ಮಾಹಿತಿಥ ಮುಖಾಂತರ ತಿಳಿದುಕೊಳ್ಳೋಣ.ಮಸಾಲೆ ಆಹಾರ ಎಂದಿಗೂ ನಮ್ಮ ದೇಹಕ್ಕೆ ಉಷ್ಣ ಪ್ರಭಾವವನ್ನು ಉಂಟು ಮಾಡುತ್ತದೆ.

ಹೀಗಾಗಿ ಬಾಯಿಯಲ್ಲಿ ಉಂಟಾಗುವ ಅಲ್ಸರ್ ಇದರಿಂದ ಮತ್ತಷ್ಟು ಹೆಚ್ಚಾಗುತ್ತದೆ. ಜೊತೆಗೆ ಕಿರಿಕಿರಿ ಹಾಗೂ ಉರಿಯೂತ ಉಂಟಾಗುತ್ತದೆ. ಅದರಲ್ಲೂ ತೆರೆದಗಾಯ. ಆದರೆ ಈ ರೀತಿ ಸಮಸ್ಯೆ ಜಾಸ್ತಿ. ಹೀಗಾಗಿ ಮಸಾಲೆ ಪದಾರ್ಥಗಳು ಅಲ್ಸರ್ ಆಗಿರುವ ಸಂದರ್ಭದಲ್ಲಿ ಸೇವನೆ ಮಾಡಲು ಅರ್ಹವಲ್ಲ. ಮಸಾಲೆ ಚಟ್ನಿ, ಕೆಂಪು ಮೆಣಸಿನಕಾಯಿ ಇವುಗಳಿಂದ ಈ ಸಂದರ್ಭದಲ್ಲಿ ಸಾಧ್ಯವಾದಷ್ಟು ದೂರ ಇರಿ. ಇನ್ನು ಸಿಟ್ರಸ್ ಹಣ್ಣುಗಳು ನಿಮಗೆಲ್ಲ ಗೊತ್ತಿರುವ ಹಾಗೆ ನಿಂಬೆ ಹಣ್ಣು, ಮೋಸಂಬಿ ಹಣ್ಣು, ಕಿತ್ತಳೆ ಹಣ್ಣು, ದ್ರಾಕ್ಷಿ ಹಣ್ಣುಗಳ ಲ್ಲಿ ಸಿಟ್ರಸ್ ಆಮ್ಲದ ಪ್ರಮಾಣ ಹೇರಳವಾಗಿ ಕಂಡು ಬರುತ್ತದೆ. ಬಾಯಿಯಲ್ಲಿ ಹುಣ್ಣು ಉಂಟಾದಾಗ ಇವುಗಳನ್ನು ಸೇವಿಸುವುದರಿಂದ ಹೆಚ್ಚಿನ ಕಿರಿಕಿರಿ ಉಂಟಾಗುತ್ತದೆ ಮತ್ತು ನೋವು ಮತ್ತಷ್ಟು ಜಾಸ್ತಿಯಾಗುತ್ತದೆ. ಇನ್ನು ಕಾರ್ಬೋಹೈಡ್ರೇಟ್ ಪಾನೀಯಗಳು ಕಾರ್ಬೊ ನೇಟೆಡ್ ಪಾನೀಯ ಗಳು ಬಾಯಿಯಲ್ಲಿನ ಮೃದುವಾದ ಅಂಗಾಂಶಗಳಿಗೆ ಮತ್ತು ಅಲ್ಸರ್ ಭಾಗಕ್ಕೆ ಹೆಚ್ಚು ನೋವು ಮತ್ತು ಉರಿ ತಂದು ಕೊಡುತ್ತವೆ.

ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುವುದರಿಂದ ಬಾಯಿಯಲ್ಲಿ ಕೀಟಾಣುಗಳ ಪ್ರಮಾಣ ಹೆಚ್ಚಾಗುವಂತೆ ಸಹ ಮಾಡಿ ಸೋಂಕು ಉಂಟುಮಾಡುತ್ತವೆ. ಹಾಗಾಗಿ ಇವುಗಳಿಂದ ಸಹ ದೂರವಿರಿ ಇನ್ನು ಕೆಫಿನ್ ಅಂಶ ಹೊಂದಿರುವ ಚಹಾ ಅಥವಾ ಕಾಫಿ ಕೆಲವರಿಗೆ ದಿನಕ್ಕೆ ಎಂಟರಿಂದ 10 ಬಾರಿ ಚಹಾ ಕುಡಿಯುವ ಅಭ್ಯಾಸ ಇರುತ್ತದೆ. ಚಹ ಮತ್ತು ಕಾಫಿ ಇವುಗಳ ಲ್ಲಿ ಕೆಫಿನ್ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಪದೇ ಪದೇ ಚಹಾದ ಕಾಫಿ ಕುಡಿಯುವುದರಿಂದಲೂ ಕೂಡ ಬಾಯಿಯ ಅಲ್ಸರ್ಗಳುಷ್ಟು ಬೇಗ ನಿವಾಸಿ ಆಗುವುದಿಲ್ಲ. ಏಕೆಂದರೆ ನಮ್ಮ ದೇಹ ಕ್ಕೆ ಇವುಗಳಿಂದ ಸಾಲಿಸಿಲೇಟ್ ಪ್ರಮಾಣ ಸಿಗುತ್ತಾ ಹೋಗುತ್ತದೆ. ಇದು ವಸಡುಗಳಿಗೆ ಮತ್ತು ನಾಲಿಗೆಗೆ ತೊಂದರೆ ಉಂಟು ಮಾಡುವ ಅಂಶ. ಹೀಗಾಗಿ ನಿಮಗೆ ಒಂದು ವೇಳೆ ಬಾಯಿಯಲ್ಲಿ ಹುಣ್ಣುಗಳು ಹೆಚ್ಚಾಗಿದ್ದರೆ ಅವುಗಳು ಬೇಗ ನಿವಾಸಿಯಾಗುವ ತನಕ ಕಾಫೀ ಟೀ ಕುಡಿಯ ಬೇಡಿ ಇನ್ನು ಅತಿಯಾದ ಮದ್ಯಪಾನ ಸೇವನೆ ಯಾರಿಗೂ ಕೂಡ ಒಳ್ಳೆಯದಲ್ಲ. ಮೊದಲೇ ಮದ್ಯಪಾನ ದೇಹದಲ್ಲಿ ನಿರ್ಜಲೀಕರಣ ಉಂಟು ಮಾಡುತ್ತದೆ.

ಇದರಿಂದ ನಮ್ಮ ಬಾಯಿ ಯಲ್ಲಿ ಹುಣ್ಣು ಗಳು ಷ್ಟು ಬೇಗನೇ ವಾಸಿ ಯಾಗುವುದಿಲ್ಲ ಮತ್ತು ಉರಿಯೂತ ಕ್ಕೆ ಒಳಗಾಗುತ್ತವೆ. ಹೀಗಾಗಿ ಮದ್ಯಪಾನ ಮಾಡುವ ವರಿಗೆ ಅಲ್ಸರ್ ಉಂಟಾಗಿರುವ ಜಾಗದಲ್ಲಿ ಅತಿಯಾದ ನೋವು ಕಂಡುಬರುತ್ತದೆ. ಮದ್ಯಪಾನ ಕಂಟ್ರೋಲ್ ಮಾಡಿಕೊಳ್ಳುವುದು ಇದಕ್ಕಿರುವುದು ಉತ್ತಮ ಮಾರ್ಗ. ಇನ್ನು ಬಾಯಿ ಯಲ್ಲಿ ಅಲ್ಸರ್ ಉಂಟು. ಆದರೆ ಆ ಸಂದರ್ಭದಲ್ಲಿ ಹೆಚ್ಚು ಬಿಸಿ ಇರುವ ಅಥವಾ ಫ್ರಿಡ್ಜ್‌ನಲ್ಲಿರುವ ಆಹಾರವನ್ನ ಸೇವನೆ ಮಾಡಲೇಬಾರದು. ಏಕೆಂದರೆ ಬಹಳ ಸೆನ್ಸಿ ಟಿವ್ ಆಗಿದ್ದು, ಈ ರೀತಿಯ ಅತಿಯಾದ ತಾಪಮಾನಗಳಿಗೆ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಉತ್ತಮ ತಾಪಮಾನದ ಆಹಾರ ಗಳನ್ನು ಸೇವಿಸುವುದು ಒಳ್ಳೆಯದು. ಈ ಸಂದರ್ಭದಲ್ಲಿ ಬಿಸಿಯಾದ ಸೂಪ್ ಐಸ್ ಕ್ರೀಂ, ಕುಲ್ಫಿ ಇವುಗಳ ನ್ನ ಸೇವನೆ ಮಾಡಲೇಬೇಡಿ.

Leave a Reply

Your email address will not be published. Required fields are marked *