ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ. ನಾವು ದೇವಸ್ಥಾನಕ್ಕೆ ಹೋದಾಗ ಪ್ರದಕ್ಷಿಣೆ ಹಾಕುತ್ತಿವೆ. ಆದರೆ ಈ ಪ್ರದಕ್ಷಿಣೆ ಯಾಕೆ ಹಾಕುತ್ತೇವೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಭಗವಂತನ ಬಳಿ ನಿನ್ನ ಬಿಟ್ಟರೆ ನಮ್ಮ ನ್ನು ಕಾಯುವವರು ಯಾರು ಇಲ್ಲ. ನೀನು ತೋರಿಸಿದ ಮಾರ್ಗದಲ್ಲಿ ನಡೆಯುತ್ತೇವೆ ಎಂಬುವುದು ಈ ಪ್ರದಕ್ಷಿಣೆ ಅರ್ಥ. ದೇವಸ್ಥಾನದಲ್ಲಿ ಪ್ರದಕ್ಷಿಣೆ ಎಷ್ಟು ಬಾರಿ ಮಾಡಿದರೆ ಏನು ಫಲ ಎಂಬುದನ್ನು ತಿಳಿಯೋಣ ಬನ್ನಿ. ದೇವಸ್ಥಾನದಲ್ಲಿ ಐದು ಬಾರಿ ಪ್ರದಕ್ಷಿಣೆ ಮಾಡಿದರೆ ಜಯ ಸಿಗುತ್ತದೆ.

ಏಳು ಬಾರಿ ದೇವಸ್ಥಾನಕ್ಕೆ ಪ್ರದರ್ಶನೆ ಹಾಕಿದರೆ ಶತ್ರುಗಳನ್ನು ಪರಾಜಯ ಮಾಡಬಹುದು. ಒಂಬತ್ತು ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಸಂತಾನ ಪ್ರಾಪ್ತಿಯಾಗುತ್ತದೆ. 11 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಆಯುಷ್ಯ ವೃದ್ಧಿಯಾಗುತ್ತದೆ. ದೇವಸ್ಥಾನಕ್ಕೆ 13 ಬಾರಿ ಪ್ರದಕ್ಷಿಣೆ ಹಾಕಿದರೆ ಪ್ರಾರ್ಥನೆ ಸಿದ್ಧಿಯಾಗುತ್ತದೆ. ಹದಿನೈದು ಬಾರಿ ಪ್ರದಕ್ಷಿಣೆ ಹಾಕುವುದರಿಂದ ಧನ ಪ್ರಾಪ್ತಿಯಾಗುತ್ತದೆ.

ಹಾಗೆ 17 ಬಾರಿ ಪ್ರದಕ್ಷಿಣೆ ಮಾಡಿದರೆ ಧನ ವೃದ್ದಿಯಾಗುತ್ತದೆ. 19 ಬಾರಿ ಪ್ರದಕ್ಷಿಣೆ ಸಿದರೆ ರೋಗ ನಿವಾರಣೆಯಾಗುತ್ತದೆ. ದೇವಸ್ಥಾನಕ್ಕೆ ಬೆಳಗಿನ ಜಾವ ಪ್ರದಕ್ಷಿಣೆ ಹಾಕಿದರೆ ರೋಗ ನಿವಾರಣೆಯಾಗುತ್ತದೆ. ಮಧ್ಯಾಹ್ನ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ವೃದ್ಧಿಯಾಗುತ್ತದೆ. ಸಂಜೆ ಸಮಯದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಪಾಪ ದೂರವಾಗುತ್ತದೆ. ಹಾಗೆ ರಾತ್ರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಮೋಕ್ಷ ಸಿದ್ಧಿಯಾಗುತ್ತದೆ. ಈ ಮಾಹಿತಿ ಕೊನೆಯವರೆಗೂ ಓದುವುದಕ್ಕಾಗಿ ಧನ್ಯವಾದಗಳು ಇನ್ನೂ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ಶೇರ್ ಮಾಡಿ ಫ್ರೆಂಡ್ಸ್.

Leave a Reply

Your email address will not be published. Required fields are marked *