ನಮಸ್ತೆ ಪ್ರಿಯ ಓದುಗರೇ, ನಮ್ಮ ದೇಹದಲ್ಲಿ ರಕ್ತ ಸರಿಯಾಗಿ ಸಂಚಾರವಾಗಿ ದೇಹದ ಎಲ್ಲ ಭಾಗಗಳಿಗೆ ರಕ್ತವು ಹರಿದು ಹೋದರೆ ನಮ್ಮ ದೇಹವು ತುಂಬಾನೇ ಆಕ್ಟಿವ್ ಆಗಿ ಇರುತ್ತದೆ. ಇಂದಿನ ಲೇಖನದಲ್ಲಿ ರಕ್ತನಾಳದಲ್ಲಿ ಬಲ ಹೀನತೆ ಉಂಟಾದರೆ ಏನು ಮಾಡಬೇಕು? ಇದು ಉಂಟಾಗಲು ಕಾರಣಗಳು ಏನು?ಈ ರಕ್ತನಾಳಗಳು ಸರಿಯಾಗಿ ಕೆಲಸ ಮಾಡಲು ಮನೆಮದ್ದುಗಳು ಆದರೂ ಏನು ಅಂತ ಎಲ್ಲವನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಈ ರಕ್ತನಾಳದಲ್ಲಿ ತೊಂದರೆ ಬರಲು ಕಾರಣ ಅದರಲ್ಲಿ ಹೈ ಬಿಪಿ ಮತ್ತು ಡಯಾಬಿಟಿಸ್ ನಿಂದ ರಕ್ತನಾಳಗಳು ದುರ್ಬಲ ಆಗಬಹುದು.

ದೇಹದಲ್ಲಿ ಕೊಬ್ಬು ಕಡಿಮೆ ಆದರೆ ಅಥವಾ ಇನ್ಫೆಕ್ಷನ್ ನಿಂದ ಕೂಡ ರಕ್ತನಾಳಗಳು ತೊಂದರೆಯನ್ನು ಮಾಡುತ್ತವೆ. ಅಲ್ಲದೆ ಹಾರ್ಮೋನ್ ಅಸಮತೋಲನ ಮತ್ತು ಮಧ್ಯಪಾನ ಮತ್ತು ಧೂಮಪಾನ ಮಾಡುವುದರಿಂದ, ಆಕ್ಸಿಡೆಂಟ್ ಆದಾಗ ಮತ್ತು ವಿಟಮಿನ್ ಗಳ ಕೊರತೆ ಇಂದ ನರಗಳು ದೌರ್ಬಲ್ಯ ಆಗಬಹುದು. ಈ ಸಮಸ್ಯೆ ನಮ್ಮಲ್ಲಿ ಕಾಡುತ್ತಿದೆ ಅಂತ ಹೇಗೆ ತಿಳಿಯಬಹುದು ಅಂದ್ರೆ ನಿಮ್ಮ ಕೈ ಕಾಲುಗಳಲ್ಲಿ ಜುಂ ಅಂತ ಅನ್ನಿಸುವುದು ಮತ್ತೆ ಹಗುರವಾಗಿ ನಿಮಗೆ ತಲೆನೋವು ತಲೆಸುತ್ತುವುದು ಸ್ಪರ್ಶ ಜ್ಞಾನ ಕಡಿಮೆ ಆಗುವುದು,

ಕಿವಿ ಕೇಳುವುದಿಲ್ಲ ಮೈ ಕೈ ಕುತ್ತಿಗೆ ಭಾಗದಲ್ಲಿ ಜುಂ ಅನ್ನಿಸುವುದು, ಹೃದಯದ ಬಡಿತ ಹೆಚ್ಚಾಗುವುದು, ಮರುವು ಸಮಸ್ಯೆ ಕಾಣುವುದು ಮತ್ತೆ ಹೇಳಲಾಗದಷ್ಟು ಮೈಕೈ ನೋವು ಶುರು ಆಗುತ್ತದೆ. ಈ ಸಮಸ್ಯೆಗಳು ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗದೆ ಇದ್ದರೆ ಇವೆಲ್ಲ ಸಮಸ್ಯೆಯನ್ನು ನಾವು ಎದುರಿಸಬೇಕಾಗುತ್ತದೆ. ಹಾಗಾದ್ರೆ ಇದಕ್ಕೆ ಏನು ಪರಿಹಾರ ಇಲ್ಲವೇ? ಖಂಡಿತವಾಗಿ ಇದೆ. ನೀವು ಸುಲಭವಾಗಿ ಮನೆಯಲ್ಲಿ ಸಿಗುವ ಪದಾರ್ಥಗಳನ್ನೂ ಬಳಕೆ ಮಾಡಿಕೊಂಡು ಈ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬಹುದು.

