ನಿಂಬೆಹಣ್ಣಿನ ಉಪಯೋಗ ಕೇವಲ ಅಡುಗೆ ತಯಾರಿಕೆಗೆ ಮತ್ತು ಆರೋಗ್ಯ ವೃದ್ಧಿಗೆ ಮಾತ್ರವಲ್ಲದೇ ದೇವರ ಪೂಜೆಗೆ ಅತ್ಯಂತ ಪ್ರಮುಖವಾದುದ್ದು ಎಂದರೆ ತಪ್ಪಾಗಲಾರದು.

ನಿಂಬೆ ಹಣ್ಣು ದೇವಿ ಸ್ವರೂಪಿಯಾದ ದುರ್ಗಾದೇವಿಗೆ ಬಹಲ ಪ್ರಿಯವಾದುದ್ದರಿಂದ ದೇವಿಯ ಕೃಪೆ ಮತ್ತು ಆರ್ಶಿವಾದ ನಮಗೆ ಸಿಗಳೆಂದು ಹಚ್ಚುತ್ತೇವೆ. ಮತ್ತು ತಮ್ಮ ಸಂಸಾರದಲ್ಲಿ ಯಾವಾಗಲೂ ಜಗಳ, ಹಣಕಾಸಿನ ತೊಂದರೆಗಳು,ನಿರುತ್ಸಾಹ, ಆರೋಗ್ಯದ ಸಮಸ್ಸೆಗಳು, ಮನೆಯ ವಾಸ್ತುದೋಷಕ್ಕೆ, ಅಪಮೃತ್ಯು, ಮುಖ್ಯವಾಗಿ ಕಾಳಸರ್ಪ ದೋಷಕ್ಕೆ, ವ್ಯವಹಾರದಲ್ಲಿ ತೊಂದರೆ ಯಾಗುತ್ತಿದ್ದರೆ, ಶತೃಗಳ ಕಾಟ ಹೆಚ್ಚಿದ್ದರೆ, ಮದುವೆ ನಿಧಾನವಾಗುತ್ತಿದ್ದರೆ ಕೆಟ್ಟ ಕನಸುಗಳು ಅನುಭವಿಸುತಿದ್ದರೆ ದೇವಿಗೆ ನಿಂಬೆ ಹಣ್ಣಿನ ದೀಪವನ್ನು ಹಚ್ಚುವುದರಿಂದ ಮತ್ತು ದೇವಿಯನ್ನು ಆರಾಧನೆ ಮಾಡುವುದರಿಂದ ಈ ಎಲ್ಲಾ ಸಮಸ್ಸೆಗಳು ನಿವಾರಣೆಯಾಗುತ್ತದೆ.

ನಿಂಬೆಹಣ್ಣಿನ ದೀಪವನ್ನು ಪಾರ್ವತಿ ಸ್ವರೂಪರಾದ ಅಂಬಾಭವಾನಿ, ಕಾಳಿಕದೇವಿ, ಚೌಡೇಶ್ವರಿ, ಮಾರಿಯಮ್ಮ, ದುರ್ಗಿದೇವಿ ಹಾಗೂ ಶಕ್ತಿ ದೇವಸ್ಥಾನಗಳಲ್ಲಿ ಹಚ್ಚುವುದು ಒಳ್ಳೆಯದು.

ದೇವಿಯ ವಾರವಾದ ಮಂಗಳವಾರ ಮಧ್ಯಾಹ್ನ 3.30 ರಿಂದ 5.00 ಗಂಟೆಯವರೆಗೆ ಮತ್ತು ಶುಕ್ರವಾರ ಬೆಳಿಗೆ 11.00ರಿಂದ 12.30 ವರೆಗೆ ಹಚ್ಚಬಹುದು.

ನಿಂಬೆದೀಪವನ್ನು ಮಂಗಳವಾರ ಹಚ್ಚುವುದಕ್ಕಿಂತ ಶುಕ್ರವಾರ ಹಚ್ಚುವುದು ಬಹಳ ಶ್ರೇಷ್ಠ ಶುಕ್ರವಾರದ ದೀಪವು ಸತ್ವಗುಣದಿಂದ ಕೂಡಿರುತ್ತದೆ ಮತ್ತು ಶುಭಪ್ರದವಾಗಿರುತ್ತದೆ.

ನಿಂಬೆಹಣ್ಣಿನ ದೀಪವನ್ನು ಹಚ್ಚಿಸಿ ನಂತರ ದೇವಿಗೆ ಅಷ್ಟೋತ್ತರ ಮತ್ತು ಪೂಜೆಯನ್ನು ಮಾಡಿಸಬೇಕು. ಹೆಂಗಸರು ಪೂಜೆಯಾದ ನಂತರ ಅಲ್ಲಿಗೆ ಬಂದಿರುವ ಸುಮಂಗಲಿಯರಿಗೆ ಅರಿಶಿನ ಕುಂಕುಮಗಳನ್ನು ಕೊಟ್ಟು ನಮಸ್ಕಾರ ಮಾಡಿ ಅವರ ಆರ್ಶಿವಾದವನ್ನು ತೆಗೆದುಕೊಳ್ಳಬೇಕು.

ಯಾರಿಗೆ ಸಮಸ್ಸೆ ಬಂದಿದೆ ಅವರಿಗೆ ಹಚ್ಚುವ ಸಮಯವಿಲ್ಲದಿದ್ದರೂ ಅವರ ಮನೆಯವರು ಯಾರುಬೇಕಾದರು ದೀಪವನ್ನು ಹಚ್ಚಬಹುದು ಆದರೆ ಒಂದೇ ಮನೆಯವರು ಇಬ್ಬರು ಹೆಂಗಸರು ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು.

ನಿಂಬೆಹಣ್ಣಿನ ದೀಪವನ್ನು ಯಾವುದೇ ಕಾರಣಕ್ಕು ಆರೋಗ್ಯ ಸರಿಇಲ್ಲದಿದ್ದಾಗ, ಮೈಲಿಗೆ, ಸೂತಕ ಇರುವಾಗ ಹಚ್ಚಬಾರದು. ಮಕ್ಕಳ ಹುಟ್ಟುಹಬ್ಬ, ಮದುವೆಯಾದದಿನಗಳಂದು ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು.

ನಿಮ್ಮ ಸಮಸ್ಯೆ ಏನೇ ಇರಲಿ ಮತ್ತು ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ.

Leave a Reply

Your email address will not be published. Required fields are marked *