ಹಾಗಾದ್ರೆ ಇಂದಿನ ಲೇಖನದಲ್ಲಿ ಇದಕ್ಕೆ ಒಂದು ಸೂಪರ್ ಹೋಮ್ ರೆಮೆಡಿ ತಿಳಿಸಿಕೊಡುತ್ತೇವೆ ಬನ್ನಿ. ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ. ನಂತ್ರ ದೊಡ್ಡ ಏಲಕ್ಕಿ ಅಂತ ಸಿಗುತ್ತದೆ ಅದನ್ನು ನೀವು ತೊಗೊಂಡು ಪುಡಿ ಮಾಡಿ ನೀರಿನಲ್ಲಿ ಹಾಕಿ. ನಂತ್ರ ಒಂದು ಚಕ್ಕೆಯನ್ನು ತೆಗೆದುಕೊಳ್ಳಿ ನಂತ್ರ ಲವಂಗವನ್ನು ಪುಡಿ ಮಾಡಿ ಈ ಎರಡು ಸಾಮಗ್ರಿಯನ್ನು ನೀರಿನಲ್ಲಿ ಹಾಕಿ. ಇದನ್ನು 2-4ನಿಮಿಷ ಚೆನ್ನಾಗಿ ಕುದಿಸಿ. ನಂತ್ರ ಒಂದು ಲೋಟದಲ್ಲಿ ಹಾಕಿಕೊಂಡು ಇದಕ್ಕೆ ಜೋನಿ ಬೆಲ್ಲ ಹಾಕಿ ಕುಡಿಯಬೇಕು.

ಇದನ್ನು ಬೆಳಿಗ್ಗೆ ಉಪಹಾರ ಮಾಡುವ ಮುನ್ನ ಅರ್ಧ ಗಂಟೆ ಮುಂಚಿತವಾಗಿ ತೆಗೆದುಕೊಳ್ಳಬೇಕು. ಇಲ್ಲವಾದರೆ ಊಟವನ್ನು ಮಾಡಿದ ನಂತರ ಒಂದು ಗಂಟೆ ಬಿಟ್ಟು ಗುಟುಕು ಗುಟುಕು ರೀತಿಯಲ್ಲಿ ಕುಡಿಯಬೇಕು. ಇದರಲ್ಲಿ ಬಳಕೆ ಮಾಡಿರುವ ಚಕ್ಕೆ ಲವಂಗ ಮತ್ತು ಏಲಕ್ಕಿ ಈ ಮೂರು ಪದಾರ್ಥಗಳು ಆಂಟಿ ಬಯೋಟಿಕ್ ಆಂಟಿ ಆಕ್ಸಿಡೆಂಟ್ ಆಂಟಿ ಫಂಗಲ್ ಆಂಟಿ ವೈರಲ್ ಎಲ್ಲ ಅಂಶವನ್ನು ಹೊಂದಿದೆ ಅಲ್ಲದೇ ಇದು ಜೀರ್ಣಕ್ರಿಯೆಯನ್ನು ಸರಿಯಾಗಿ ಆಗುವಂತೆ ಮಾಡುತ್ತದೆ. ನರಗಳು ಸದೃಢವಾಗಿ ಬೆಳೆಯುವಂತೆ ಮಾಡುತ್ತದೆ.

ಅದಕ್ಕಾಗಿ ಇದರಿಂದ ನಿಮ್ಮ ದೇಹದಲ್ಲಿ ಶಕ್ತಿ ಬರುತ್ತದೆ. ನಿಮ್ಮ ನರಗಳಲ್ಲಿ ನೋವು ಬರುತ್ತಿರುತ್ತದೆ ಅದೆಲ್ಲವನ್ನೂ ಕಡಿಮೆ ಮಾಡುತ್ತದೆ. ರಕ್ತನಾಳದಲ್ಲಿ ರಕ್ತವು ಸರಿಯಾಗಿ ಸಂಚಾರವಾದರೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಯನ್ನು ಹೋಗಲಾಡಿಸಲು ತುಂಬಾನೇ ಸಹಾಯ ಮಾಡುತ್ತದೆ. ನಿಮ್ಮ ನರಗಳನ್ನು ಬಲಗೊಳ್ಳುವಂತೆ ಮಾಡುತ್ತದೆ. ಇದರ ಜೊತೆಗೆ ನಾವು ನಿತ್ಯವೂ ಪೋಷಕಾಂಶ ಇರುವ ಆಹಾರವನ್ನು ಸೇವನೆ ಮಾಡಬೇಕು ನಿತ್ಯವೂ ವ್ಯಾಯಾಮ ಯೋಗಾಸನವನ್ನು ಮಾಡಬೇಕು.

Leave a Reply

Your email address will not be published. Required fields are marked *